ಐಪಿಎಲ್‌ಗೆ ಆಯ್ಕೆಯಾಗದ ನೋವಿನಲ್ಲಿ ತಿವಾರಿ
Team Udayavani, Dec 20, 2018, 7:00 AM IST
ಕೋಲ್ಕತಾ: ಮಂಗಳವಾರ ಜೈಪುರದಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ ಫ್ರಾಂಚೈಸಿಗಳು ಅನೇಕ ಅಚ್ಚರಿ ಹಾಗೂ ವಿಚಿತ್ರ ತೀರ್ಮಾನಗಳನ್ನು ತೆಗೆದುಕೊಂಡವು. ಅನಾಮಿಕ, ಯುವ ಆಟಗಾರರನ್ನು ಕೋಟಿಗಟ್ಟಲೆ ನೀಡಿ ಖರೀದಿ ಮಾಡಿದರೆ, ಭಾರೀ ಜನಪ್ರಿಯತೆ ಹೊಂದಿರುವ ಡೇಲ್ ಸ್ಟೇನ್, ಅಲೆಕ್ಸ್ ಹೇಲ್ಸ್, ಚೇತೇಶ್ವರ ಪೂಜಾರರಂತಹ ಆಟಗಾರರತ್ತ ತಿರುಗಿಯೂ ನೋಡಲಿಲ್ಲ.
ಹರಾಜಿನಲ್ಲಿ ಹೀಗೆ ನಿರ್ಲಕ್ಷ್ಯಕ್ಕೊಳಗಾದ ಕ್ರಿಕೆಟಿಗರಲ್ಲಿ ಮನೋಜ್ ತಿವಾರಿ ಕೂಡ ಒಬ್ಬರು. ಇದರಿಂದ ತೀರಾ ನೊಂದಿರುವ ಅವರು, ಅತ್ಯುತ್ತಮ ಆಟವಾಡಿಯೂ ಫ್ರಾಂಚೈಸಿಗಳು ತನ್ನನ್ನು ನಿರ್ಲಕ್ಷಿಸಲು ಏನು ಕಾರಣ ಎಂದು ಪ್ರಶ್ನಿಸಿದ್ದಾರೆ.
“ನನ್ನಿಂದ ಏನು ತಪ್ಪಾಗಿದೆ ಎಂದೇ ಅರ್ಥವಾಗುತ್ತಿಲ್ಲ. ಭಾರತದ ಪರ ಆಡಿ ಶತಕ ಗಳಿಸಿದರೂ ಮುಂದಿನ 14 ಪಂದ್ಯಗಳಿಗೆ ನಾನು ಆಯ್ಕೆಯಾಗಲಿಲ್ಲ. 2017ರ ಐಪಿಎಲ್‌ನಲ್ಲಿ ನಾನು ಉತ್ತಮ ಪ್ರದರ್ಶನ ನೀಡಿದ್ದರೂ ಈಗ ನಿರ್ಲಕ್ಷಿಸಲ್ಪಟ್ಟಿದ್ದೇನೆ. ನನ್ನಿಂದ ಆದ ತಪ್ಪಾದರೂ ಏನು…’ ಎಂದು ಮನೋಜ್ ತಿವಾರಿ ಪ್ರಶ್ನಿಸಿದ್ದಾರೆ.
ಪೀಟರ್‌ಸನ್ ಜತೆ ಹೋಲಿಕೆ
ಬಂಗಾಲ ಕ್ರಿಕೆಟ್ ತಂಡದ ಪ್ರತಿಭಾವಂತ ಆಟಗಾರರಾಗಿರುವ ತಿವಾರಿ ಅವರನ್ನು ಒಂದು ಕಾಲದಲ್ಲಿ ಇಂಗ್ಲೆಂಡಿನ ಕೆವಿನ್ ಪೀಟರ್‌ಸನ್‌ಗೆ ಹೋಲಿಸಲಾಗಿತ್ತು. 2011ರಲ್ಲಿ ಭಾರತದ ಪರ ಅಮೋಘ ಶತಕ ಬಾರಿಸಿ ಪಂದ್ಯಶ್ರೇಷ್ಠರಾದರು. ಮುಂದಿನ 14 ಪಂದ್ಯಗಳಿಗೆ ಅವರು ಆಯ್ಕೆಯೇ ಆಗಲಿಲ್ಲ. ಅನಂತರ ಲಭಿಸಿದ ಅವಕಾಶದಲ್ಲಿ 4 ವಿಕೆಟ್ ಪಡೆದು ತಂಡ ಗೆಲ್ಲಲು ನೆರವಾಗಿದ್ದರು. 2017ರ ಐಪಿಎಲ್‌ನಲ್ಲಿ ಪುಣೆ ತಂಡ ಫೈನಲ್‌ಗೇರಲು ತಿವಾರಿ ಪ್ರಮುಖ ಕಾರಣವಾಗಿದ್ದರು. 15 ಪಂದ್ಯಗಳಲ್ಲಿ 324 ರನ್ ಬಾರಿಸಿದ ಸಾಧನೆ ತಿವಾರಿ ಅವರದಾಗಿತ್ತು. ಬೌಲಿಂಗ್‌ನಲ್ಲೂ ಮಿಂಚಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.