ಮಣಿಪಾಲ: ಅಂಧರ ಏಶ್ಯನ್ ಚೆಸ್ ಆರಂಭ
Team Udayavani, Mar 23, 2017, 12:32 PM IST
- ಎಂಐಟಿ ಅಮೃತ ಮಹೋತ್ಸವದ ಸವಿನೆನಪಿನ ಪಂದ್ಯಾವಳಿ
- ಭಾರತ, ಬಾಂಗ್ಲಾದೇಶ, ಲಂಕಾ, ಒಮಾನ್ ಸ್ಪರ್ಧಿಗಳು ಭಾಗಿ
- ಗುರುವಾರದಿಂದ ಸ್ಪರ್ಧೆ ಆರಂಭ; ಮಾ. 31ಕ್ಕೆ ಸಮಾರೋಪ
ಉಡುಪಿ: ಅಂಧರ ಚೆಸ್ ಕ್ರೀಡಾಳುಗಳಿಗೆ ಸರಕಾರ ಯಾವುದೇ ರೀತಿಯ ಸಹಕಾರ ನೀಡುತ್ತಿಲ್ಲ. ನಾವು ಕೂಡ ಪದಕ ಗೆದ್ದು ತರುತ್ತೇವೆ. ಭಾರತದ ಕೀರ್ತಿ ಪತಾಕೆಯನ್ನು ಎತ್ತರಕ್ಕೇರಿಸಿದರೂ ಯಾವುದೇ ಮನ್ನಣೆ ನೀಡುತ್ತಿಲ್ಲ. ಬೇರೆ ಕ್ರೀಡೆಗಳಲ್ಲಿ ಗೆದ್ದು ಬಂದರೆ ಭರ್ಜರಿ ಸ್ವಾಗತ ಸಿಕ್ಕರೆ, ನಮ್ಮವರನ್ನು ಕಣ್ಣೆತ್ತಿ ನೋಡುವುದೂ ಇಲ್ಲ ಎಂದು ಅಖೀಲ ಭಾರತ ಅಂಧರ ಚೆಸ್ ಒಕ್ಕೂಟದ ಅಧ್ಯಕ್ಷ ಚಾರುದತ್ತ ಜಾಧವ್ ಹೇಳಿದ್ದಾರೆ.
ಎಂಐಟಿಯ ಅಮೃತ ಮಹೋತ್ಸವದ ಅಂಗವಾಗಿ ಮಣಿಪಾಲ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಅಂಧರ ಚೆಸ್ ಒಕ್ಕೂಟ, ಅಖೀಲ ಭಾರತ ಅಂಧರ ಚೆಸ್ ಒಕ್ಕೂಟ, ಯುಪಿಸಿಎಲ್ ಸಹಭಾಗಿತ್ವದೊಂದಿಗೆ ಮಣಿಪಾಲದ ಡಾ| ಟಿ.ಎಂ.ಎ. ಪೈ ಸಭಾಂಗಣ ದಲ್ಲಿ ಬುಧವಾರ ದೃಷ್ಟಿದೋಷವುಳ್ಳವರ ಅಂತಾ ರಾಷ್ಟ್ರೀಯ ಏಶ್ಯ ಫೆಸಿಫಿಕ್ ಚೆಸ್ ಪಂದ್ಯಾವಳಿಗೆ ಚಾಲನೆ ನೀಡಿ ಜಾಧವ್ ಮಾತನಾಡಿದರು. ಮಾ. 31ರ ವರೆಗೆ ಪಂದ್ಯಾವಳಿ ನಡೆಯಲಿದೆ.
