ಇಂದು ಅಂತಿಮ ಟಿ20: ನರ್ವಸ್‌ ಕಿವೀಸ್‌ಗೆ ಕ್ಲೀನ್‌ಸ್ವೀಪ್‌ ಭೀತಿ

5-0 ಸಾಧನೆಗೆ ಭಾರತ ಯೋಜನೆ ; ಕೊಹ್ಲಿ, ರಾಹುಲ್‌ಗೆ ವಿಶ್ರಾಂತಿ ಸಾಧ್ಯತೆ

Team Udayavani, Feb 2, 2020, 6:00 AM IST

NZ-A

ಮೌಂಟ್‌ ಮೌಂಗನಿ (ನ್ಯೂಜಿಲ್ಯಾಂಡ್‌): ಟೀಮ್‌ ಇಂಡಿಯಾ ಹೊಸ ಇತಿಹಾಸ ಬರೆಯಲು ತುದಿಗಾಲಲ್ಲಿ ನಿಂತಿದೆ. 5 ಪಂದ್ಯಗಳ ಟಿ20 ಸರಣಿಯಲ್ಲಿ ಆತಿಥೇಯ ನ್ಯೂಜಿಲ್ಯಾಂಡ್‌ಗೆ ವೈಟ್‌ವಾಶ್‌ ಮಾಡುವ ತವಕದಲ್ಲಿದೆ. ರವಿವಾರ ಮೌಂಟ್‌ ಮೌಂಗನಿಯ “ಬೇ ಓವಲ್‌’ನಲ್ಲಿ ಅಂತಿಮ ಮುಖಾಮುಖೀ ನಡೆಯಲಿದ್ದು, ಇದನ್ನೂ ಗೆದ್ದು ಸರಣಿಯನ್ನು 5 0 ಅಂತರದಿಂದ ವಶಪಡಿಸಿಕೊಳ್ಳುವುದು ಭಾರತದ ಗುರಿ. ಆಗ ಇದೊಂದು ಅಪೂರ್ವ ಸಾಧನೆಯಾಗಲಿದೆ.

ಈವರೆಗಿನ ಟಿ20 ಸರಣಿ ಇತಿಹಾಸದಲ್ಲಿ ಯಾವ ತಂಡವೂ 5 0 ಅಂತರದ ಕ್ಲೀನ್‌ಸ್ವೀಪ್‌ ಪರಾಕ್ರಮ ಮೆರೆದಿಲ್ಲ. ಇದು 5 ಪಂದ್ಯಗಳ ಕೇವಲ 4ನೇ ಸರಣಿಯಾಗಿದ್ದು, ಟಿ20 ವಿಶ್ವಕಪ್‌ ವರ್ಷದಲ್ಲಿ ಭಾರತ ನೂತನ ಅಧ್ಯಾಯವೊಂದನ್ನು ಬರೆಯಲು ಸಜ್ಜಾಗಿದೆ.

ಇನ್ನೊಂದೆಡೆ, ಕೈಯಲ್ಲಿದ್ದ ಸತತ 2 ಪಂದ್ಯಗಳನ್ನು ಸೂಪರ್‌ ಓವರ್‌ನಲ್ಲಿ ಸೋತು “ಚೋಕರ್’ ಲೇಬಲ್‌ ಅಂಟಿಸಿಕೊಂಡಿರುವ ನ್ಯೂಜಿಲ್ಯಾಂಡಿಗೆ ಒಂದಿಷ್ಟಾದರೂ ಪ್ರತಿಷ್ಠೆ ಗಳಿಸಲು ಉಳಿದಿರುವ ಅಂತಿಮ ಅವಕಾಶ ಇದಾಗಿದೆ. ಈವರೆಗೆ 3 ಹಾಗೂ ಅದಕ್ಕಿಂತ ಹೆಚ್ಚಿನ ಪಂದ್ಯಗಳ ತವರಿನ ಟಿ20 ಸರಣಿಯಲ್ಲಿ ಕಿವೀಸ್‌ ಕ್ಲೀನ್‌ಸ್ವೀಪ್‌ ಸಂಕಟಕ್ಕೆ ಸಿಲುಕಿದ್ದಿಲ್ಲ. ಇಲ್ಲಿ ಇಂಥದೊಂದು ಅಪಾಯ ಎದುರಾಗಿದೆ. 2008ರಲ್ಲಿ ಇಂಗ್ಲೆಂಡ್‌ ವಿರುದ್ಧದ ದ್ವಿಪಕ್ಷೀಯ ಸರಣಿಯನ್ನು 2 0 ಅಂತರದಿಂದ ಕಳೆದುಕೊಂಡದ್ದೇ ತವರಿನಲ್ಲಿ ನ್ಯೂಜಿಲ್ಯಾಂಡಿಗೆ ಎದುರಾದ ದೊಡ್ಡ ಆಘಾತವಾಗಿತ್ತು. ಭಾರತ ಈಗಾಗಲೇ ಇದರ ಎರಡು ಪಟ್ಟು ಹೊಡೆತವಿಕ್ಕಿ ಕಿವೀಸ್‌ ರೆಕ್ಕೆಗಳನ್ನೇ ಕತ್ತರಿಸಿದೆ. ನ್ಯೂಜಿಲ್ಯಾಂಡ್‌ ಗೆಲುವು ಕಂಡೀತಾದರೂ ಹೇಗೆ?

