ವಿಶ್ವಕಪ್ ಆಯ್ಕೆಗೆ ಸಮಯವಿದೆ: ರೋಹಿತ್
Team Udayavani, Mar 22, 2021, 6:55 AM IST
ಅಹ್ಮದಾಬಾದ್: ನಾವು ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಗೆದ್ದಿರಬಹುದು, ಆದರೆ ಟಿ20 ವಿಶ್ವಕಪ್ ಪಂದ್ಯಾವಳಿಗೆ ಆಡುವ ಬಳಗವನ್ನು ಅಂತಿಮಗೊಳಿಸಲು ಇನ್ನೂ ಸಾಕಷ್ಟು ಸಮಯವಿದೆ ಎಂಬುದಾಗಿ ಭಾರತ ತಂಡದ ಉಪನಾಯಕ ರೋಹಿತ್ ಶರ್ಮ ಹೇಳಿದ್ದಾರೆ. ವಿರಾಟ್ ಕೊಹ್ಲಿ ಇನ್ನಿಂಗ್ಸ್ ಆರಂಭಿಸಿದ್ದು ಕೇವಲ “ತಾಂತ್ರಿಕ ನಡೆ’ಯಾಗಿದೆ ಎಂದೂ ಹೇಳಿದರು.
“ಟಿ20 ವಿಶ್ವಕಪ್ ಪಂದ್ಯಾವಳಿಗೆ ಇನ್ನೂ ಸಾಕಷ್ಟು ಸಮಯವಿದೆ. ನಮ್ಮ ಬ್ಯಾಟಿಂಗ್ ಸರದಿಯನ್ನು ಅಂತಿಮಗೊಳಿಸುವ ಬಗ್ಗೆ ಈಗಲೇ ನಿರ್ಧಾರವೊಂದಕ್ಕೆ ಬರಲು ಸಾಧ್ಯವಿಲ್ಲ. ವಿಶ್ವಕಪ್ ಪಂದ್ಯಾವಳಿಗೂ ಮುನ್ನ ಐಪಿಎಲ್ ನಡೆಯಲಿದೆ. ಅನಂತರವೂ ಕೆಲವು ಟಿ20 ಸರಣಿಗಳಿವೆ. ನಾವೆಲ್ಲ ಕುಳಿತು ಚರ್ಚಿಸಿ ಅನಂತರವೇ ಸೂಕ್ತ ತೀರ್ಮಾನವೊಂದನ್ನು ತೆಗೆದುಕೊಳ್ಳಬೇಕಾಗುತ್ತದೆ’ ಎಂದು ರೋಹಿತ್ ಶರ್ಮ ಹೇಳಿದರು.
ರಾಹುಲ್ ಕೀ ಪ್ಲೇಯರ್ :
“ಈ ಪಂದ್ಯದಲ್ಲಿ ಕೊಹ್ಲಿ ಇನ್ನಿಂಗ್ಸ್ ಆರಂಭಿ ಸಿದ್ದು ಕೇವಲ ಒಂದು ತಾಂತ್ರಿಕ ನಡೆಯಾಗಿತ್ತು. ನಮಗೆ ಹೆಚ್ಚುವರಿ ಬೌಲರ್ ಓರ್ವನ ಅಗತ್ಯ ವಿತ್ತು. ಇದಕ್ಕಾಗಿ ಓರ್ವ ಬ್ಯಾಟ್ಸ್‌ಮನ್‌ನನ್ನು ಕೈಬಿಡಬೇಕಾಯಿತು. ಇಲ್ಲಿ ರಾಹುಲ್‌ಗೆ ದುರ ದೃಷ್ಟ ಎದುರಾಯಿತು. ಆದರೆ ಇದು ಅತ್ಯಂತ ಕಠಿನ ನಿರ್ಧಾರವಾಗಿತ್ತು’ ಎಂದರು.
“ರಾಹುಲ್ ಸೀಮಿತ ಓವರ್ ಪಂದ್ಯಗಳಲ್ಲಿ, ಮುಖ್ಯವಾಗಿ ಟಿ20 ಪಂದ್ಯದಲ್ಲಿ ನಮ್ಮ ಕೀ ಪ್ಲೇಯರ್. ಆಟಗಾರರ ಈಗಿನ ಫಾರ್ಮ್ ಆಧರಿಸಿ ಸರಣಿ ನಿರ್ಣಾಯಕ ಪಂದ್ಯಕ್ಕೆ ಬಲಿಷ್ಠ ಹನ್ನೊಂದರ ತಂಡವನ್ನು ಆರಿಸಲಾಯಿತು. ಇದರಿಂದ ರಾಹುಲ್‌ಗೆ ಯಾವುದೇ ಸಂದೇಶ ರವಾನೆಯಾಗಿಲ್ಲ’ ಎಂಬುದಾಗಿ ರೋಹಿತ್ ಹೇಳಿದರು. ಸರಣಿಗೂ ಮುನ್ನ ರೋಹಿತ್-ರಾಹುಲ್ ಮೊದಲ ಆಯ್ಕೆಯ ಓಪನರ್ ಎಂಬುದಾಗಿ ನಾಯಕ ಕೊಹ್ಲಿ ಹೇಳಿದ್ದರು. ಹಾಗೆಯೇ ಮೊದಲೆರಡು ಪಂದ್ಯಗಳ ವೇಳೆ ರೋಹಿತ್‌ಗೆ ವಿಶ್ರಾಂತಿಯನ್ನೂ ನೀಡಲಾಗಿತ್ತು.
