World Cup ಗಿಂತ ಮಿಗಿಲಾದ ಖುಷಿ ಬೇರೊಂದಿಲ್ಲ: ಗಾವಸ್ಕರ್
74ಕ್ಕೆ ಕಾಲಿಟ್ಟ ದಾಖಲೆಗಳ ವೀರ
Team Udayavani, Jul 11, 2023, 7:30 AM IST
ಮುಂಬಯಿ: “1983ರ ಏಕದಿನ ವಿಶ್ವಕಪ್ ಗೆಲುವಿಗಿಂತ ಮಿಗಿಲಾದ ಸಂಭ್ರಮವನ್ನು ನಾನು ಕ್ರಿಕೆಟ್ ಬದುಕಿನಲ್ಲಿ ಕಂಡದ್ದಿಲ್ಲ. ಅಂದಿನ ಕಪಿಲ್‌ದೇವ್ ಪಡೆಯ ಸಾಹಸವನ್ನು ನೆನೆದಾಗಲೆಲ್ಲ ನಾನು ಆನಂದಬಾಷ್ಪ ಸುರಿಸುತ್ತೇನೆ…’ ಹೀಗೆಂದು ಸೋಮವಾರದ ವಿಶೇಷ ಸಂದರ್ಶನದಲ್ಲಿ ಹೇಳಿ ದವರು ಭಾರತೀಯ ಕ್ರಿಕೆಟಿನ ಬ್ಯಾಟಿಂಗ್ ದಂತಕತೆ ಸುನೀಲ್ ಮನೋಹರ್ ಗಾವಸ್ಕರ್. ಸೋಮವಾರ ಅವರ ಬರ್ತ್‌ಡೇ. ಈಗಲೂ ಯುವಕರನ್ನು ನಾಚಿಸುವ ರೀತಿಯಲ್ಲಿ ಕಾಣುವ, ಸದಾ ಚಟುವಟಿಕೆಯ ಚಿಲುಮೆಯಂತಿರುವ ಗಾವಸ್ಕರ್ 74ನೇ ವರ್ಷಕ್ಕೆ ಕಾಲಿಟ್ಟರೆಂಬುದನ್ನು ಅಚ್ಚರಿಯಲ್ಲೇ ಅರಗಿಸಿಕೊಳ್ಳಬೇಕಾಗುತ್ತದೆ.
“ನನ್ನ ಕ್ರಿಕೆಟ್ ಬಾಳ್ವೆಯಲ್ಲಿ ಇದಕ್ಕಿಂತ ಮಿಗಿಲಾದ ವಿಶೇಷ ಕ್ಷಣವಿಲ್ಲ. ಈಗಲೂ ಆ ಕ್ಷಣವನ್ನು ನೆನೆದಾಗ ನನ್ನ ಕಣ್ಣಾಲಿಗಳು ತೇವಗೊಳ್ಳುತ್ತವೆ. ಆದರೆ ಇದು ಆನಂದದ ಕಣ್ಣೀರು. ಅದು 1983ರ ವಿಶ್ವಕಪ್ ಗೆಲುವಿನ ಸಾಹಸಗಾಥೆ. ಕಪಿಲ್‌ದೇವ್ ಪ್ರುಡೆನ್ಶಿಯಲ್ ಟ್ರೋಫಿ ಎತ್ತಿದ್ದನ್ನು ಕಲ್ಪಿಸಿಕೊಳ್ಳುವುದೇ ಒಂದು ರೋಚಕ ಅನುಭವ. ಕೇವಲ ನನಗಷ್ಟೇ ಅಲ್ಲ, ನಮ್ಮೆಲ್ಲರ ಪಾಲಿಗೆ ಈ ಖುಷಿ ಸದಾ ಜೀವಂತ’ ಎಂಬುದಾಗಿ ಗಾವಸ್ಕರ್ ಹೇಳಿದರು.
“ನೀವು ಕ್ರಿಕೆಟ್‌ನಲ್ಲಿ ಏನನ್ನೂ ಸಾಧಿಸಬಹುದು. ಮುಖ್ಯವಾಗಿ ನಿಮ್ಮ ತಂಡ ಮತ್ತು ನಿಮ್ಮ ದೇಶ ಅಷ್ಟೊಂದು ಎತ್ತರಕ್ಕೆ ತಲುಪಿದಾಗ ನೀವು ಅನುಭವಿಸುವ ಖುಷಿ ಇದೆಯಲ್ಲ, ಇದನ್ನು ಅಳೆಯಲು ಸಾಧ್ಯವಿಲ್ಲ. ಹೀಗಾಗಿ 1983ರ ವಿಶ್ವಕಪ್ ಗೆಲುವು ನನ್ನ ಪಾಲಿನ ಬಹಮೂಲ್ಯ ಕ್ಷಣಗಳಾಗಿವೆ. ಇದನ್ನು ನೆನಪಿಸಿಕೊಳ್ಳುವುದರಲ್ಲಿ ಉಂಟಾಗುವ ಸಂಭ್ರಮಕ್ಕೆ ಬೇರೆ ಯಾವುದೂ ಸಾಟಿಯಲ್ಲ’ ಎಂದು ಗಾವಸ್ಕರ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.