![1-dee](https://www.udayavani.com/wp-content/uploads/2025/02/1-dee-1-415x221.jpg)
![1-dee](https://www.udayavani.com/wp-content/uploads/2025/02/1-dee-1-415x221.jpg)
Team Udayavani, Sep 21, 2018, 6:00 AM IST
ಹೊಸದಿಲ್ಲಿ: ಏಶ್ಯ ಕಪ್‌ನಲ್ಲಿ ಆಡುತ್ತಿರುವ ಭಾರತದ ಕ್ರಿಕೆಟಿಗರಿಗೆ ಏಕಕಾಲಕ್ಕೆ ತೀವ್ರ ಗಾಯದ ಸಮಸ್ಯೆ ಎದುರಾಗಿದ್ದು, ಇದರಿಂದ 3 ಬದಲಾವಣೆ ಮಾಡಿಕೊಳ್ಳಲಾಗಿದೆ.
ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಮತ್ತು ಪೇಸ್ ಬೌಲರ್ ಶಾದೂìಲ್ ಠಾಕೂರ್ ಗಾಯಾಳಾಗಿ ತಂಡದಿಂದ ಬೇರ್ಪಟ್ಟಿದ್ದಾರೆ. ಇವರ ಬದಲು ರವೀಂದ್ರ ಜಡೇಜ, ಸಿದ್ಧಾರ್ಥ್ ಕೌಲ್ ಮತ್ತು ದೀಪಕ್ ಚಹರ್ ಅವರನ್ನು ಸೇರಿಸಿಕೊಳ್ಳಲಾಗಿದೆ. ಬಿಸಿಸಿಐ ಗುರುವಾರ ಈ ಬದಲಾವಣೆಗಳನ್ನು ಪ್ರಕಟಿಸಿತು.
ಹಾರ್ದಿಕ್ ಪಾಂಡ್ಯ ಪಾಕಿಸ್ಥಾನ ವಿರುದ್ಧದ ಪಂದ್ಯದ ವೇಳೆ ತೀವ್ರವಾದ ಬೆನ್ನುನೋವಿಗೆ ಸಿಲುಕಿದ್ದರು. ಶಾದೂìಲ್ ಠಾಕೂರ್ ಹಾಂಕಾಂಗ್ ಎದುರಿನ ಪಂದ್ಯದ ಬಳಿಕ ಪೃಷ್ಠದ ನೋವಿಗೆ ಒಳಗಾಗಿದ್ದಾರೆ. ಈ ಸರಣಿಯಲ್ಲಿ ಈವರೆಗೆ ಆಡದ ಅಕ್ಷರ್ ಪಟೇಲ್ ಪಾಕ್ ವಿರುದ್ಧ ಬದಲಿ ಕ್ಷೇತ್ರರಕ್ಷಕನಾಗಿ ಕಣಕ್ಕಿಳಿದಿದ್ದ ವೇಳೆ ಬಲಗೈ ತೋರುಬೆರಳಿಗೆ ಗಾಯ ಮಾಡಿಕೊಂಡಿದ್ದರು.
ಏಶ್ಯ ಕಪ್: ಸೂಪರ್-4 ವೇಳಾಪಟ್ಟಿ
ದಿನಾಂಕ ಪಂದ್ಯ ಸ್ಥಳ ಆರಂಭ
ಸೆ. 21 (ಶುಕ್ರವಾರ) ಭಾರತ-ಬಾಂಗ್ಲಾದೇಶ ದುಬಾೖ ಸಂಜೆ 5.00
ಸೆ. 21 (ಶುಕ್ರವಾರ) ಪಾಕಿಸ್ಥಾನ-ಅಫ್ಘಾನಿಸ್ಥಾನ ಅಬುಧಾಬಿ ಸಂಜೆ 5.00
ಸೆ. 23 (ರವಿವಾರ) ಭಾರತ-ಪಾಕಿಸ್ಥಾನ ದುಬಾೖ ಸಂಜೆ 5.00
ಸೆ. 23 (ರವಿವಾರ) ಬಾಂಗ್ಲಾದೇಶ-ಅಫ್ಘಾನಿಸ್ಥಾನ ಅಬುಧಾಬಿ ಸಂಜೆ 5.00
ಸೆ. 25 (ಮಂಗಳವಾರ) ಭಾರತ-ಅಫ್ಘಾನಿಸ್ಥಾನ ದುಬಾೖ ಸಂಜೆ 5.00
ಸೆ. 26 (ಬುಧವಾರ) ಪಾಕಿಸ್ಥಾನ-ಬಾಂಗ್ಲಾದೇಶ ಅಬುಧಾಬಿ ಸಂಜೆ 5.00
* ಸಮಯ: ಭಾರತೀಯ ಕಾಲಮಾನ
* ಪ್ರಸಾರ: ಸ್ಟಾರ್ ನ್ಪೋರ್ಟ್ಸ್
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
You seem to have an Ad Blocker on.
To continue reading, please turn it off or whitelist Udayavani.