ಇವರದು ಕೊನೆಯ ಆಟ


Team Udayavani, May 30, 2019, 6:00 AM IST

x-1

ಪ್ರತಿಯೊಂದು ಸುಂದರ ಪಯಣಕ್ಕೂ ಕೊನೆ ಇದೆ. ಇದಕ್ಕೆ ಕ್ರಿಕೆಟ್‌ ಕೂಡ ಹೊರತಲ್ಲ. ಈ ಪ್ರತಿಷ್ಠಿತ ಕೂಟ ಅನೇಕ ಸ್ಟಾರ್‌ ಕ್ರಿಕೆಟಿಗರ ಪಾಲಿಗೆ ಕೊನೆಯ ವಿಶ್ವ ಸಮರವಾಗಲಿದೆ. ಇವರಲ್ಲಿ ಅನೇಕರು ಏಕದಿನ ವೃತ್ತಿಜೀವನಕ್ಕೆ ಗುಡ್‌ಬೈ ಹೇಳುವ ಸಾಧ್ಯತೆ ನಿಚ್ಚಳವಾಗಿದೆ. ಇಂಥ ಐವರು ಕ್ರಿಕೆಟಿಗರ ಕುರಿತು ಹೀಗೊಂದು ಚಿತ್ರಣ.

ಶೋಯಿಬ್‌ ಮಲಿಕ್‌ ಪಾಕಿಸ್ಥಾನ
ವಿಶ್ವಕಪ್‌ ಬಳಿಕ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿದ ಆಟಗಾರ ಪಾಕಿಸ್ಥಾನದ ಶೋಯಿಬ್‌ ಮಲಿಕ್‌. 1999ರಲ್ಲಿ ಆಫ್ಸ್ಪಿನ್ನರ್‌ ಆಗಿ ಕ್ರಿಕೆಟ್‌ ಪಯಣ ಆರಂಭ. 2 ದಶಕಗಳ ಅವಧಿಯಲ್ಲಿ ಪಾಕಿಸ್ಥಾನದ ಬ್ಯಾಟಿಂಗ್‌ ಸರದಿಯ ಬೆನ್ನೆಲುಬಾಗುತ್ತಾರೆ ಎಂಬುದನ್ನು ಯಾರು ಊಹಿಸಿರಲಿಲ್ಲ. 279 ಪಂದ್ಯಗಳಲ್ಲಿ 7,379 ರನ್‌ ಗಳಿಸಿರುವ ಮಲಿಕ್‌ ಓಪನಿಂಗ್‌ನಿಂದ ಹಿಡಿದು 10ನೇ ಆಟಗಾರನಾಗಿಯೂ ಕ್ರೀಸ್‌ಗಿಳಿದ್ದಾರೆ. ತಂಡದ ನಾಯಕತ್ವವೂ ಹುಡುಕಿಕೊಂಡು ಬಂದಿತ್ತು. ತಂಡದ ಕೆಲವು ಆಟಗಾರರೊಂದಿಗೆ ಅಂತಃಕಲಹದಲ್ಲಿ ಭಾಗಿಯಾಗಿ ಪಿಸಿಬಿಯಿಂದ ಕೆಲವು ತಿಂಗಳು ನಿಷೇಧಕ್ಕೂ ಒಳಗಾಗಿದ್ದರು. ಮಧ್ಯಮ ಸರದಿಯಲ್ಲಿ ತಂಡಕ್ಕೆ ಆಧಾರವಾಗಬೇಕಿರುವ ಮಲಿಕ್‌ ತಂಡವೂ ವಿಶ್ವಕಪ್‌ ಗೆದ್ದಿಲ್ಲ. ಅವರ ಆಸೆ ಕೊನೆಯ ಅವಕಾಶದಲ್ಲಿ ಈಡೇರೀತೇ ಎಂಬುದೊಂದು ಪ್ರಶ್ನೆ.
ವರ್ಷ 39
ಪದಾರ್ಪಣೆ 1999
ಏಕದಿನ 281
ಒಟ್ಟು ರನ್‌ 9727
1 ದ್ವಿಶತಕ 215 ರನ್‌

