ಮೂರನೇ ದಿನ ಮಹಿಳೆಯರ ಮೇಲುಗೈ; 2 ದಾಖಲೆ
ಅಗ್ರಸ್ಥಾನದಲ್ಲಿ ಮಂಗಳೂರು ವಿ.ವಿ. (86 ಅಂಕ) ; ಮದ್ರಾಸ್ ವಿ.ವಿ. ದ್ವಿತೀಯ (45 ಅಂಕ)
Team Udayavani, Jan 5, 2020, 12:02 AM IST
ಮೂಡುಬಿದಿರೆ: ಸ್ವರಾಜ್ಯ ಮೈದಾನದಲ್ಲಿ ನಡೆಯುತ್ತಿರುವ 80ನೇ ಅಖೀಲ ಭಾರತ ಅಂತರ್ ವಿ.ವಿ. ಆ್ಯತ್ಲೆಟಿಕ್ಸ್ ಕೂಟದ 3ನೇ ದಿನವಾದ ಶನಿವಾರ ಮಹಿಳೆಯರ ಪ್ರಾಬಲ್ಯಕ್ಕೆ ಸಾಕ್ಷಿಯಾಯಿತು. 20 ಕಿ.ಮೀ. ನಡಿಗೆ ಹಾಗೂ 3,000 ಮೀ. ಸ್ಟೀಪಲ್ ಚೇಸ್‌ನಲ್ಲಿ ನೂತನ ಕೂಟ ದಾಖಲೆ ನಿರ್ಮಾಣಗೊಂಡಿತು.
ನಡಿಗೆ: ಸೋನಾಲ್‌ಗೆ ಸ್ವರ್ಣ
20 ಸಾವಿರ ಮೀಟರ್ (20 ಕಿ.ಮೀ.) ನಡಿಗೆಯನ್ನು 1 ಗಂಟೆ 38 ನಿಮಿಷ, 40.49 ಸೆಕೆಂಡ್‌ಗಳಲ್ಲಿ ಕ್ರಮಿ ಸುವ ಮೂಲಕ ಉದಯ್‌ಪುರ್‌ನ ಮೋಹನ್‌ಲಾಲ್ ಸುಖಾಡಿಯಾ ವಿ.ವಿ.ಯ ಸೋನಾಲ್ ಸುಖ್‌ವಾಲ್ ನೂತನ ಕೂಟ ದಾಖಲೆ ನಿರ್ಮಿಸಿದರು. ಈ ಹಿಂದಿನ ದಾಖಲೆ ಮಹರ್ಷಿ ದಯಾನಂದ ವಿ.ವಿ.ಯ ಎಂ.ಆರ್. ರವೀನಾ (1 ಗಂಟೆ, 43 ನಿಮಿಷ, 58.64 ಸೆ.) ಹೆಸರಿನಲ್ಲಿತ್ತು.
ದಾಖಲೆ ಮುರಿದರೂ 4ನೇ ಸ್ಥಾನ!
ಮಹಿಳೆಯರ ವಿಭಾಗದ 20 ಕಿ.ಮೀ. ನಡಿಗೆಯಲ್ಲಿ ಈ ಹಿಂದಿನ ದಾಖಲೆ ಹೊಂದಿದ್ದ ಮಹರ್ಷಿ ದಯಾನಂದ ವಿ.ವಿ.ಯ ಎಂ.ಆರ್. ರವೀನಾ ಅವರು ಈ ಹಿಂದಿಗಿಂತ (1 ಗಂ., 43 ನಿ., 58.64 ಸೆ.) ಈ ಬಾರಿ ತಮ್ಮ ಸಾಮರ್ಥ್ಯ ವೃದ್ಧಿಸಿದರಾದರೂ 4ನೇ ಸ್ಥಾನಕ್ಕೆ ತೃಪ್ತರಾಗಬೇಕಾಯಿತು (1 ಗಂ., 43 ನಿ., 27.74 ಸೆ.).