ಚೆಸ್ ಒಂದು ಕ್ರೀಡೆಯಾಗಿದ್ದು, ಇಲ್ಲಿ ಸಾಮಾನ್ಯರ ಜತೆ ಅಂಧರು ಸ್ಪರ್ಧಿಸಬೇಕಿದೆ. ಇದರಿಂದ ಅವರಿಗೆ ಸಮಾನತೆಯ ಅರಿವು ಮೂಡುವುದರ ಜತೆಗೆ ಆತ್ಮವಿಶ್ವಾಸ ಇಮ್ಮಡಿ ಯಾಗುತ್ತದೆ. ಭಾರತ ತಡವಾಗಿ ಅಂಧರ ಚೆಸ್‌ನಲ್ಲಿ ಕಾಣಿಸಿಕೊಂಡರೂ ಈಗ ಉನ್ನತ ಮಟ್ಟದ ಪ್ರದರ್ಶನ ನೀಡುತ್ತಿದೆ. ಒಟ್ಟು 4 ಅಂತಾರಾಷ್ಟ್ರೀಯ ಟೂರ್ನಿ ಆಯೋಜಿಸಿದ್ದು, ಈ ಸಂಖ್ಯೆ ಇನ್ನಷ್ಟು ಹೆಚ್ಚಾದಲ್ಲಿ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರ ಸಂಖ್ಯೆಯೂ ಹೆಚ್ಚಾಗುತ್ತದೆ ಎಂದು ಜಾಧವ್ ಹೇಳಿದರು.
ಯುಪಿಸಿಎಲ್: ನಿರಂತರ ಸಹಭಾಗಿತ್ವ
ಯುಪಿಸಿಎಲ್ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ ಮಾತನಾಡಿ, ಚೆಸ್ ಒಂದು ಅದ್ಭುತ ಕ್ರೀಡೆ. ಉದ್ಯಮ, ವ್ಯವಹಾರ ಕ್ಷೇತ್ರವೂ ಒಂದು ರೀತಿಯ ಚೆಸ್ ಆಟ ಇದ್ದಂತೆ. ಇಲ್ಲಿಯೂ ಸವಾಲು, ಸಂಕಷ್ಟಗಳಿರುತ್ತವೆ. ಅಂಧರ ಚೆಸ್ ಟೂರ್ನಿ ಆಯೋಜಿಸಿರುವುದು ಒಂದು ಒಳ್ಳೆಯ ಆಲೋಚನೆ. ಮುಂದೆಯೂ ಮಣಿ ಪಾಲ ವಿ.ವಿ. ಜತೆ ಎಲ್ಲ ಕಾರ್ಯಕ್ರಮಗಳಿಗೂ ಯುಪಿಸಿಎಲ್‌ನಿಂದ ನಿರಂತರ ಸಹಭಾಗಿತ್ವ ನೀಡುತ್ತೇವೆ ಎಂದರು.
ಬೇರೆ ಕ್ರೀಡೆಗಳಿಗಿಂತ ಚೆಸ್ ಭಿನ್ನ
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಣಿಪಾಲ ವಿ.ವಿ. ಸಹ ಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್, ಚೆಸ್ ಒಂದು ಮಾನಸಿಕ ಕ್ಷಮತೆಗೆ ಸಂಬಂಧಿಸಿದ ಸ್ಪರ್ಧೆ. ಬೇರೆಲ್ಲ ಕ್ರೀಡೆಗಳಿಗಿಂತ ಚೆಸ್ ಭಿನ್ನ ಆಟ. ಈ ಕ್ರೀಡೆಗೂ ಇನ್ನಷ್ಟು ಉತ್ತೇಜನ ಕೊಡುವ ಮೂಲಕ ಶ್ರೇಷ್ಠ ಮಟ್ಟದ ಆಟಗಾರರನ್ನು ತಯಾರು ಮಾಡಬೇಕಿದೆ. ಕ್ರಿಕೆಟ್ ಹೊರತಾಗಿ ಇತರ ಕ್ರೀಡೆಗಳ ಬೆಳವಣಿಗೆ ಯತ್ತ ವಿ.ವಿ. ದೃಷ್ಟಿ ನೆಟ್ಟಿದ್ದು, ಎಲ್ಲರೂ ಮಹಿಳಾ ಕ್ರಿಕೆಟ್, ಅಂಧರ ಕ್ರಿಕೆಟ್, ಕಬಡ್ಡಿ, ಚೆಸ್ ಸಹಿತ ಇನ್ನಿತರ ಕ್ರೀಡಾಳುಗಳನ್ನು ಪ್ರೋತ್ಸಾಹಿಸಬೇಕಿದೆ ಎಂದು ಹೇಳಿದರು. ಟೂರ್ನಿಯಲ್ಲಿ ಭಾರತದ ಜತೆಗೆ ಬಾಂಗ್ಲಾ ದೇಶ, ಶ್ರೀಲಂಕಾ, ಫಿಲಿಪ್ಪೀನ್ಸ್, ಒಮಾನ್ ದೇಶದ ಸ್ಪರ್ಧಾಳುಗಳೂ ಪಾಲ್ಗೊಂಡಿದ್ದಾರೆ.
ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಮಟ್ಟ ದಲ್ಲಿ ಮಿಂಚಿದ ಅಂಧರ ಕ್ರಿಕೆಟ್ ತಂಡದ ಆಟಗಾರ ಪ್ರಕಾಶ್ ಜಯರಾಮಯ್ಯ ಹಾಗೂ ವಿಶೇಷ ಪ್ರತಿಭೆಯುಳ್ಳ ಚೆಸ್ ತಾರೆ ಸಮರ್ಥ್ ಜೆ. ರಾವ್ ಅವರನ್ನು ಸಮ್ಮಾನಿಸಲಾಯಿತು.
ಅಂತಾರಾಷ್ಟ್ರೀಯ ಅಂಧರ ಚೆಸ್ ಒಕ್ಕೂಟದ ಖಜಾಂಚಿ ಸಮಯೋ ಅರ್ನಾದನ್, ರಾಜ್ಯ ಅಂಧರ ಚೆಸ್ ಒಕ್ಕೂಟದ ಅಧ್ಯಕ್ಷ ಅಧ್ಯಕ್ಷ ಅನಂತ್ ಡಿ. ಪಿ., ಉಜ್ವಲ್ ಡೆವಲಪರ್ನ ಪುರುಷೋತ್ತಮ್ ಶೆಟ್ಟಿ, ಯುನೈಟೆಡ್ ಕರ್ನಾಟಕ ಚೆಸ್ ಅಸೋಸಿಯೇಶನ್ ಉಪಾಧ್ಯಕ್ಷ ಡಾ| ಕೆ. ರಾಜಗೋಪಾಲ… ಶೆಣೈ ಉಪಸ್ಥಿತರಿದ್ದರು.
ವಿ. ವಿ. ಕ್ರೀಡಾ ಸಮಿತಿ ಕಾರ್ಯದರ್ಶಿ ಡಾ| ವಿನೋದ್ ಸಿ. ನಾಯಕ್ ಸ್ವಾಗತಿಸಿದರು. ಸುಗಂಧಿನಿ ಕಾರ್ಯಕ್ರಮ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಗರ್ಭಿಣಿ ಪತ್ನಿ ಜತೆ ಇರಲು ರಜೆ ಕೊಡದ ಅಧಿಕಾರಿಗಳು: ಆತ್ಮ*ಹತ್ಯೆ ಮಾಡಿಕೊಂಡ ಪೊಲೀಸ್ ಕಮಾಂಡೋ
ಕಲ್ಮಕಾರು: ಅಯ್ಯಪ್ಪ ವೃತಧಾರಿ ಮೇಲೆ ಕಾಡಾನೆ ದಾಳಿ… ಆಸ್ಪತ್ರೆಗೆ ದಾಖಲು
Jogging: ಬೆಳಗಾವಿಯಲ್ಲಿ ಕಾರ್ಮಿಕ ಸಚಿವ ಸಂತೋಷ ಲಾಡ್ ನೈಟ್ ರನ್ನಿಂಗ್, ಜಾಗಿಂಗ್
Bengaluru: ಟೆಕಿ ಅತುಲ್‌ನಂತೆ ಪತ್ನಿ ಕಿರುಕುಳ ತಾಳದೆ ಕಾರ್ಮಿಕ ಆತ್ಮಹತ್ಯೆ
Udupi: ಯಕ್ಷಗಾನದಲ್ಲಿ ಭಗವದ್ಗೀತೆ ಪ್ರಯೋಗ: ಡಾ| ಪ್ರಭಾಕರ್ ಜೋಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.