ಕ್ರಿಸ್‌ಗೇಲ್‌ ವೆಸ್ಟ್‌ಇಂಡೀಸ್‌
ಸ್ಫೋಟಕ ಬ್ಯಾಟಿಂಗ್‌ ಶೈಲಿಯಿಂದ ವಿಶ್ವದಲ್ಲೆಡೆ ಅಪಾರ ಅಭಿಮಾನಿಗಳನ್ನು ಗಳಿಸಿರುವ ಕೆರಿಬಿಯನ್‌ ದೈತ್ಯ ಕ್ರಿಸ್‌ ಗೇಲ್‌. “ಯುನಿವರ್ಸಲ್‌ ಬಾಸ್‌’ ಎಂದೇ ಖ್ಯಾತಿ ಪಡೆದಿರುವ ಗೇಲ್‌ ಈಗಾಗಲೇ ಏಕದಿನ ಕ್ರಿಕೆಟಿಗೆ ಗುಡ್‌ಬೈ ಹೇಳುವ ಕುರಿತು ತುಟಿ ಬಿಚ್ಚಿದ್ದಾರೆ. 39 ವರ್ಷದ ಗೇಲ್‌ 1999ರಲ್ಲಿ ಭಾರತದ ವಿರುದ್ಧ ಆಡುವ ಮೂಲಕ ಕ್ರಿಕೆಟ್‌ ಲೋಕಕ್ಕೆ ಕಾಲಿಟ್ಟವರು. ಇಂದು ವಿಂಡೀಸ್‌ ಕ್ರಿಕೆಟ್‌ ಇತಿಹಾಸದ ಅತ್ಯಂತ ಯಶಸ್ವಿ ಆಟಗಾರ. ಇಲ್ಲಿಯವರೆಗೆ 281 ಏಕದಿನ ಪಂದ್ಯಗಳನ್ನಾಡಿರುವ ಗೇಲ್‌ 9,727 ರನ್‌ ಬಾರಿಸಿದ್ದಾರೆ. ವಿಂಡೀಸ್‌ ಪರ ಪಂದ್ಯವೊಂದರಲ್ಲಿ ದ್ವಿಶತಕ ಬಾರಿಸಿದ ಏಕೈಕ ಆಟಗಾರ (ಜಿಂಬಾಬ್ವೆ ವಿರುದ್ಧ 215 ರನ್‌). ವಿಂಡೀಸ್‌ ಕ್ರಿಕೆಟ್‌ ಮಂಡಳಿ ಜತೆಗಿನ ತಾರತಮ್ಯದಿಂದ ಸಾಕಷ್ಟು ನಷ್ಟ ಮಾಡಿಕೊಂಡಿದ್ದಾರೆ. ಆದರೆ ವಿಶ್ವಕಪ್‌ಗೆ ಆಯ್ಕೆಯಾಗಿದ್ದಾರೆ. ದುರಂತವೆಂದರೆ, ಗೇಲ್‌ ಇನ್ನೂ ವಿಶ್ವಕಪ್‌ ಗೆಲುವಿನ ಸಂಭ್ರಮ ಆಚರಿಸಿಲ್ಲ. ಹೋಲ್ಡರ್‌ ಪಡೆ ಈ ಜಮೈಕನ್‌ ದೈತ್ಯನಿಗೆ ವಿಶ್ವಕಪ್‌ ಅರ್ಪಿಸೀತೇ? ಕುತೂಹಲ ಸಹಜ.
ವರ್ಷ 37
ಪದಾರ್ಪಣೆ 1999
ಏಕದಿನ 284
ಒಟ್ಟು ರನ್‌ 7526
ಶತಕ 09

