ಈ ಬಾರಿ ಎರಡು ಕ್ರೀಡಾ ರತ್ನಗಳು
Team Udayavani, Aug 23, 2017, 9:15 AM IST
ಹೊಸದಿಲ್ಲಿ: ದೇಶದ ಅತ್ಯಂತ ಪ್ರತಿಷ್ಠಿತ ಕ್ರೀಡಾ ಪ್ರಶಸ್ತಿಯಾದ ಖೇಲ್ ರತ್ನ ಸೇರಿದಂತೆ ಈ ಬಾರಿಯ ಕ್ರೀಡಾ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಕೇಂದ್ರ ಸರಕಾರ ಮಂಗಳವಾರ ಬಿಡುಗಡೆ ಮಾಡಿದೆ. ಪ್ಯಾರಾಲಿಂಪಿಕ್‌ನಲ್ಲಿ ಎರಡು ಚಿನ್ನ ಗೆದ್ದಿರುವ ದೇವೇಂದ್ರ ಜಜಾರಿಯಾ, ಭಾರತ ಹಾಕಿ ತಂಡದ ಮಾಜಿ ನಾಯಕ ಸರ್ದಾರ್ ಸಿಂಗ್ ಖೇಲ್ ರತ್ನಕ್ಕೆ ಆಯ್ಕೆಯಾಗಿದ್ದಾರೆ. ಮತ್ತೂಂದು ಕಡೆ ಅರ್ಜುನ ಪ್ರಶಸ್ತಿಗೆ ಕರ್ನಾಟಕದ ಹಾಕಿ ತಾರೆ ಎಸ್.ವಿ. ಸುನೀಲ್, ಶೂಟರ್ ಪಿ.ಎನ್. ಪ್ರಕಾಶ್ ಆಯ್ಕೆಯಾಗಿ ಕನ್ನಡಿಗರ ಸಂಭ್ರಮ ಹೆಚ್ಚಿಸಿದ್ದಾರೆ.
2 ಖೇಲ್‌ರತ್ನ, 3 ಧ್ಯಾನ್‌ಚಂದ್, 7 ದ್ರೋಣಾಚಾರ್ಯ, 17 ಅರ್ಜುನ ಪ್ರಶಸ್ತಿ ವಿಜೇತರು ಸೇರಿ ಒಟ್ಟು 29 ಮಂದಿಯ ಪಟ್ಟಿ ಹೊರಬಿದ್ದಿದೆ. ನಿರೀಕ್ಷೆಯಂತೆ ಶಿಫಾರಸು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದವರೇ ಇಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ. ಅರ್ಜುನಕ್ಕೆ ಆಯ್ಕೆಯಾಗಿರುವ ಮಹಿಳಾ ಕ್ರಿಕೆಟ್ ಆಟಗಾರ್ತಿ ಹರ್ಮನ್‌ಪ್ರೀತ್ ಕೌರ್, ಕ್ರಿಕೆಟಿಗ ಚೇತೇಶ್ವರ ಪೂಜಾರ, ಬಾಕ್ಸಿಂಗ್ ತಾರೆ ಲೈಶ್ರಾಮ್ ದೇವೇಂದೊÅ ಸಿಂಗ್, ಪ್ಯಾರಾಲಿಂಪಿಕ್ ಎತ್ತರ ಜಿಗಿತ ತಾರೆಯರಾದ ಮರಿಯಪ್ಪನ್ ತಂಗವೇಲು, ವರುಣ್ ಭಾಟಿ ಸಿಂಗ್ ಪ್ರಮುಖ ಹೆಸರುಗಳಾಗಿವೆ.
