3ನೇ ಟೆಸ್ಟ್ : ಪಂದ್ಯ, ಸರಣಿ ಗೆಲ್ಲುವತ್ತ ಭಾರತ, ಲಂಕಾ 31/3
Team Udayavani, Dec 5, 2017, 5:06 PM IST
ಹೊಸದಿಲ್ಲಿ : ಇಲ್ಲಿನ ಫಿರೋಜ್ ಶಾ ಕೋಟ್ಲಾ ಕ್ರಿಕೆಟ್ ಅಂಗಣದಲ್ಲಿ ನಡೆಯುತ್ತಿರುವ ಮೂರನೇ ಹಾಗೂ ಕೊನೇ ಟೆಸ್ಟ್ ಪಂದ್ಯದ ಇಂದು ಮಂಗಳವಾರದ ನಾಲ್ಕನೇ ದಿನದಾಟ ಮುಗಿದಾಗ ಲಂಕಾ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 31ರನ್ ಗಳಿಸುವಷ್ಟರಲ್ಲಿ ತನ್ನ 3 ಬಹುಮೂಲ್ಯ ವಿಕೆಟ್‌ಗಳನ್ನು ಕಳೆದುಕೊಂಡು ಪಂದ್ಯ ಹಾಗೂ ಸರಣಿ ಸೋಲಿನತ್ತ ಮುಖಮಾಡಿತು.
3 ಟೆಸ್ಟ್ ಪಂದ್ಯಗಳ ಈ ಸರಣಿಯಲ್ಲಿ ಈಗಾಗಲೇ 1-0 ಮುನ್ನಡೆಯನ್ನು ಹೊಂದಿರುವ ಭಾರತ ಈ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 536 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿ (127.5 ಓವರ್ ಆಟದಲ್ಲಿ) 7 ವಿಕೆಟ್ ನಷ್ಟದಲ್ಲಿ ತನ್ನ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ 52.2 ಓವರ್ ಆಟವಾಡಿ ಐದು ವಿಕೆಟ್ ನಷ್ಟಕ್ಕೆ 246 ರನ್ ಬಾರಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿತ್ತು.
ಪರಿಣಾಮವಾಗಿ ಲಂಕೆಗೆ ಈ ಪಂದ್ಯ ಗೆಲ್ಲಲು 379 ರನ್‌ಗಳ ಕಷ್ಟ ಸಾಧ್ಯ ಮೊತ್ತದ ಗುರಿಯನ್ನು ಭಾರತ ನಿಗದಿಸಿತ್ತು.
ಲಂಕೆ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ದಿಮುತ ಕರುಣರತ್ನೆ 13 ರನ್, ಸದೀರ ಸಮರವಿಕ್ರಮ 5 ರನ್, ಸುರಂಗ ಲಕ್ಮಲ್ ಶೂನ್ಯ ರನ್‌ಗೆ ಔಟಾದರು. ರವೀಂದ್ರ ಜಡೇಜ 2 ವಿಕೆಟ್ ಪಡೆದರೆ ಮೊಹಮ್ಮದ್ ಶಮಿ ಒಂದು ವಿಕೆಟ್ ಪಡೆದರು.
ದಿನಾಂತ್ಯಕ್ಕೆ ಏಂಜಲೋ ಮ್ಯಾಥ್ಯೂಸ್ (0), ಮತ್ತು ಧನಂಜಯ ಡಿ’ಸಿಲ್ವ (13) ಕ್ರೀಸಿನಲ್ಲಿ ಉಳಿದಿದ್ದರು.
ನಾಳೆ ಪಂದ್ಯದ ಐದನೇ ಹಾಗೂ ಅಂತಿಮ ದಿನವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.