ನನಗೆ ವಿದಾಯ ಹೇಳುತ್ತಿದ್ದಾರೆ…: ಮತ್ತೆ ನಿವೃತ್ತಿಯ ಮಾತನಾಡಿದ MS Dhoni
Team Udayavani, Apr 24, 2023, 9:02 AM IST
![ನನಗೆ ವಿದಾಯ ಹೇಳುತ್ತಿದ್ದಾರೆ…: ಮತ್ತೆ ನಿವೃತ್ತಿಯ ಮಾತನಾಡಿದ MS Dhoni](https://www.udayavani.com/wp-content/uploads/2023/04/dhoni-4-620x342.jpg)
![ನನಗೆ ವಿದಾಯ ಹೇಳುತ್ತಿದ್ದಾರೆ…: ಮತ್ತೆ ನಿವೃತ್ತಿಯ ಮಾತನಾಡಿದ MS Dhoni](https://www.udayavani.com/wp-content/uploads/2023/04/dhoni-4-620x342.jpg)
ಕೋಲ್ಕತ್ತಾ: ರವಿವಾರದ ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಕೂಟದ ಐದನೇ ಗೆಲುವಿನೊಂದಿಗೆ ಧೋನಿ ಪಡೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.
ಕೆಕೆಆರ್ ನ ತವರಿನಲ್ಲಿ ನಡೆದ ಪಂದ್ಯವಾದರೂ ಸ್ಟೇಡಿಯಂ ತುಂಬಾ ಹಳದಿಮಯವಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಧೋನಿ ಅಭಿಮಾನಿಗಳು ಈಡನ್ ಗಾರ್ಡನ್ ನಲ್ಲಿ ಸೇರಿದ್ದರು. ಧೋನಿ ಧೋನಿ ಎಂದು ಅಭಿಮಾನಿಗಳು ಕರಾಡತನ ಮಾಡುತ್ತಿದ್ದರು.
ಈ ಬಗ್ಗೆ ಮಾತನಾಡಿದ ಎಂ.ಎಸ್.ಧೋನಿ, “ನಾನು ಬೆಂಬಲಕ್ಕೆ ಧನ್ಯವಾದ ಹೇಳುತ್ತೇನೆ, ಅವರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆ. ಈ ಹುಡುಗರಲ್ಲಿ ಹೆಚ್ಚಿನವರು ಮುಂದಿನ ಬಾರಿ ಕೆಕೆಆರ್ ಜೆರ್ಸಿಯಲ್ಲಿ ಬರುತ್ತಾರೆ. ಅವರು ನನಗೆ ವಿದಾಯ ನೀಡಲು ಪ್ರಯತ್ನಿಸುತ್ತಿದ್ದಾರೆ, ಆದ್ದರಿಂದ ಪ್ರೇಕ್ಷಕರಿಗೆ ತುಂಬಾ ಧನ್ಯವಾದಗಳು” ಎಂದು ಎಂಎಸ್ ಧೋನಿ ಹೇಳಿದರು.
ಹೈದರಾಬಾದ್ ವಿರುದ್ಧದ ಪಂದ್ಯದ ಬಳಿಕವೂ ಧೋನಿ ನಿವೃತ್ತಿ ಸುಳಿವು ನೀಡಿದ್ದರು. “ನನ್ನ ವೃತ್ತಿಜೀವನದ ಕೊನೆಯ ಹಂತದಲ್ಲಿದ್ದೇನೆ. ಆದರೆ ಹೆಚ್ಚು ಸಮಯ ನಾನು ಆಡಿದಂತೆ ಅದನ್ನು ಆನಂದಿಸುವುದು ಮುಖ್ಯ” ಎಂದಿದ್ದರು.
ಕೋಲ್ಕತ್ತಾದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ನಾಲ್ಕು ವಿಕೆಟ್ ನಷ್ಟಕ್ಕೆ 235 ರನ್ ಮಾಡಿದರೆ, ಕೆಕೆಆರ್ ತಂಡವು 186 ರನ್ ಮಾತ್ರ ಮಾಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
![Mujeeb joins Mumbai Indians team in place of another Afghan bowler](https://www.udayavani.com/wp-content/uploads/2025/02/mujeeb-150x82.jpg)

IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
![Team India: ‘We are not actors..’: Ashwin criticizes Team India’s superstar culture](https://www.udayavani.com/wp-content/uploads/2025/02/ashwin-150x82.jpg)
![Team India: ‘We are not actors..’: Ashwin criticizes Team India’s superstar culture](https://www.udayavani.com/wp-content/uploads/2025/02/ashwin-150x82.jpg)
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
![Don’t hug players: ಭಾರತದ ಆಟಗಾರರ ಅಪ್ಪಿಕೊಳ್ಬೇಡಿ… ತಂಡಕ್ಕೆ ಪಾಕ್ ಅಭಿಮಾನಿಗಳು ಕರೆ](https://www.udayavani.com/wp-content/uploads/2025/02/pak-1-150x85.jpg)
![Don’t hug players: ಭಾರತದ ಆಟಗಾರರ ಅಪ್ಪಿಕೊಳ್ಬೇಡಿ… ತಂಡಕ್ಕೆ ಪಾಕ್ ಅಭಿಮಾನಿಗಳು ಕರೆ](https://www.udayavani.com/wp-content/uploads/2025/02/pak-1-150x85.jpg)
Don’t hug players: ಭಾರತದ ಆಟಗಾರರ ಅಪ್ಪಿಕೊಳ್ಬೇಡಿ… ತಂಡಕ್ಕೆ ಪಾಕ್ ಅಭಿಮಾನಿಗಳು ಕರೆ