ರೋಹಿತ್‌ ಶರ್ಮ ನಾಯಕ?
ಅಂತಿಮ ಪಂದ್ಯದಲ್ಲಿ ಭಾರತ ಇನ್ನಷ್ಟು ಪ್ರಯೋಗ ಮಾಡುವುದರಲ್ಲಿ ಅನುಮಾನವಿಲ್ಲ. ನಾಯಕ ಕೊಹ್ಲಿ ಮತ್ತು ಕೆ.ಎಲ್‌. ರಾಹುಲ್‌ ವಿಶ್ರಾಂತಿ ಪಡೆಯುವ ಸಾಧ್ಯತೆ ಇದೆ. ಆಗ, ಕಳೆದ ಪಂದ್ಯದಿಂದ ಹೊರಗುಳಿದಿದ್ದ ರೋಹಿತ್‌ ಶರ್ಮ ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನಿಂಗ್ಸ್‌ ಆರಂಭಿಸಲು ಸಂಜು ಸ್ಯಾಮ್ಸನ್‌ಗೆ ಇನ್ನೊಂದು ಅವಕಾಶ ಲಭಿಸಲಿದೆ.
ತಂಡದ ಪ್ರಧಾನ ಕೀಪರ್‌ ಕೂಡ ಆಗಿರುವ ರಾಹುಲ್‌ ಆಡದೇ ಹೋದರೆ ರಿಷಭ್‌ ಪಂತ್‌ ಮರಳಿ ಕೀಪಿಂಗ್‌ ಹೊಣೆ ನಿಭಾಯಿಸಬೇಕಾಗುತ್ತದೆ.

ಬೌಲಿಂಗ್‌ ವಿಭಾಗದಲ್ಲಿ ಬುಮ್ರಾಗೆ ರೆಸ್ಟ್‌ ಕೊಟ್ಟು ಶಮಿ ಅವರನ್ನು ಆಡಿಸುವ ಸಾಧ್ಯತೆ ಇದೆ. ಆಲ್‌ರೌಂಡರ್‌ಗಳಾದ ಶಿವಂ ದುಬೆ, ವಾಷಿಂಗ್ಟನ್‌ ಸುಂದರ್‌ ಅವರಿಗೆ ಇನ್ನೂ ಒಂದು ಚಾನ್ಸ್‌ ಕೊಡುವ ಉದ್ದೇಶವಿದ್ದು, ಆಗ ರವೀಂದ್ರ ಜಡೇಜ ಅವರ ವಿಶ್ರಾಂತಿ ಕೂಡ ಮುಂದುವರಿಯಲಿದೆ. ಚಹಲ್‌ ಬದಲು ಕುಲದೀಪ್‌ ಯಾದವ್‌ ಸ್ಪಿನ್‌ ದಾಳಿಗೆ ಇಳಿಯುವುದು ಖಚಿತ.

ಆಸ್ಟ್ರೇಲಿಯದಲ್ಲೇ ನಡೆಯುವ ಟಿ20 ವಿಶ್ವಕಪ್‌ ಪಂದ್ಯಾವಳಿಯ ಹಿನ್ನೆಲೆಯಲ್ಲಿ ಆಸೀಸ್‌ ಉಪಖಂಡದಲ್ಲೇ ನಡೆದ ಈ ಸರಣಿ ಭಾರತಕ್ಕೆ ಭಾರೀ ಬೂಸ್ಟ್‌ ಆಗಿ ಪರಿಣಮಿಸಿದೆ. ಅಲ್ಲದೇ ಐಪಿಎಲ್‌ ಹೊರತುಪಡಿಸಿದರೆ, ಈ ವಿಶ್ವಕಪ್‌ ಕೂಟಕ್ಕೂ ಮುನ್ನ ಭಾರತದ ಮತ್ತೂಂದು ಟಿ20 ಸರಣಿ ಇನ್ನೂ ಅಧಿಕೃತಗೊಂಡಿಲ್ಲ.

