ಕೋವಿಡ್ ಕಳವಳ: ತಮಿಳುನಾಡು ಪ್ರೀಮಿಯರ್ ಲೀಗ್ ಮತ್ತೆ ಮುಂದೂಡಿಕೆ
Team Udayavani, Aug 1, 2020, 5:25 PM IST
ಚೆನ್ನೈ: ತಮಿಳುನಾಡು ರಾಜ್ಯದಲ್ಲಿ ಕೋವಿಡ್-19 ಸೋಂಕು ಭೀತಿ ತಗ್ಗಿರದ ಕಾರಣ ಐದನೇ ಆವೃತ್ತಿಯ ಟಿಎನ್ ಪಿಎಲ್ (ತಮಿಳುನಾಡು ಪ್ರೀಮಿಯರ್ ಲೀಗ್) ನ್ನು ಮತ್ತೆ ಮುಂದೂಡಲಾಗಿದೆ.
ದೇಶಿಯ ಕ್ರಿಕೆಟ್ ನಲ್ಲಿ ಪ್ರಸಿದ್ದವಾಗಿರುವ ಟಿಎಂಪಿಎಲ್ ಅನ್ನು ಈ ಬಾರಿ ಜೂನ್ 10ರಿಂದ ಜುಲೈ 12ರವರೆಗೆ ನಡೆಸಲು ಸಿದ್ದತೆ ನಡೆಸಲಾಗಿತ್ತು. ಆದರೆ ಕೋವಿಡ್ ಸೋಂಕು ಕಾರಣದಿಂದ ಮುಂದೂಡಲಾಗಿತ್ತು. ಆಗಸ್ಟ್ ಅಥವಾ ಸಪ್ಟೆಂಬರ್ ನಲ್ಲಿ ಕೂಟ ನಡೆಸಲು ತಮಿಳು ನಾಡು ಕ್ರಿಕೆಟ್ ಸಂಸ್ಥೆ ಯೋಜನೆ ರೂಪಿಸಿತ್ತು. ಆದರೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಸಮಯದಲ್ಲೂ ಕೂಟ ನಡೆಸಲು ಅಸಾಧ್ಯವಾಗಿದೆ.
ಐದನೇ ಆವೃತ್ತಿಯ ಟಿಎಂಪಿಎಲ್ ಅನ್ನು ಸಾಧ್ಯವಾದರೆ ಈ ವರ್ಷದ ನವೆಂಬರ್ ನಲ್ಲಿ ಇಲ್ಲವಾದರೆ ಮುಂದಿನ ವರ್ಷದ ಮಾರ್ಚ್ ನಲ್ಲಿ ನಡೆಸಲಾಗುವುದು ಎಂದು ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಆರ್ ಎಸ್ ರಾಮಸ್ವಾಮಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.