ವನಿತಾ ಕ್ರಿಕೆಟ್ ಸರಣಿಯ ಸಮಯ
Team Udayavani, Jun 16, 2024, 6:32 AM IST
ಬೆಂಗಳೂರು: ಎಲ್ಲರೂ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಗುಂಗಿನಲ್ಲಿರುವಾಗ ಭಾರತ- ದಕ್ಷಿಣ ಆಫ್ರಿಕಾ ನಡುವಿನ ಪೂರ್ಣ ಪ್ರಮಾಣದ ವನಿತಾ ಕ್ರಿಕೆಟ್ ಸರಣಿಗೆ ರವಿವಾರ ಬೆಂಗಳೂರಿನಲ್ಲಿ ಚಾಲನೆ ಲಭಿಸಲಿದೆ. ಮೊದಲು 3 ಪಂದ್ಯಗಳ ಏಕದಿನ ಸರಣಿ, ಬಳಿಕ ಒಂದು ಟೆಸ್ಟ್, ಅನಂತರ 3 ಟಿ20 ಪಂದ್ಯಗಳನ್ನು ಆಡಲಾಗುವುದು.
ಏಕದಿನ ಸರಣಿಯ ಮೂರೂ ಪಂದ್ಯಗಳ ತಾಣ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂ. ಜೂ. 16, 19 ಮತ್ತು 23ರಂದು ಈ ಪಂದ್ಯಗಳು ನಡೆಯಲಿವೆ. ಟೆಸ್ಟ್ ಹಾಗೂ ಟಿ20 ಸರಣಿಯ ತಾಣ ಚೆನ್ನೈ. ಮುಂದಿನ ವರ್ಷ ಭಾರತದಲ್ಲೇ ಏರ್ಪಡಲಿರುವ ಏಕದಿನ ವಿಶ್ವಕಪ್ ಪಂದ್ಯಾವಳಿಯ ತಯಾರಿ ಹಿನ್ನೆಲೆಯಲ್ಲಿ ಇದೊಂದು ಮಹತ್ವದ ಸರಣಿಯಾಗಿದೆ.
ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡ ವರ್ಷಾರಂಭದಲ್ಲಿ ಆಸ್ಟ್ರೇಲಿಯ ಎದುರಿನ ಏಕದಿನ ಹಾಗೂ ಟಿ20 ಸರಣಿಯನ್ನು ಕಳೆದುಕೊಂಡಿತ್ತು. ಅನಂತರ ಅಷ್ಟೇನೂ ಬಲಿಷ್ಠವಲ್ಲದ ಬಾಂಗ್ಲಾದೇಶ ವಿರುದ್ಧ ಅವರದೇ ನೆಲದಲ್ಲಿ 5-0 ಅಂತರದಿಂದ ಟಿ20 ಸರಣಿ ಜಯಿಸಿತ್ತು. ಸ್ಮತಿ ಮಂಧನಾ-ಶಫಾಲಿ ವರ್ಮ ಜೋಡಿ ಉತ್ತಮ ಆರಂಭ ಒದಗಿಸಿದರೆ ಮಧ್ಯಮ ಕ್ರಮಾಂಕದ ಆಟಗಾರ್ತಿಯರು ಇನ್ನಿಂಗ್ಸ್ ಬೆಳೆಸಬಲ್ಲರು.
ಬೌಲಿಂಗ್‌ನಲ್ಲಿ ಕರ್ನಾಟಕದ ಶ್ರೇಯಾಂಕಾ ಪಾಟೀಲ್, ರೇಣುಕಾ ಸಿಂಗ್ ಠಾಕೂರ್, ಪೂಜಾ ವಸ್ತ್ರಾಕರ್, ರಾಧಾ ಯಾದವ್, ಆಲ್‌ರೌಂಡರ್ ದೀಪ್ತಿ ಶರ್ಮ ಮೇಲೆ ಭಾರೀ ಭರವಸೆ ಇಡಲಾಗಿದೆ.
ವೋಲ್ವಾರ್ಟ್ ಅಮೋಘ ಫಾರ್ಮ್
ದಕ್ಷಿಣ ಆಫ್ರಿಕಾ ತಂಡ ಕೂಡ ಬಲಿಷ್ಠವಾಗಿದೆ. ನಾಯಕಿ ಲಾರಾ ವೋಲ್ವಾರ್ಟ್ ಅಮೋಘ ಫಾರ್ಮ್ ನಲ್ಲಿದ್ದಾರೆ. ಕಳೆದ 5 ಇನ್ನಿಂಗ್ಸ್‌ಗಳಲ್ಲಿ 102, 56, 41, ಅಜೇಯ 110 ಹಾಗೂ ಅಜೇಯ 184 ರನ್ ಬಾರಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಇತರ ಸೀನಿಯರ್‌ಗಳಾದ ಮರಿಜಾನ್ ಕಾಪ್, ಅಯಬೊಂಗಾ ಖಾಕಾ, ನಾಡಿನ್ ಡಿ ಕ್ಲರ್ಕ್ ಕೂಡ ಉತ್ತಮ ಫಾರ್ಮ್ನಲ್ಲಿದ್ದಾರೆ.
ದಕ್ಷಿಣ ಆಫ್ರಿಕಾ ಎದುರಿನ ಸರಣಿಗಾಗಿ ಭಾರತದ ಬೌಲರ್‌ಗಳಿಗೆ ಬೆಂಗಳೂರಿನ ಎನ್‌ಸಿಎಯಲ್ಲಿ ಹಾಗೂ ಬ್ಯಾಟರ್‌ಗಳಿಗೆ ನವೀ ಮುಂಬಯಿಯಲ್ಲಿ ಪ್ರತ್ಯೇಕ ತರಬೇತಿಯನ್ನು ಆಯೋಜಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್
BGT 2024: ಮೊದಲ ಪಂದ್ಯಕ್ಕೆ ನಮ್ಮ ಆಡುವ ಬಳಗ ಅಂತಿಮವಾಗಿದೆ ಎಂದ ನಾಯಕ ಬುಮ್ರಾ
BGT 2025: ಶುಕ್ರವಾರದಿಂದ ಟೆಸ್ಟ್ ಸರಣಿ ಆರಂಭ: ಇಲ್ಲಿದೆ ಎಲ್ಲಾ ಪಂದ್ಯಗಳ ವೇಳಾಪಟ್ಟಿ, ಸಮಯ
Hardik Pandya: ಟಿ20 ಆಲ್‌ರೌಂಡರ್… ಹಾರ್ದಿಕ್ ಪಾಂಡ್ಯ ನಂ.1
China Masters 2024: ಥಾಯ್ಲೆಂಡ್‌ನ ಬುಸಾನನ್ ವಿರುದ್ಧ 20ನೇ ಗೆಲುವು ಸಾಧಿಸಿದ ಸಿಂಧು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.