ಮೂರನೇ ಟ್ವೆಂಟಿ-20; ವಿಂಡೀಸ್ ಜಯಭೇರಿ
Team Udayavani, Apr 3, 2017, 2:45 PM IST
ಪೋರ್ಟ್ ಆಫ್ ಸ್ಪೇನ್: ಆಲ್‌ರೌಂಡ್ ಆಟದ ಪ್ರದರ್ಶನ ನೀಡಿದ ಟ್ವೆಂಟಿ-20 ವಿಶ್ವ ಚಾಂಪಿಯನ್ ವೆಸ್ಟ್‌ಇಂಡೀಸ್ ತಂಡವು ಪ್ರವಾಸಿ ಪಾಕಿಸ್ಥಾನ ವಿರುದ್ಧದ ಮೂರನೇ ಟ್ವೆಂಟಿ-20 ಪಂದ್ಯದಲ್ಲಿ 7 ವಿಕೆಟ್ ಅಂತರದ ಭರ್ಜರಿ ಜಯ ದಾಖಲಿಸಿದೆ. ಈ ಗೆಲುವಿನಿಂದ ವಿಂಡೀಸ್ ನಾಲ್ಕು ಪಂದ್ಯಗಳ ಸರಣಿಯನ್ನು ಜೀವಂತವಿರಿಸಿಕೊಂಡಿದೆ.
ಸರಣಿ ನಿರ್ಣಾಯಕ ನಾಲ್ಕನೇ ಪಂದ್ಯ ರವಿವಾರ ತಡರಾತ್ರಿ ನಡೆಯಲಿದೆ. ಸರಣಿಯಲ್ಲಿ 2-1 ಮುನ್ನಡೆಯಲ್ಲಿರುವ ಪಾಕಿಸ್ಥಾನ ಗೆದ್ದರೆ ಸರಣಿ ತನ್ನದಾಗಿಸಿಕೊಳ್ಳಲಿದೆ. ಒಂದು ವೇಳೆ ವೆಸ್ಟ್‌ಇಂಡೀಸ್ ಗೆದ್ದರೆ ಸರಣಿ ಸಮಬಲದಲ್ಲಿ ಅಂತ್ಯಗೊಳ್ಳಲಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ಥಾನ ತಂಡವು ವಿಂಡೀಸ್‌ನ ದಾಳಿಗೆ ಕುಸಿದು 9 ವಿಕೆಟಿಗೆ 137 ರನ್ ಗಳಿಸಲಷ್ಟೇ ಶಕ್ತವಾಯಿತು. ಇದಕ್ಕುತ್ತರವಾಗಿ ಆರಂಭಿಕ ಎವಿನ್ ಲೂವಿಸ್ ಅವರ ಭರ್ಜರಿ ಆಟದಿಂದಾಗಿ ವೆಸ್ಟ್‌ಇಂಡೀಸ್ ತಂಡವು 14.5 ಓವರ್‌ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು. ಇಂತಹ ಬ್ಯಾಟಿಂಗ್ ನಿರ್ವಹಣೆಯನ್ನು ತವರಿನ ಅಭಿಮಾನಿಗಳು ನಿರೀಕ್ಷಿಸಿದ್ದರು.
ಎರಡು ದಿನಗಳ ಹಿಂದೆ ನಡೆದ ದ್ವಿತೀಯ ಪಂದ್ಯದಲ್ಲಿ ಗೆಲ್ಲಲು ಇದಕ್ಕಿಂತ ಐದು ರನ್ ಹೆಚ್ಚಿಗೆ ಇದ್ದರೂ ವಿಂಡೀಸ್ ಯಶಸ್ಸು ಸಾಧಿಸಿರಲಿಲ್ಲ. ಆದರೆ ನಿರ್ಣಾಯಕ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಎವಿನ್ ಲೂವಿಸ್ ತಂಡಕ್ಕೆ ಅಮೋಘ ಜಯ ತಂದುಕೊಟ್ಟರು. ಪಾಕ್ ದಾಳಿಯನ್ನು ಏಕಾಂಗಿಯಾಗಿ ಎದುರಿಸಿದ ಅವರು ಕೇವಲ 51 ಎಸೆತಗಳಿಂದ 91 ರನ್ ಸಿಡಿಸಿದರು. 5 ಬೌಂಡರಿ ಮತ್ತು 9 ಸಿಕ್ಸರ್ ಬಾರಿಸಿದ ಅವರು ಗೆಲುವಿಗೆ 4 ರನ್ ಇರುವಾಗ ಔಟಾದರು.
ಮೊದಲ ವಿಕೆಟ್ ಬೇಗನೇ ಉರುಳಿದರೂ ಲೂವಿಸ್ ಮತ್ತು ಮಾರ್ಲಾನ್ ಸಾಮ್ಯುಯೆಲ್ಸ್ ದ್ವಿತೀಯ ವಿಕೆಟಿಗೆ 56 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡರು ಆಬಳಿಕ ಲೂವಿಸ್ ಅವರು ಜಾಸನ್ ಮೊಹಮ್ಮದ್ ಜತೆ ಮೂರನೇ ವಿಕೆಟಿಗೆ 76 ರನ್ ಪೇರಿಸಿದರು. ಇದರಲ್ಲಿ ಮೊಹಮ್ಮದ್ ಕೊಡುಗೆ ಕೇವಲ 17 ರನ್ ಮಾತ್ರ.