ಡೇಲ್‌ ಸ್ಟೇನ್‌ ದಕ್ಷಿಣ ಆಫ್ರಿಕಾ
ಈಗಾಗಲೇ ಸತತ ಫಿಟ್‌ನೆಸ್‌ ಸಮಸ್ಯೆಯಿಂದ ಬಳಲುತ್ತಿರುವ ದಕ್ಷಿಣ ಆಫ್ರಿಕಾ ತಂಡದ ವೇಗಿ ಡೇಲ್‌ ಸ್ಟೇನ್‌ ಕೂಡ ವಿಶ್ವಕಪ್‌ ಅನಂತರ ಏಕದಿನ ಕ್ರಿಕೆಟಿಗೆ ವಿದಾಯ ಹೇಳುವುದು ಖಾತ್ರಿಯಾಗಿದೆ. ಅಲನ್‌ ಡೊನಾಲ್ಡ್‌, ಶಾನ್‌ ಪೊಲಾಕ್‌ ಅವರಂತಹ ಉತ್ತಮ ಬೌಲರ್‌ಗಳನ್ನು ಹೊಂದಿರುವ ತಂಡದಲ್ಲಿ ಸ್ಟೇನ್‌ ಕೂಡ ಒಬ್ಬರಾಗಿ ಗುರುತಿಸಿಕೊಂಡ ಸಾಧಕ. ಆದರೆ 2013ರಿಂದ ಒಂದಲ್ಲ ಒಂದು ಆರೋಗ್ಯ ಸಮಸ್ಯೆಗೆ ಸಿಲುಕಿ ಒದ್ದಾಡುತ್ತಿದ್ದಾರೆ. ವಿಶ್ವಕಪ್‌ ಆರಂಭಕ್ಕೂ ಮುನ್ನ ಸಂಪೂರ್ಣ ಫಿಟ್‌ನೆಸ್‌ಗೆ ಮರಳುವುದೇ ಸ್ಟೇನ್‌ಗೆ ಸವಾಲಾಗಿದೆ. ಸ್ಟೇನ್‌ ಕೂಟದ ನಡುವೆ ಮತ್ತೆ ಗಾಯಾಳಾಗದಿರಲಿ ಎಂಬುದು ಅಭಿಮಾನಿಗಳ ಆಶಯ.
ವರ್ಷ 36
ಪದಾರ್ಪಣೆ 2005
ಏಕದಿನ 125
ವಿಕೆಟ್‌ 196
ಅತ್ಯುತ್ತಮ 39ಕ್ಕೆ 6

ಲಸಿತ ಮಾಲಿಂಗ ಶ್ರೀಲಂಕಾ
ಶ್ರೀಲಂಕಾ ತಂಡದ ಬೌಲರ್‌ಗಳ ಯಾದಿಯಲ್ಲಿ ಲಸಿತ ಮಾಲಿಂಗ ಅವರಿಗೆ ವಿಶಿಷ್ಟ ಸ್ಥಾನವಿದೆ. 15 ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪ್ರವೇಶ. “ಅಸಂಪ್ರದಾಯ ಶೈಲಿ’ಯಾಗಿದ್ದರೂ ಪರಿಣಾಮಕಾರಿ ಬೌಲಿಂಗ್‌ನಿಂದ ಎಲ್ಲರೂ ಅಚ್ಚರಿ ಮೂಡಿಸಿದ ಬೌಲರ್‌. ಡೆತ್‌ ಓವರ್‌ ಯಾರ್ಕರ್‌ ಮೇಲೆ ಅಸಾಮಾನ್ಯ ಹಿಡಿತ ಇವರದು. ಏಕದಿನ ಕ್ರಿಕೆಟಿನಲ್ಲಿ 3 ಹ್ಯಾಟ್ರಿಕ್‌ ಪಡೆದ ವಿಶ್ವದ ಏಕೈಕ ಬೌಲರ್‌. ಸತತ ಆರೋಗ್ಯ ಸಮಸ್ಯೆಗೆ ತುತ್ತಾದ ಮಾಲಿಂಗ ಅವರ ಬೌಲಿಂಗ್‌ ಅನಂತರ ಲಯ ಕಳೆದುಕೊಂಡಿತು. ಎಲ್ಲರೂ ಮಾಲಿಂಗ ಅವರ ಕ್ರಿಕೆಟ್‌ ಜೀವನ ಕೊನೆಯಾಯಿತು ಅಂದುಕೊಂಡಾಗ ಅವರು ಫೀನಿಕ್ಸ್‌ನಂತೆ ಎದ್ದು ಬಂದರು. 2018ರ ಏಶ್ಯ ಕಪ್‌ನಲ್ಲಿ ಮತ್ತೆ ಕಾಣಿಸಿಕೊಂಡು ಹಿಂದಿಗಿಂತಲೂ ಹೆಚ್ಚು ಫಿಟ್‌ ಆಗಿ ಗೋಚರಿಸಿದರು. ಆದರೆ ಲಂಕಾ ತಂಡ ಅತ್ಯಂತ ದುರ್ಬಲವಾಗಿರುವುದರಿಂದ ಮಾಲಿಂಗ ಅವರ ವಿಶ್ವಕಪ್‌ ಕನಸು ಸಾಕಾರಗೊಳ್ಳುವುದು ಅನುಮಾನ.
ವರ್ಷ 36
ಪದಾರ್ಪಣೆ 2004
ಏಕದಿನ 218
ವಿಕೆಟ್‌ 322
ಅತ್ಯುತ್ತಮ 38ಕ್ಕೆ 6