ಸ್ಟೀಪಲ್ ಚೇಸ್ ದಾಖಲೆ
ಮಹಿಳೆಯರ ವಿಭಾಗದ 3,000 ಮೀ. ಸ್ಟೀಪಲ್ ಚೇಸ್‌ನಲ್ಲಿ ಪುಣೆಯ ಸಾವಿತ್ರಿ ಬಾಯಿ ಫುಲೆ ವಿ.ವಿ.ಯ ಕೋಮಲ್ ಜಗದಾಲೆ ನೂತನ ಕೂಟ ದಾಖಲೆ (10 ನಿ., 23.658 ಸೆ.) ನಿರ್ಮಿಸಿದರು. ಅವರು ಮಂಗಳೂರು ವಿ.ವಿ.ಯ ಭಗತ್ ಶೀತಲ್ ಜಾಮಜಿ (10 ನಿ. 34.53 ಸೆ.) ಹೆಸರಲ್ಲಿದ್ದ ಹಿಂದಿನ ದಾಖಲೆಯನ್ನು ಅಳಿಸಿದರು. ಮೆಹಬೂಬ್‌ನಗರದ ಪಲಿಮೂರ್ ವಿ.ವಿ.ಯ ಜಿ. ಮಹೇಶ್ವರಿ (10 ನಿ 54.961 ಸೆ.) ಬೆಳ್ಳಿ ಹಾಗೂ ಮಂಗಳೂರು ವಿ.ವಿ.ಯ ಜ್ಯೋತಿ ಜಗ್‌ಬಹದ್ಧೂರ್ ಚೌಹಾರ್ (11 ನಿ., 3.246 ಸೆ.) ಕಂಚಿನ ಪದಕ ಗೆದ್ದರು.
ಅಂದು ಕಂಚು, ಇಂದು ಚಿನ್ನ
“ಕಳೆದ ವರ್ಷ ತೀವ್ರ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಕಾರಣ ಕಂಚಿನ ಪದಕವನ್ನಷ್ಟೇ ಗೆಲ್ಲಲು ಸಾಧ್ಯವಾಗಿತ್ತು. ಆದರೆ ಈ ಬಾರಿ ಕಠಿನ ಪರಿಶ್ರಮ, ನಿರ್ದಿಷ್ಟ ಗುರಿಯ ಪರಿಣಾಮ ಚಿನ್ನ ಗೆದ್ದಿರುವೆ’ ಎಂದು ಕೋಮಲ್ ಜಗದಾಲೆ ಪ್ರತಿಕ್ರಿಯಿಸಿದರು.
ಮೂರನೇ ದಿನವೂ
ಮಂಗಳೂರು ವಿ.ವಿ. ಮುಂದೆ
ಮೂರನೇ ದಿನವೂ ಮಂಗಳೂರು ವಿ.ವಿ. ಅಗ್ರಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ (86 ಅಂಕ). ಮದ್ರಾಸ್ ವಿ.ವಿ. 45 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ಹರ್ಯಾಣದ ಮಹರ್ಷಿ ದಯಾನಂದ ವಿ.ವಿ. 29 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. 2ನೇ ದಿನ ಮದ್ರಾಸ್ ವಿ.ವಿ. ಹಾಗೂ ಮಹರ್ಷಿ ದಯಾನಂದ ವಿ.ವಿ. 28 ಅಂಕಗಳೊಂದಿಗೆ ಜಂಟಿ 2ನೇ ಸ್ಥಾನದಲ್ಲಿದ್ದವು.
3ನೇ ದಿನದ ಫಲಿತಾಂಶ ವಿವರ
20ಕಿ.ಮೀ. ನಡಿಗೆ ಸ್ಪರ್ಧೆ (ಮಹಿಳೆಯರ ವಿಭಾಗ)
1. ಸೋನಲ್ ಸುಖ್‌ವಾಲ್ (1 ಗಂಟೆ, 38ನಿ, 40.49 ಸೆ.), ಮೋಹನ್‌ಲಾಲ್ ಸುಖಾಡಿಯಾ ವಿ.ವಿ. ಉದಯ್‌ಪುರ್, ನೂತನ ಕೂಟ ದಾಖಲೆ.
2. ರಾಖೀ ಕುಷಾºಲ (1 ಗಂ.,41ನಿ. 09.752 ಸೆ.), ಪ್ರೊ| ರಾಜೇಂದ್ರ ಸಿಂಗ್ ವಿ.ವಿ.
3. ಬಂದನ್ ಪಾಟೀಲ್ (1 ಗಂಟೆ, 42 ನಿ. 57.622 ಸೆ.), ಮಂಗಳೂರು ವಿ.ವಿ.
