ಸರಣಿ ಗೆಲುವಿನ ಹೊಸ್ತಿಲಲ್ಲಿ ಭಾರತ
Team Udayavani, Feb 10, 2018, 6:45 AM IST
ಜೊಹಾನ್ಸ್‌ಬರ್ಗ್: ವಿರಾಟ್ ಕೊಹ್ಲಿ ನೇತೃತ್ವದ ಭಾರತೀಯ ಏಕದಿನ ತಂಡ ದಕ್ಷಿಣ ಆಫ್ರಿಕಾ ನೆಲದಲ್ಲಿ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಪ್ರಚಂಡ ನಿರ್ವಹಣೆ ನೀಡುತ್ತಿದೆ. ಸತತ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿ 3-0 ಮುನ್ನಡೆ ಸಾಧಿಸಿರುವ ಟೀಮ್ ಇಂಡಿಯಾ ಶನಿವಾರ ನಡೆಯುವ ನಾಲ್ಕನೇ ಪಂದ್ಯದಲ್ಲೂ ಆತಿಥೇಯ ದಕ್ಷಿಣ ಆಫ್ರಿಕಾವನ್ನು ಮಣಿಸಿ ಏಕದಿನ ಸರಣಿ ಗೆದ್ದು ಇತಿಹಾಸ ನಿರ್ಮಿಸಲು ಹಾತೊರೆಯುತ್ತಿದೆ. ಆದರೆ ಎಬಿ ಡಿ’ವಿಲಿಯರ್ ಆಗಮನದಿಂದ ದಕ್ಷಿಣ ಆಫ್ರಿಕಾ ತಿರುಗಿ ಬೀಳುವ ಸಾಧ್ಯತೆಯಿದೆ.
ಆರಂಭದ ಮೂರು ಪಂದ್ಯಗಳಲ್ಲಿ ಜಯಭೇರಿ ಬಾರಿಸಿದ ಭಾರತ ಸರಣಿ ಗೆಲುವಿನ ಐತಿಹಾಸಿಕ ಕ್ಷಣವನ್ನು ಎದುರು ನೋಡುತ್ತಿದೆ. ಸರಣಿ ಗೆಲುವಿನ ಸಾಮರ್ಥ್ಯ ಕೂಡ ಭಾರತಕ್ಕೆ ಇದೆ. ಆದರೆ ಬಹಳಷ್ಟು ಎಚ್ಚರಿಕೆಯಿಂದ ಆಡುವುದು ಅತೀ ಮುಖ್ಯವಾಗಿದೆ. ಸರಣಿಯ ಇನ್ನುಳಿದ ಪಂದ್ಯಗಳಲ್ಲಿ ಒಂದನ್ನು ಗೆದ್ದರೆ ಭಾರತ ದಕ್ಷಿಣ ಆಫ್ರಿಕಾ ನೆಲದಲ್ಲಿ ಚೊಚ್ಚಲ ಬಾರಿ ಸರಣಿ ಗೆಲ್ಲಲಿದೆ.
ಭಾರತ ಈ ಹಿಂದೆ 2010-11ರಲ್ಲಿ ಸರಣಿ ಗೆಲುವಿನ ಸನಿಹಕ್ಕೆ ಬಂದಿತ್ತು. ಎಂಎಸ್ ಧೋನಿ ನೇತೃತ್ವದ ಭಾರತೀಯ ತಂಡ 2-1 ಮುನ್ನಡೆ ಪಡೆದ ಬಳಿಕ ಐದು ಪಂದ್ಯಗಳ ಸರಣಿಯನ್ನು 2-3ರಿಂದ ಸೋತಿತ್ತು. ಈ ಬಾರಿ ಗಾಯದ ಸಮಸ್ಯೆಯಿಂದ ದಕ್ಷಿಣ ಆಫ್ರಿಕಾ ಬಳಲುತ್ತಿರುವ ಕಾರಣ ಭಾರತಕ್ಕೆ ಸರಣಿ ಗೆಲ್ಲುವ ಅವಕಾಶ ಉಜ್ವಲವಾಗಿದೆ.
1992-93ರಲ್ಲಿ ಭಾರತ ಇಲ್ಲಿಗೆ ಪ್ರವಾಸಗೈದ ಬಳಿಕ ಇಷ್ಟರವರೆಗೆ ಸರಣಿಯೊಂದರಲ್ಲಿ ಮೂರು ಪಂದ್ಯ ಗೆದ್ದದ್ದಿಲ್ಲ. ಆದರೆ ನ್ಯೂಲ್ಯಾಂಡ್‌ನಲ್ಲಿ ನಡೆದ ಈ ಸರಣಿಯ ಮೂರನೇ ಪಂದ್ಯ ಗೆಲ್ಲುವ ಮೂಲಕ ಭಾರತ ದ್ವಿಪಕ್ಷೀಯ ಸರಣಿಯಲ್ಲಿ ಮೂರು ಪಂದ್ಯ ಗೆದ್ದ ಸಂಭ್ರಮ ಆಚರಿಸಿತು. ಇದೀಗ ಸತತ ನಾಲ್ಕನೇ ಗೆಲುವಿನ ಸನಿಹದಲ್ಲಿ ಭಾರತವಿದೆ. ಒಂದು ವೇಳೆ ಇದರಲ್ಲಿ ಭಾರತ ಯಶಸ್ವಿಯಾದರೆ ನೂತನ ಐಸಿಸಿ ಏಕದಿನ ರ್‍ಯಾಂಕಿಂಗ್‌ನಲ್ಲಿ ವಿಶ್ವದ ನಂಬರ್ ವನ್ ಸ್ಥಾನ ಪಡೆಯಲಿದೆ.