ವಿಲಿಯಮ್ಸನ್‌ ಫಿಟ್‌?
ಭುಜದ ನೋವಿಗೆ ಸಿಲುಕಿ 4ನೇ ಪಂದ್ಯದಿಂದ ಹೊರಗುಳಿದಿದ್ದ ನ್ಯೂಜಿಲ್ಯಾಂಡ್‌ ತಂಡದ ನಾಯಕ ಕೇನ್‌ ವಿಲಿಯಮ್ಸನ್‌ ಅವರ ಫಿಟ್‌ನೆಸ್‌ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಪ್ರಕಟಗೊಂಡಿಲ್ಲ. ಅವರು ಆಡಲೂಬಹುದು. ಅಥವಾ ಮುಂಬರುವ ಏಕದಿನ ಸರಣಿಯ ಹಿನ್ನೆಲೆಯಲ್ಲಿ ವಿಶ್ರಾಂತಿ ಮುಂದುವರಿಯಲೂಬಹುದು.

ಆದರೆ ಯಾರೇ ಬಂದರೂ ನ್ಯೂಜಿಲ್ಯಾಂಡ್‌ ತಂಡದ ಅದೃಷ್ಟವನ್ನು ಬದಲಿಸಲು ಸಾಧ್ಯವಿಲ್ಲ ಎಂಬುದು ಈಗಾಗಲೇ ಸಾಬೀತಾಗಿರುವುದಂತೂ ಸತ್ಯ!

ಅಂಕಿ ಅಂಶ
 ಮೌಂಟ್‌ ಮೌಂಗನಿಯಲ್ಲಿ ಆಡಿದ 6 ಟಿ20 ಪಂದ್ಯಗಳಲ್ಲಿ ನ್ಯೂಜಿಲ್ಯಾಂಡ್‌ ನಾಲ್ಕನ್ನು ಗೆದ್ದಿದೆ. ಒಂದು ರದ್ದುಗೊಂಡಿದೆ. 2018ರಲ್ಲಿ ಪಾಕ್‌ ವಿರುದ್ಧ 18 ರನ್‌ ಸೋಲನುಭವಿಸಿದೆ. ಅನಂತರ ಇಲ್ಲಿ ಟಿ20 ಪಂದ್ಯ ನಡೆದಿಲ್ಲ. ಭಾರತ ಇಲ್ಲಿ ಟಿ20 ಪಂದ್ಯ ಆಡುತ್ತಿರುವುದು ಇದೇ ಮೊದಲು.
 ರೋಹಿತ್‌ ಶರ್ಮ ಇನ್ನು 31 ರನ್‌ ಮಾಡಿದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 14 ಸಾವಿರ ರನ್‌ ಪೂರ್ತಿಗೊಳಿಸಿದ ಭಾರತದ 8ನೇ ಕ್ರಿಕೆಟಿಗನಾಗಲಿದ್ದಾರೆ.

ಭಾರತ
ರೋಹಿತ್‌ ಶರ್ಮ (ನಾಯಕ), ಸಂಜು ಸ್ಯಾಮ್ಸನ್‌, ಶ್ರೇಯಸ್‌ ಅಯ್ಯರ್‌, ಮನೀಷ್‌ ಪಾಂಡೆ, ರಿಷಭ್‌ ಪಂತ್‌, ಶಿವಂ ದುಬೆ, ವಾಷಿಂಗ್ಟನ್‌ ಸುಂದರ್‌, ಶಾದೂìಲ್‌ ಠಾಕೂರ್‌, ಕುಲದೀಪ್‌ ಯಾದವ್‌, ನವದೀಪ್‌ ಸೈನಿ, ಮೊಹಮ್ಮದ್‌ ಶಮಿ.
ನ್ಯೂಜಿಲ್ಯಾಂಡ್‌
ಮಾರ್ಟಿನ್‌ ಗಪ್ಟಿಲ್‌, ಕಾಲಿನ್‌ ಮುನ್ರೊ, ಟಿಮ್‌ ಸೀಫ‌ರ್ಟ್‌, ರಾಸ್‌ ಟೇಲರ್‌, ಟಾಮ್‌ ಬ್ರೂಸ್‌, ಡ್ಯಾರಿಲ್‌ ಮಿಚೆಲ್‌, ಮಿಚೆಲ್‌ ಸ್ಯಾಂಟ್ನರ್‌, ಐಶ್‌ ಸೋಧಿ, ಟಿಮ್‌ ಸೌಥಿ (ನಾಯಕ), ಹಾಮಿಶ್‌ ಬೆನೆಟ್‌, ಸ್ಕಾಟ್‌ ಕ್ಯುಗೆಲೀನ್‌.

