ಪಿಸಿಬಿಯಿಂದ ಉಮರ್ ಅಕ್ಮಲ್ ಗೆ 3 ವರ್ಷ ನಿಷೇಧ
Team Udayavani, Apr 28, 2020, 9:50 AM IST
ಕರಾಚಿ: ಖ್ಯಾತ ಕ್ರಿಕೆಟಿಗ ಉಮರ್ ಅಕ್ಮಲ್ ಅವರನ್ನು ಸೋಮವಾರ ಎಲ್ಲ ಮಾದರಿ ಕ್ರಿಕೆಟ್‌ನಿಂದ ಮೂರು ವರ್ಷ ನಿಷೇಧ ಮಾಡಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಆದೇಶ ಹೊರಡಿಸಿದೆ.
ಪಿಸಿಬಿ ಉಮರ್ ಮೇಲಿನ ಕ್ರಮಕ್ಕೆ ನಿರ್ದಿಷ್ಟ ಕಾರಣವನ್ನು ನೀಡಿಲ್ಲವಾದರೂ ಭ್ರಷ್ಟಾಚಾರ ವಿರೋಧಿ ಸಂಹಿತೆ ಪ್ರಕಾರ ನಿವೃತ್ತ ನ್ಯಾಯಾಧೀಶ ಫಜಲ್ ಇ ಮಿರನ್ ಚೌವಾಣ್ ನೇತೃತ್ವದ ಶಿಸ್ತು ಸಮಿತಿ ಕ್ರಮ ತೆಗೆದುಕೊಂಡಿದೆ ಎಂದು ಪಿಸಿಬಿ ತನ್ನ ಅಧಿಕೃತ ಟ್ವಿಟ್ಟರ್‌ನಲ್ಲಿ ಪ್ರಕಟಿಸಿದೆ.
29 ವರ್ಷದ ಉಮರ್ ಅಕ್ಮಲ್ ಪಾಕ್ ಪರ 16 ಟೆಸ್ಟ್, 84 ಟಿ20, 121 ಏಕದಿನ ಪಂದ್ಯವನ್ನಾಡಿದ್ದಾರೆ. ಲಾಹೋರ್‌ನಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿದ್ದ ಉಮರ್ ತನ್ನ ಟ್ರೈನರ್ ಜತೆ ಕಿರಿಕ್ ಮಾಡಿಕೊಂಡು ವಿವಾದಕ್ಕೆ ಒಳಗಾಗಿದ್ದನ್ನು ಸ್ಮರಿಸಬಹುದು.
ಇದೇ ಭ್ರಷ್ಟಾಚಾರ ಕಾರಣಗಳಿಗೆ ಉಮರ್ ಅಕ್ಮಲ್ ಗೆ ಈ ವರ್ಷದ ಪಾಕಿಸ್ಥಾನ ಸೂಪರ್ ಲೀಗ್ ಆಡಲು ಅವಕಾಶ ನಿರಾಕರಿಸಲಾಗಿತ್ತು. ಸ್ಪೋಟಕ ಬ್ಯಾಟಿಂಗ್ ಮಾಡುತ್ತಿದ್ದ ಉಮರ್ ಉಪಯುಕ್ತ ಕೀಪರ್ ಕೂಡಾ ಆಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20; ಸ್ಯಾಮ್ಸನ್ ಸತತ 2ನೇ ಶತಕ:ದಕ್ಷಿಣ ಆಫ್ರಿಕಾ ಎದುರು ಭಾರತಕ್ಕೆ ಅಮೋಘ ಜಯ
Pro Kabaddi: ಜೈಪುರ್ ಮೇಲೆ ಪಾಟ್ನಾ ಸವಾರಿ
ODI; ಹ್ಯಾರಿಸ್ ರೌಫ್ ಗೆ ಹೆದರಿದ ಆಸೀಸ್ : 9 ವಿಕೆಟ್‌ಗಳಿಂದ ಗೆದ್ದ ಪಾಕಿಸ್ಥಾನ
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
Cricket: ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.