ಮಹೇಂದ್ರ ಸಿಂಗ್‌ ಧೋನಿ ಭಾರತ
ಭಾರತಕ್ಕೆ ದ್ವಿತೀಯ ವಿಶ್ವಕಪ್‌ ತಂದಿತ್ತ ಲೆಜೆಂಡ್ರಿ ಕ್ರಿಕೆಟಿಗ ಮಹೇಂದ್ರ ಸಿಂಗ್‌ ಧೋನಿ. ಬೆಸ್ಟ್‌ ಕೀಪರ್‌, ಬೆಸ್ಟ್‌ ಬ್ಯಾಟ್ಸ್‌ಮನ್‌, ಕೂಲ್‌ ಕ್ಯಾಪ್ಟನ್‌ ಎಂಬ ಹೆಗ್ಗಳಿಕೆ ಧೋನಿ ಅವರದು. ಇವರ ನಾಯಕತ್ವದಲ್ಲಿ ಭಾರತ ಪ್ರತಿಯೊಂದು ಐಸಿಸಿ ಟ್ರೋಫಿಗಳನ್ನು ಎತ್ತಿದೆ. 2007 ಉದ್ಘಾಟನಾ ಟಿ20 ವಿಶ್ವಕಪ್‌, 2011ರ ಏಕದಿನ ವಿಶ್ವಕಪ್‌, 2013ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಗೆದ್ದ ವಿಶ್ವದ ಏಕೈಕ ನಾಯಕ ಎಂ.ಎಸ್‌. ಧೋನಿ. ಆದರೆ ಇತ್ತೀಚಿಗೆ ಧೋನಿ ಕಳಪೆ ಬ್ಯಾಟಿಂಗ್‌ ಫಾರ್ಮ್ನಿಂದ ಟೀಕೆಗೊಳಗಾದರೂ ಆಗಾಗ ಹಳೆ ಚಾರ್ಮ್ನೊಂದಿಗೆ ಸುದ್ದಿಯಲ್ಲಿರುವುದು ಸುಳ್ಳಲ್ಲ. ನಿವೃತ್ತಿ ಕುರಿತು ಧೋನಿ ಇಲ್ಲಿಯವರೆಗೆ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಆದರೆ ಧೋನಿ ಪಾಲಿಗೆ ಇದೇ ಕೊನೆಯ ವಿಶ್ವಕಪ್‌ ಎಂಬುದರಲ್ಲಿ ಅನುಮಾನವಿಲ್ಲ.
ವರ್ಷ 37
ಪದಾರ್ಪಣೆ 2004
ಏಕದಿನ 341
ಒಟ್ಟು ರನ್‌10, 500
ಶತಕ 10

ಟಾಪ್ ನ್ಯೂಸ್

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಹರ್‌ ಘರ್‌ ತಿರಂಗಾ: ಗೌರವಕ್ಕೆ ಧಕ್ಕೆ ತರಬೇಡಿ

ಹರ್‌ ಘರ್‌ ತಿರಂಗಾ: ಗೌರವಕ್ಕೆ ಧಕ್ಕೆ ತರಬೇಡಿ

ಸ್ವಾತಂತ್ರ್ಯ ಅಮೃತಮಹೋತ್ಸವ: ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಜಿಸಿದ್ದ ತ್ಯಾಗಿ “ಕಾರ್ನಾಡ್”

ಅಮೃತ ಮಹೋತ್ಸವ: ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಜಿಸಿದ್ದ ತ್ಯಾಗಿ “ಕಾರ್ನಾಡ್”

ಸ್ವಾತಂತ್ರ್ಯ ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಸ್ವಾತಂತ್ರ್ಯ ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಅಮೃತ ಮಹೋತ್ಸವ: ಇತಿಹಾಸ ಎಂದೂ ಮರೆಯದ 10 ಮಂದಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು

ಅಮೃತ ಮಹೋತ್ಸವ: ಇತಿಹಾಸ ಎಂದೂ ಮರೆಯದ 10 ಮಂದಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Siddaramaiah

Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.