3000 ಮೀ. ಸ್ಟೀಪಲ್ ಚೇಸ್ (ಮಹಿಳೆಯರ ವಿಭಾಗ)
1. ಕೋಮಲ್ ಜಗದಾಲೆ (10 ನಿ. 23.658 ಸೆ.), ಸಾವಿತ್ರಿಬಾಯಿ ಫುಲೆ ವಿ.ವಿ.
2. ಜಿ. ಮಹೇಶ್ವರಿ (10 ನಿ., 54.961 ಸೆ.), ಪಲಮೂರ್ ವಿ.ವಿ. ಮೆಹಬೂಬ್‌ನಗರ್.
3. ಜ್ಯೋತಿ ಜಗ್‌ಬಹದ್ಧೂರ್ ಚೌಹಾರ್, (11 ನಿ., 3.246 ಸೆ.), ಮಂಗಳೂರು ವಿ.ವಿ.
400 ಮೀ. ಓಟ (ಮಹಿಳೆಯರ ವಿಭಾಗ)
1. ಪಿ. ಒ. ಸಯನಾ (54.574 ಸೆ.), ಕೇರಳ ವಿ.ವಿ.
2. ಜ್ಯೋತಿಕಾಶ್ರೀ ಬಿ. (54.703 ಸೆ.), ಕೃಷ್ಣ ವಿ.ವಿ. ಮಚಿÉಪಟ್ನಂ.
3. ಗುಗ್ ಕೌರ್ (55.517 ಸೆ.), ಪಂಚಾಬ್ ವಿ.ವಿ. ಚಂಡೀಗಢ.
ಎತ್ತರ ಜಿಗಿತ (ಮಹಿಳೆಯರ ವಿಭಾಗ)
1. ಗ್ರೇಸಿನಾ, (1.77 ಮೀ.), ಎಂ.ಎಸ್. ವಿ.ವಿ. ತಿರುನಲ್ವೇಲಿ.
2. ಜಿಷ್ಣಾ ಎಂ. (1.77 ಮೀ.), ಕ್ಯಾಲಿಕಟ್ ವಿ.ವಿ.
3. ಗಾಯತ್ರಿ ಶಿವಕುಮಾರ್ (1.73 ಮೀ.) ಮಹಾತ್ಮಾಗಾಂಧಿ ವಿ.ವಿ. ಕೊಟ್ಟಾಯಂ.
400 ಮೀ. ಓಟ (ಪುರುಷರ ವಿಭಾಗ)
1. ರಾಜೇಶ್ ಆರ್. (46.938 ಸೆ.), ಮದ್ರಾಸ್ ವಿ.ವಿ.
2. ಜಶನ್‌ಪ್ರೀತ್ ಸಿಂಗ್ (47.856 ಸೆ.), ಲವಿÉ ಪ್ರೊಫೆಶನಲ್ ವಿ.ವಿ.
3. ಪರಮ್‌ವೀರ್ ಸಿಂಗ್ (47.906 ಸೆ.), ಲವಿÉ ಪ್ರೊಫೆಶನಲ್ ವಿ.ವಿ.
ಚಕ್ರ ಎಸೆತ (ಪುರುಷರ ವಿಭಾಗ)
1. ಭಾನು ಶರ್ಮ (51.48 ಮೀ.), ರಾಜಸ್ಥಾನ್ ವಿ.ವಿ.
2. ಅಂಕಿತ್ ದಹಿಯ (50.98 ಮೀ.), ಡಿ .ಎ.ವಿ. ವಿ.ವಿ. ಜಲಂಧರ್-2.
3. ಪ್ರವೀಣ್ ಕುಮಾರ್ ಮೆಹೆರ (50.75 ಮೀ.) ಮಹಾರಾಜ ಗಂಗಾಸಿಂಗ್ ವಿ.ವಿ. ಬಿಕಾನೇರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NZvsENG: ಭರ್ಜರಿ ಕಮ್‌ಬ್ಯಾಕ್ ಮಾಡಿದ ಕೇನ್ ವಿಲಿಯಮ್ಸನ್
IPL 2024: ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್ ಬೇಡಿಕೆ
Mumbai Cricket: ಸಚಿನ್ ತೆಂಡೂಲ್ಕರ್ ಸಲಹೆಯನ್ನೂ ನಿರ್ಲಕ್ಷಿಸಿದರಾ ಪೃಥ್ವಿ ಶಾ..
IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.