ಕೊಹ್ಲಿಯೇ ಜೋಡಿ ಆಗಬೇಕೇ? :
ನಿಮ್ಮ ಜತೆ ಮುಂದೆಯೂ ಕೊಹ್ಲಿಯೇ ಇನ್ನಿಂಗ್ಸ್ ಆರಂಭಿಸಬೇಕು ಎಂದು ಬಯ ಸುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರೋಹಿತ್, “ಒಂದು ನಿರ್ದಿಷ್ಟ ಬ್ಯಾಟಿಂಗ್ ಆರ್ಡರ್‌ನೊಂದಿಗೆ ಈ ಪಂದ್ಯವನ್ನು ಗೆಲ್ಲುವುದು ನಮ್ಮ ಯೋಜನೆಯಾಗಿತ್ತು. ಆದರೆ ಇದೇ ಖಾಯಂ ಎಂದೇನಲ್ಲ. ನಿರ್ದಿಷ್ಟ ಸಮಯಲ್ಲಿ ನಾಯಕ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮವಾಗುತ್ತದೆ. ಆದರೆ ಮುಂದಿನ ಏಕದಿನ ಸರಣಿಯಲ್ಲಿ ಕೊಹ್ಲಿ ಓಪನಿಂಗ್ ಬರುತ್ತಾರೆಂದು ನಾನು ಭಾವಿಸುವುದಿಲ್ಲ’ ಎಂದರು.
ಐಪಿಎಲ್‌ನಲ್ಲೂ ಓಪನಿಂಗ್: ಕೊಹ್ಲಿ :
ಅಂತಿಮ ಟಿ 20 ಪಂದ್ಯದಲ್ಲಿ ಇನ್ನಿಂಗ್ಸ್ ಆರಂಭಿಸಿ ಯಶಸ್ಸು ಕಂಡ ವಿರಾಟ್ ಕೊಹ್ಲಿ, ಮುಂಬರುವ ಐಪಿಎಲ್‌ನಲ್ಲೂ ಓಪನಿಂಗ್ ಬರುವ ಇಂಗಿತ ವ್ಯಕ್ತಪಡಿಸಿದ್ದಾರೆ.
“ಪಂತ್ ಮತ್ತು ಅಯ್ಯರ್ ಆಡಲಿಳಿಯದೆಯೇ 224 ರನ್ ಪೇರಿಸಿದ್ದು ನಮ್ಮ ಬ್ಯಾಟಿಂಗ್ ಆಳ ಮತ್ತು ಸಾಮರ್ಥ್ಯಕ್ಕೆ ಸಾಕ್ಷಿ. ನಾನು ಮತ್ತು ರೋಹಿತ್ ಓಪನಿಂಗ್‌ನಲ್ಲಿ ಉತ್ತಮ ಯಶಸ್ಸು ಸಾಧಿಸಿದೆವು. ನಮ್ಮ ಮಧ್ಯಮ ಕ್ರಮಾಂಕವೀಗ ಹೆಚ್ಚು ಬಲಿಷ್ಠವಾಗಿರುವುದರಿಂದ ನಾನು ರೋಹಿತ್ ಜತೆ ಇನ್ನಿಂಗ್ಸ್ ಆರಂಭಿಸಲು ಇಳಿದೆ. ಐಪಿಎಲ್‌ನಲ್ಲೂ ಓಪನಿಂಗ್ ನಡೆಸುವುದು ನನ್ನ ಯೋಜನೆಯಾಗಿದೆ’ ಎಂದು ಸರಣಿಶ್ರೇಷ್ಠ ಕೊಹ್ಲಿ ಹೇಳಿದರು.
ಆರ್‌ಸಿಬಿ ಪರ ಕೊಹ್ಲಿ-ಗೇಲ್ ಬಹಳಷ್ಟು ಸಲ ಇನ್ನಿಂಗ್ಸ್ ಆರಂಭಿಸಿದ್ದರು. ಆದರೆ ಪಡಿಕ್ಕಲ್ ಕ್ಲಿಕ್ ಆದ ಬಳಿಕ ಕೊಹ್ಲಿ ವನ್‌ಡೌನ್‌ನಲ್ಲೇ ಕ್ರೀಸ್ ಇಳಿಯತೊಡಗಿದರು. ಈ ಬಾರಿ ಆರನ್ ಫಿಂಚ್ ಇಲ್ಲದ ಕಾರಣ ಪಡಿಕ್ಕಲ್-ಕೊಹ್ಲಿ ಓಪನಿಂಗ್ ಬರುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
PCB;ಕರಾಚಿ ಕ್ರೀಡಾಂಗಣದ ನವೀಕರಣ ಕಾರ್ಯ ಪೂರ್ಣಕ್ಕೆ ಹರಸಾಹಸ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.