ಟಾಪ್ ನ್ಯೂಸ್

IND Vs AUS ಬಾಕ್ಸಿಂಗ್‌ ಡೇ ಟೆಸ್ಟ್‌: ಆಸ್ಟ್ರೇಲಿಯ ರನ್‌ ಓಟಕ್ಕೆ ಬುಮ್ರಾ ಬ್ರೇಕ್‌

IND Vs AUS ಬಾಕ್ಸಿಂಗ್‌ ಡೇ ಟೆಸ್ಟ್‌: ಆಸ್ಟ್ರೇಲಿಯ ರನ್‌ ಓಟಕ್ಕೆ ಬುಮ್ರಾ ಬ್ರೇಕ್‌

EX-PM-M-Singh

Passes Away: ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ವಿಧಿವಶ

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

EX-PM-M-Singh

Critical: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಆರೋಗ್ಯದಲ್ಲಿ ಏರುಪೇರು; ಏಮ್ಸ್‌ಗೆ ದಾಖಲು

BGV–BIMS

Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IND Vs AUS ಬಾಕ್ಸಿಂಗ್‌ ಡೇ ಟೆಸ್ಟ್‌: ಆಸ್ಟ್ರೇಲಿಯ ರನ್‌ ಓಟಕ್ಕೆ ಬುಮ್ರಾ ಬ್ರೇಕ್‌

IND Vs AUS ಬಾಕ್ಸಿಂಗ್‌ ಡೇ ಟೆಸ್ಟ್‌: ಆಸ್ಟ್ರೇಲಿಯ ರನ್‌ ಓಟಕ್ಕೆ ಬುಮ್ರಾ ಬ್ರೇಕ್‌

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

Vijay Hazare Trophy: ಮಯಾಂಕ್‌ ಅಗರ್ವಾಲ್‌ ಶತಕದಾಟ; ಪಂಜಾಬ್‌ ಕೈನಿಂದ ಜಯ ಕಸಿದ ಕರ್ನಾಟಕ

Vijay Hazare Trophy: ಮಯಾಂಕ್‌ ಅಗರ್ವಾಲ್‌ ಶತಕದಾಟ; ಪಂಜಾಬ್‌ ಕೈನಿಂದ ಜಯ ಕಸಿದ ಕರ್ನಾಟಕ

M Chinnaswamy Stadium

M Chinnaswamy Stadium; ಶಾಂತಾ ಹೆಸರಿಡಲು ಸಮಸ್ಯೆಯೇನಿದೆ? ಕೆಎಸ್‌ಸಿಎ ತಾರತಮ್ಯವೇಕೆ?

ವಿಮಾನದಲ್ಲಿ ಶುರುವಾಯ್ತು ಸಿಂಧು-ದತ್ತಾ ಲವ್‌ ಸ್ಟೋರಿ

PV Sindhu: ವಿಮಾನದಲ್ಲಿ ಶುರುವಾಯ್ತು ಸಿಂಧು-ದತ್ತಾ ಲವ್‌ ಸ್ಟೋರಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

IND Vs AUS ಬಾಕ್ಸಿಂಗ್‌ ಡೇ ಟೆಸ್ಟ್‌: ಆಸ್ಟ್ರೇಲಿಯ ರನ್‌ ಓಟಕ್ಕೆ ಬುಮ್ರಾ ಬ್ರೇಕ್‌

IND Vs AUS ಬಾಕ್ಸಿಂಗ್‌ ಡೇ ಟೆಸ್ಟ್‌: ಆಸ್ಟ್ರೇಲಿಯ ರನ್‌ ಓಟಕ್ಕೆ ಬುಮ್ರಾ ಬ್ರೇಕ್‌

dw

Padubidri: ಕಾರು ಢಿಕ್ಕಿ; ಪಾದಚಾರಿ ಸಾವು

8

Kasaragod: ಟ್ಯಾಂಕರ್‌ ಲಾರಿಯಿಂದ ರಸ್ತೆಗೆ ಹರಿದ ಎಣ್ಣೆ

EX-PM-M-Singh

Passes Away: ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ವಿಧಿವಶ

crime

Siddapura: ಬೈಕಿಗೆ ಕಾರು ಡಿಕ್ಕಿ; ಸವಾರರು ಗಂಭೀರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.