ಈ ಮೊದಲು ವಿಂಡೀಸ್‌ನ ನಿಖರ ದಾಳಿಗೆ ರನ್ ಗಳಿಸಲು ಒದ್ದಾಡಿದ ಪಾಕಿಸ್ಥಾನ ಆಗಾಗ್ಗೆ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ಕಮ್ರಾನ್ ಅಕ್ಮಲ್, ಬಾಬರ್ ಅಜಮ್ ಮತ್ತು ಫಖಾರ್ ಜಮಾನ್ ಮಾತ್ರ ಎರಡಂಕೆಯ ಮೊತ್ತ ಗಳಿಸಿದರು. ಕಮ್ರಾನ್ ಅಕ್ಮಲ್ ಮತ್ತು ಬಾಬರ್ ಅಜಮ್ ಮೂರನೇ ವಿಕೆಟಿಗೆ 88 ರನ್ ಪೇರಿಸಿದ್ದರಿಂದ ತಂಡದ ಮೊತ್ತ ನೂರರ ಗಡಿ ದಾಟುವಂತಾಯಿತು.
ಸ್ಕೋರ್ ಪಟ್ಟಿ
ಪಾಕಿಸ್ಥಾನ
ಅಹ್ಮದ್ ಶೆಹಜಾದ್ ಬಿ ಬದ್ರಿ 4
ಕಮ್ರಾನ್ ಅಕ್ಮಲ್ ಸಿ ಸಿಮನ್ಸ್ ಬಿ ಸಾಯ್ಯುವೆಲ್ಸ್ 48
ಇಮದ್ ವಸೀಮ್ ಸ್ಟಂಪ್ಡ್ ವಾಲ್ಟನ್ ಬಿ ಬದ್ರಿ 0
ಬಾಬರ್ ಅಜಮ್ ಬಿ ನಾರಾಯಣ್ 43
ಶೋಯಿಬ್ ಮಲಿಕ್ ಸಿ ಲೂವಿಸ್ ಬಿ ಬ್ರಾತ್‌ವೇಟ್ 2
ಫಖಾರ್ ಜಮಾನ್ ರನೌಟ್ 21
ಸಫìರಾಜ್ ಅಹ್ಮದ್ ರನೌಟ್ 3
ವಹಾಬ್ ರಿಯಾಜ್ ಸಿ ಪೊಲಾರ್ಡ್ ಬಿ ವಿಲಿಯಮ್ಸ್ 1
ಸೊಹೈಲ್ ತನ್ವೀರ್ ಔಟಾಗದೆ 2
ಶಾದಾಬ್ ಖಾನ್ ಔಟಾಗದೆ 3
ಇತರ: 10
ಒಟ್ಟು (20 ಓವರ್‌ಗಳಲ್ಲಿ 8 ವಿಕೆಟಿಗೆ) 137
ವಿಕೆಟ್ ಪತನ: 1-4, 2-4, 3-92, 4-95, 5-115, 6-124, 7-130, 8-132
ಬೌಲಿಂಗ್:
ಸಾಮ್ಯುಯೆಲ್ ಬದ್ರಿ 4-0-22-2
ಜಾಸನ್ ಹೋಲ್ಡರ್ 4-0-26-0
ಕೇಸ್ರಿಕ್ ವಿಲಿಯಮ್ಸ್ 4-0-21-1
ಕಾರ್ಲೋಸ್ ಬ್ರಾತ್‌ವೇಟ್ 3-0-15-1
ಸುನೀಲ್ ನಾರಾಯಣ್ 3-0-34-1
ಮಾರ್ಲಾನ್ ಸಾಮ್ಯುಯೆಲ್ಸ್ 2-0-11-1
ವೆಸ್ಟ್‌ಇಂಡೀಸ್
ಎವಿನ್ ಲೂವಿಸ್ ಸಿ ವಹಾಬ್ ಬಿ ಶಾದಾಬ್ 91
ಚಾದ್ವಿಕ್ ವಾಲ್ಟನ್ ಸಿ ಜಮಾನ್ ಬಿ ತನ್ವೀರ್ 1
ಎಂ. ಸಾಮ್ಯುಯೆಲ್ಸ್ ಸಿ ಇಮದ್ ಬಿ ವಹಾಬ್ 18
ಜಾಸನ್ ಮೊಹಮ್ಮದ್ ಔಟಾಗದೆ 17
ಲೆಂಡ್ಲ್ ಸಿಮನ್ಸ್ ಔಟಾಗದೆ 4
ಇತರ: 7
ಒಟ್ಟು (14.5 ಓವರ್‌ಗಳಲ್ಲಿ 3 ವಿಕೆಟಿಗೆ) 138
ವಿಕೆಟ್ ಪತನ: 1-2, 2-58, 3-134
ಬೌಲಿಂಗ್:
ಇಮದ್ ವಸೀಮ್ 3-0-20-0
ಸೊಹೈಲ್ ತನ್ವೀರ್ 3-0-40-1
ಹಸನ್ ಅಲಿ 2-0-20-0
ಶಾದಾಬ್ ಖಾನ್ 3.5-0-38-1
ವಹಾಬ್ ರಿಯಾಜ್ 2-0-6-1
ಶೋಯಿಬ್ ಮಲಿಕ್ 1-0-11-0
ಪಂದ್ಯಶ್ರೇಷ್ಠ: ಎವಿನ್ ಲೂವಿಸ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.