ಸಿಂಧುಗೆ ಕೊಹ್ಲಿ, ಧೋನಿ ಡಬಲ್ಸ್ ಜತೆಗಾರರು?
Team Udayavani, May 21, 2018, 6:35 AM IST
ಹೈದರಾಬಾದ್: ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧುಗೆ ಕ್ರಿಕೆಟ್ ತಾರೆಯರಾದ ವಿರಾಟ್ ಕೊಹ್ಲಿ, ಧೋನಿ ಡಬಲ್ಸ್ ಜತೆಗಾರರಾದರೆ ಇಷ್ಟವಂತೆ. ಸ್ವತಃ ಇದನ್ನು ಸಿಂಧು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ಹೈದರಾಬಾದ್ – ಕೋಲ್ಕತಾ ನಡುವಿನ ಪಂದ್ಯ ವೀಕ್ಷಿಸಲು ಸಿಂಧು ಬಂದಿದ್ದರು. ಈ ವೇಳೆ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ. ಅಷ್ಟೇ ಅಲ್ಲ ಕೊಹ್ಲಿ, ಧೋನಿಯಿಂದ ಕಲಿಯಬೇಕಾಗಿರುವ ಸಾಕಷ್ಟು ವಿಷಯಗಳಿವೆ ಎಂದು ಸಿಂಧು ತಿಳಿಸಿದ್ದಾರೆ. ಸಿಂಧು ಸದ್ಯ ನಡೆಯುತ್ತಿರುವ ಉಬೇರ್ ಕಪ್ ಬ್ಯಾಡ್ಮಿಂಟನ್‌ನಲ್ಲಿ ಪಾಲ್ಗೊಂಡಿಲ್ಲ.