ಪರ್ತ್‌ನಲ್ಲಿ ಭಾರತ-ಆಸ್ಟ್ರೇಲಿಯ ಪಂದ್ಯವಿಲ್ಲ
Team Udayavani, Sep 7, 2020, 6:14 PM IST
ಸಾಂದರ್ಭಿಕ ಚಿತ್ರ
ಮೆಲ್ಬರ್ನ್: ವರ್ಷಾಂತ್ಯದಲ್ಲಿ ಆಸ್ಟ್ರೇಲಿಯ ಕ್ರಿಕೆಟ್ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡಕ್ಕೆ ಕ್ವಾರಂಟೈನ್ ಬಿಸಿ ತೀವ್ರವಾಗಿಯೇ ತಟ್ಟಲಿದೆ. ಹೀಗಾಗಿ ಪರ್ತ್ ಬದಲು ಅಡಿಲೇಡ್ ಅಥವಾ ಬ್ರಿಸ್ಬೇನ್‌ನಲ್ಲಿ ಈ ಸರಣಿ ಆರಂಭವಾಗುವ ಸಾಧ್ಯತೆ ದಟ್ಟವಾಗಿದೆ.
ವೆಸ್ಟರ್ನ್ ಆಸ್ಟ್ರೇಲಿಯದಲ್ಲಿ ಕೋವಿಡ್-19 ಕ್ವಾರಂಟೈನ್ ನಿಯಮ ಆಸ್ಟ್ರೇಲಿಯದ ಉಳಿದೆಲ್ಲ ಪ್ರಾಂತ್ಯಗಳಿಗಿಂತ ಹೆಚ್ಚು ಕಟ್ಟುನಿಟ್ಟಿನಿಂದ ಕೂಡಿದೆ. ಇದನ್ನು ಯಾವುದೇ ಕಾರಣಕ್ಕೆ ಸಡಿಲಿಸಲು ಸಾಧ್ಯವಿಲ್ಲ ಎಂದು ರಾಜ್ಯ ಸರಕಾರ ಸ್ಪಷ್ಟಪಡಿಸಿದೆ. ಹೀಗಾಗಿ ಇದರ ರಾಜಧಾನಿಯಾದ ಪರ್ತ್‌ನಲ್ಲಿ ಈ ಸರಣಿಯ ಪಂದ್ಯ ನಡೆಯುವ ಸಾಧ್ಯತೆ ದೂರವಾಗಿದೆ.
ಒಂದು ವೇಳೆ ಮೆಲ್ಬರ್ನ್ನಲ್ಲಿ “ಬಾಕ್ಸಿಂಗ್ ಡೇ ಟೆಸ್ಟ್’ ನಡೆಯದೇ ಹೋದರೆ ಆಗ ಇದನ್ನು ಪರ್ತ್‌ನಲ್ಲಿ ಆಯೋಜಿಸುವುದು ಆಸ್ಟ್ರೇಲಿಯದ ಯೋಜನೆಯಾಗಿತ್ತು. ಆದರೀಗ ಅಡಿಲೇಡ್ ಓವಲ್ ಸತತ ಎರಡು ಟೆಸ್ಟ್ ಪಂದ್ಯಗಳಿಗೆ ಅಣಿಯಾಗಬೇಕಿದೆ. ಡೇ-ನೈಟ್ ಟೆಸ್ಟ್ ಪಂದ್ಯದ ಬಳಿಕ ಅದು ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನೂ ಆಯೋಜಿಸಬೇಕಾಗಬಹುದು.
ಪರ್ತ್‌ನಲ್ಲಿ ಅಭ್ಯಾಸವೂ ಇಲ್ಲ
ಭಾರತ ಮತ್ತು ಆಸ್ಟ್ರೇಲಿಯ ತಂಡಗಳ ಕೆಲವು ಆಟಗಾರರು ಐಪಿಎಲ್ ಮುಗಿಸಿ ನೇರವಾಗಿ ಯುಎಇಯಿಂದ ಕಾಂಗರೂ ನಾಡಿಗೆ ಬಂದಿಳಿಯಲಿವೆ. ಯುಎಇಯಲ್ಲಿ ಮತ್ತೂಂದು ಸುತ್ತಿನ ಕೋವಿಡ್-19 ಕೇಸ್‌ಗಳು ಕಂಡುಬರುತ್ತಿರುವುದರಿಂದ ಅಪಾಯ ಹೆಚ್ಚು ಎಂಬುದಾಗಿ ವೆಸ್ಟರ್ನ್ ಆಸ್ಟ್ರೇಲಿಯದ ಪ್ರೀಮಿಯರ್ ಮಾರ್ಕ್ ಮೆಕ್‌ಗೋವನ್ ಅಭಿಪ್ರಾಯಪಟ್ಟಿದ್ದಾರೆ.
ಎರಡೂ ತಂಡಗಳಿಗೆ ಪರ್ತ್‌ನಲ್ಲಿ ಕ್ವಾರಂಟೈನ್ ನಡೆಸಿ, ಅಭ್ಯಾಸ ಆಯೋಜಿಸಿ ಇಲ್ಲಿಂದ ಉಳಿದ ಪ್ರಾಂತ್ಯಗಳಿಗೆ ಸರಣಿಯನ್ನಾಡಲು ಕಳುಹಿಸುವುದು ಕ್ರಿಕೆಟ್ ಆಸ್ಟ್ರೇಲಿಯದ ಯೋಜನೆಯಾಗಿತ್ತು. ಸರಣಿಯ ನೂತನ ವೇಳಾಪಟ್ಟಿ ಈ ವಾರ ಬಿಡುಗಡೆಯಾಗುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Border-Gavaskar Trophy ಆರಂಭಕ್ಕೆ ಮುನ್ನ ಗಂಭೀರ್- ರಿಕಿ ಪಾಂಟಿಂಗ್ ವಾಗ್ಯುದ್ಧ
INDvsSA: ಸೆಂಚುರಿಯನ್‌ನಲ್ಲೂ ಕ್ವಿಕ್, ಬೌನ್ಸಿ ಟ್ರ್ಯಾಕ್?: ಸುಧಾರಿಸಬೇಕಿದೆ ಬ್ಯಾಟಿಂಗ್
Ranji Trophy: ಯುಪಿ ಎದುರಾಳಿ; ಕರ್ನಾಟಕಕ್ಕೆ ನಾಕೌಟ್ ಒತ್ತಡ
MUST WATCH
ಹೊಸ ಸೇರ್ಪಡೆ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.