ಈ ಬಾರಿ ಐಪಿಎಲ್ ಉದ್ಘಾಟನ ಸಮಾರಂಭ ಇಲ್ಲ
Team Udayavani, Feb 23, 2019, 12:30 AM IST
ಹೊಸದಿಲ್ಲಿ: ಈ ಬಾರಿಯ ಐಪಿಎಲ್ ಕ್ರಿಕೆಟ್ ಪಂದ್ಯಾವಳಿ ಯಾವುದೇ ಉದ್ಘಾಟನ ಸಮಾರಂಭವಿಲ್ಲದೆ ಸರಳ ರೀತಿಯಲ್ಲಿ ಆರಂಭಗೊಳ್ಳಲಿದೆ. ಈ ಸಮಾರಂಭಕ್ಕೆ ತಗಲುವ ವೆಚ್ಚವನ್ನು ಪುಲ್ವಾಮಾ ಪರಿಹಾರ ನಿಧಿಗೆ ನೀಡಲಾಗುವುದು ಎಂದು ಬಿಸಿಸಿಐ ಆಡಳಿತ ಸಮಿತಿ (ಸಿಒಎ) ತಿಳಿಸಿದೆ.
“ಈ ಸಲದ ಐಪಿಎಲ್ ಪಂದ್ಯಾವಳಿ ಯಾವುದೇ ಉದ್ಘಾಟನಾ ಸಮಾರಂಭವಿಲ್ಲದೆ ಮೊದಲ್ಗೊಳ್ಳಲಿದೆ. ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಗೌರವ ಸಲ್ಲಿಸುವುದು ಇದೆ ಉದ್ದೇಶ. ಉದ್ಘಾಟನ ಸಮಾರಂಭಕ್ಕೆ ತಗಲುವ ಅಷ್ಟೂ ಮೊತ್ತವನ್ನು ಉಗ್ರರ ದಾಳಿಗೆ ಸಿಲುಕಿ ಮಡಿದವರ ಕುಟುಂಬದವರಿಗೆ ನೀಡಲು ನಿರ್ಧರಿಸಿದ್ದೇವೆ’ ಎಂದು ಸಿಒಎ ಅಧ್ಯಕ್ಷ ವಿನೋದ್ ರಾಯ್ ಶುಕ್ರವಾರ ನಡೆದ ಸಭೆಯ ಬಳಿಕ ಹೇಳಿದರು.
ಇಷ್ಟು ವರ್ಷ ಬಾಲಿವುಡ್ ತಾರೆಗಳನ್ನೊಳಗೊಂಡ ರಂಗುರಂಗಿನ ಕಾರ್ಯಕ್ರಮಗಳ ಮೂಲಕ ಐಪಿಎಲ್‌ಗೆ ಗ್ಲಾಮರಸ್ ಆರಂಭ ಲಭಿಸುತ್ತಿತ್ತು. ಸಿಒಎ ಕೈಗೊಂಡ ಈ ನಿರ್ಧಾರವನ್ನು ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ. ಖನ್ನಾ ಸ್ವಾಗತಿಸಿದ್ದಾರೆ. ಒಂದು ಅಂದಾಜಿನ ಪ್ರಕಾರ 2018ರ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ 15 ಕೋಟಿ ರೂ. ವೆಚ್ಚವಾಗಿತ್ತು. ಇಷ್ಟೇ ದೊಡ್ಡ ಮೊತ್ತ ಯೋಧರ ಕುಟುಂಬಕ್ಕೆ ಲಭಿಸುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಆಸ್ಟ್ರೇಲಿಯ ಸೋಲಿಗಿಂತ ತವರಿನ ವೈಟ್‌ವಾಶ್ ಆಘಾತಕಾರಿ: ಯುವಿ
ICC Champions Trophy: ಅಫ್ಘಾನಿಸ್ಥಾನ ವಿರುದ್ಧದ ಪಂದ್ಯಕ್ಕೆ ಇಂಗ್ಲೆಂಡ್ ಬಹಿಷ್ಕಾರ?
Jasprit Bumrah: ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ರೇಸ್‌ನಲ್ಲಿ ಬುಮ್ರಾ
WTC “ಟೆಸ್ಟ್ ಫೈನಲ್’ಗೂ ಮುನ್ನ ಒಂದು ಟೆಸ್ಟ್ ಆಡಲು ದ. ಆಫ್ರಿಕಾ ಯೋಜನೆ
Team India; ದ್ರಾವಿಡ್ ಇದ್ದಾಗ ಎಲ್ಲ ಸರಿಯಿತ್ತು: ಹರ್ಭಜನ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.