ಮುಗಿಯಿತೇ ಟಿಂಟು ಲೂಕಾ ಆ್ಯತ್ಲೇಟಿಕ್ ಜೀವನ?
Team Udayavani, Mar 7, 2019, 12:30 AM IST
ಚೆನ್ನೈ: ಭಾರತದ ಖ್ಯಾತ ಓಟಗಾರ್ತಿ ಟಿಂಟು ಲೂಕಾ ದಕ್ಷಿಣ ವಲಯ ರೈಲ್ವೇಸ್‌ನಲ್ಲಿ ಪೂರ್ಣ ಕಾಲಿಕ ಉದ್ಯೋಗಿಯಾಗಿ ಬುಧವಾರ ಸೇರಿಕೊಂಡಿದ್ದಾರೆ.
ಈ ಹಠಾತ್ ಬೆಳವಣಿಗೆಯಲ್ಲಿ 29 ವರ್ಷದ ಕೇರಳದ ಓಟಗಾರ್ತಿ ಪಿ.ಟಿ.ಉಷಾ ಅಕಾಡೆಮಿಯಿಂದ ಹೊರಬಂದಿದ್ದಾರೆ. ಗಾಯದ ಕಾರಣದಿಂದ ಏಶ್ಯನ್ ಗೇಮ್ಸ್‌ನಲ್ಲೂ ಲೂಕಾ ಪಾಲ್ಗೊಂಡಿರಲಿಲ್ಲ. ಒಟ್ಟಾರೆ ಇದೀಗ ಲೂಕಾ ಆ್ಯತ್ಲೇಟಿಕ್ ಬದುಕು ಮುಕ್ತಾಯದ ಹಂತದಲ್ಲಿದೆಯೇ ಎನ್ನುವಂತಹ ಅನುಮಾನ ಮೂಡಿಸಿದೆ. ಆದರೆ ಯಾವುದೇ ಅಧಿಕೃತವಾಗಿ ಮಾಹಿತಿ ಲೂಕಾ ಹೊರಹಾಕಿಲ್ಲ.
“13ನೇ ವಯಸ್ಸಿನಲ್ಲಿ ಪಿಟಿ.ಉಷಾ ಅಕಾಡೆಮಿ ಸೇರಿಕೊಂಡೆ. ನನಗೆ ಕ್ರೀಡಾಕೋಟಾದಡಿ ದಕ್ಷಿಣ ರೈಲ್ವೇಸ್‌ನಲ್ಲಿ ನೌಕರಿ ಸಿಕ್ಕಿತ್ತು. ಬಳಿಕ ಹಲವಾರು ಪದಕ ಗೆದ್ದೆ. ಇದೀಗ ಗಾಯದ ಕಾರಣದಿಂದ ಚೇತರಿಸಿಕೊಂಡಿಲ್ಲ. ಹೀಗಾಗಿ ಅಕಾಡೆಮಿ ತೊರೆದಿದ್ದೇನೆ. ಏಶ್ಯನ್ ಗೇಮ್ಸ್‌ನ 800 ಮೀ. ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ಗೆಲ್ಲಬೇಕು ಎನ್ನುವುದು ಬಹುದಿನಗಳ ಕನಸು. ಅದನ್ನು ನನಸು ಮಾಡಲು ನನಗೆ ಇನ್ನೂ ಅವಕಾಶವಿದೆ. ಅದಕ್ಕಾಗಿ ನನ್ನ ಪ್ರಯತ್ನವನ್ನು ಮುಂದುವರಿಸಲಿದ್ದೇನೆ. ಸದ್ಯ ತಮಿಳುನಾಡಿನ ಸೇಲಂನ ಡಿವಿಷನಲ್ ರಿಜನರ್ ಮ್ಯಾನೇಜರ್ ಆಫೀಸ್‌ನಲ್ಲಿ ನೌಕರಿ ಶುರು ಮಾಡಿದ್ದೇನೆ. ಕೆಲಸ ಆರಂಭಿಸಿರುವ ಮೊದಲ ದಿನ. ತುಂಬಾ ಖುಷಿಯಾಗುತ್ತಿದೆ’ ಎಂದು ಲೂಕಾ ಹೇಳಿದ್ದಾರೆ.
ಟಿಂಟು ಲೂಕಾ 2014ರಲ್ಲಿ ನಡೆದಿದ್ದ ಏಶ್ಯನ್ ಗೇಮ್ಸ್ 4/400 ಮೀ.ರಿಲೆಯಲ್ಲಿ ಚಿನ್ನ, 2014 ಇಂಚಾನ್ ಏಶ್ಯನ್ ಗೇಮ್ಸ್ 800 ಮೀ. ಓಟದಲ್ಲಿ ಬೆಳ್ಳಿ ಹಾಗೂ ಗುವಾಂಗ್‌ಜುನಲ್ಲಿ ನಡೆದಿದ್ದ ಏಶ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ, ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ 2 ಚಿನ್ನ, 2 ಬೆಳ್ಳಿ ಹಾಗೂ 2 ಕಂಚಿನ ಪದಕ ಜಯಿಸಿದ್ದಾರೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.