ಇದನ್ನು ಹೊರತುಪಡಿಸಿ ವೇಗದ ನಡಿಗೆಯಲ್ಲಿ ಖ್ಯಾತಿ ಪಡೆದಿರುವ ಖುಶಿºàರ್ ಕೌರ್, ಆ್ಯತ್ಲೀಟ್ ರಾಜೀವ್ ಅರೋಕಿಯಾ, ಪ್ರೊ ಕಬಡ್ಡಿ ತಾರೆ ಜಸ್ವೀರ್ ಸಿಂಗ್ ಮತ್ತಿತರ ಪ್ರಮುಖ ಹೆಸರುಗಳಾಗಿವೆ.
ಮಿಥಾಲಿಗೆ ತಪ್ಪಿತು ಖೇಲ್‌ರತ್ನ
ಈ ಬಾರಿ ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಖೇಲ್‌ರತ್ನ ಪಡೆಯುವ ಎಲ್ಲ ಅವಕಾಶವಿತ್ತು. ಆದರೆ ಇದು ತಪ್ಪಿದೆ ಎನ್ನುವುದು ವಿಷಾದದ ಸಂಗತಿ. ಬಿಸಿಸಿಐ ಆಕೆಯ ಹೆಸರನ್ನು ಖೇಲ್‌ರತ್ನಕ್ಕೆ ಶಿಫಾರಸೇ ಮಾಡದಿರುವುದು ಇದಕ್ಕೆ ಕಾರಣವೆನ್ನುವುದು ಅನಂತರ ತಿಳಿದುಬಂದ ಸಂಗತಿ. ಏಕದಿನ ಕ್ರಿಕೆಟ್‌ನಲ್ಲಿ ಹಲವು ವಿಶ್ವ ದಾಖಲೆಗಳ ಒಡತಿಯಾಗಿರುವ ಆಕೆಯ ನೇತೃತ್ವದಲ್ಲೇ ಭಾರತ ಮಹಿಳಾ ತಂಡ ಏಕದಿನ ವಿಶ್ವಕಪ್ ಫೈನಲ್ ಕೂಡ ತಲುಪಿದೆ ಎನ್ನುವುದು ಗಮನಿಸಬೇಕಾದ ಅಂಶ.
ಬೋಪಣ್ಣಗೆ ತಪ್ಪಿದ ಅರ್ಜುನ
ಈ ಬಾರಿ ಅರ್ಜುನ ತಪ್ಪಿಸಿಕೊಂಡ ಪ್ರಮುಖ ಹೆಸರು ರಾಜ್ಯದ ಖ್ಯಾತ ಟೆನಿಸ್ ತಾರೆ ರೋಹನ್ ಬೋಪಣ್ಣ. ಇವರ ಹೆಸರನ್ನು ಮುಗಿದ ಮೇಲೆ ಶಿಫಾರಸು ಮಾಡಿದೆ ಎಂಬ ಕಾರಣಕ್ಕೆ ಅರ್ಜುನ ತಪ್ಪಿಹೋಗಿದೆ. ಈ ಬಾರಿ ಜೂನ್ ತಿಂಗಳಲ್ಲಿ ಬೋಪಣ್ಣ ಮಿಶ್ರ ಡಬಲ್ಸ್ ವಿಭಾಗದಲ್ಲಿ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆದ್ದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ
Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್ ದಾಖಲೆ ಮುರಿದ ಟೀಂ ಇಂಡಿಯಾ
BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್, ರಾಹುಲ್ ಬಳಿಕ ಮತ್ತೊಬ್ಬ ಬ್ಯಾಟರ್ ಗೆ ಗಾಯ
IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
MUST WATCH
ಹೊಸ ಸೇರ್ಪಡೆ
Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ
Road mishap: ರಿಕ್ಷಾಗೆ ಕಾರು ಢಿಕ್ಕಿ; ನಾಲ್ವರಿಗೆ ಗಾಯ
Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Udupi; ಸ್ವಯಂ ರಕ್ಷಣೆಗಾಗಿ ಕರಾಟೆ ಕಲೆಯ ಅಭ್ಯಾಸ ಇಂದಿನ ಅಗತ್ಯತೆ: ಪುತ್ತಿಗೆ ಶ್ರೀ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.