ಗೆಲುವಿಗಾಗಿ ಪ್ರಯತ್ನ
ಸರಣಿಯ ಎಲ್ಲ ಪಂದ್ಯಗಳನ್ನು ಗೆಲ್ಲಲು ಭಾರತ ಬಯಸುತ್ತದೆ ಎಂದು ಮೂರನೇ ಏಕದಿನದ ಮೊದಲು ಶಿಖರ್ ಧವನ್ ಹೇಳಿದ್ದರು. ಡ್ರೆಸ್ಸಿಂಗ್ ರೂಂನಲ್ಲಿಯೂ ಎಲ್ಲರೂ ಇದರ ಬಗ್ಗೆ ಸಹಮತ ವ್ಯಕ್ತಪಡಿಸಿದ್ದಾರೆ. ಟೆಸ್ಟ್ ಸರಣಿಯಲ್ಲಿ ಮೂರನೇ ಪಂದ್ಯ ಗೆದ್ದ ಬಳಿಕ ಭಾರತ ಉತ್ತಮ ಆಟದ ಪ್ರದರ್ಶನ ನೀಡುತ್ತಿದೆ. ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 34ನೇ ಶತಕ ಸಿಡಿಸುವ ಮೂಲಕ ಭಾರತಕ್ಕೆ ಇನ್ನೊಂದು ಗೆಲುವು ತಂದುಕೊಟ್ಟಿದ್ದರು. ಇನ್ನೆರಡು ಪಂದ್ಯಗಳು ಬಾಕಿ ಇರುವಾಗಲೇ ಸರಣಿ ಗೆಲ್ಲಲು ನಾವು ಕಠಿನ ಪ್ರಯತ್ನ ನಡೆಸಲಿದ್ದೇವೆ ಎಂದು ಕೊಹ್ಲಿ ಹೇಳಿದ್ದಾರೆ.
ಕೊಹ್ಲಿಯ ಜತೆ ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಾಹಲ್ ಅವರ ಅಮೋಘ ನಿರ್ವಹಣೆಯಿಂದ ಭಾರತ ಸರಣಿ ಗೆಲ್ಲಲು ಒಳ್ಳೆಯ ಅವಕಾಶವಿದೆ. ಈ ಸರಣಿಯಲ್ಲಿ ಕುಲದೀಪ್ 21 ಮತ್ತು ಚಾಹಲ್ 30 ವಿಕೆಟ್ ಪಡೆದಿದ್ದಾರೆ.
ಡಿ’ವಿಲಿಯರ್ ಸೇರ್ಪಡೆ
ನ್ಯೂಲ್ಯಾಂಡ್ಸ್‌ನಲ್ಲಿ ದಕ್ಷಿಣ ಆಫ್ರಿಕಾದ ಆಟಗಾರರು ಐವರು ಸ್ಪಿನ್ನರ್‌ಗಳ ಜತೆ ಕಠಿನ ಅಭ್ಯಾಸ ನಡೆಸಿದರೂ ಅವರ ಬ್ಯಾಟಿಂಗ್ ಪ್ರಗತಿ ಕಾಣಲಿಲ್ಲ. ಆದರೆ ಡಿ’ವಿಲಿಯರ್ ತಂಡಕ್ಕೆ ಸೇರ್ಪಡೆಯಾಗಿದ್ದರಿಂದ ತಂಡದ ಬಲ ಹೆಚ್ಚಾಗಿದೆ. ಅವರ ಉಪಸ್ಥಿತಿಯಿಂದ ತಂಡ ಏನಾದರೂ ಮ್ಯಾಜಿಕ್ ಮಾಡುತ್ತದೆಯೇ ನೋಡಬೇಕಾಗಿದೆ. ಬೆರಳ ಗಾಯದಿಂದ ಡಿ’ವಿಲಿಯರ್ ಮೊದಲ ಮೂರು ಪಂದ್ಯಗಳಲ್ಲಿ ಆಡಿರಲಿಲ್ಲ. ಒಂದು ವೇಳೆ ಡಿ’ವಿಲಿಯರ್ ಆಡಿದರೆ ಅವರು ಮೂರನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಡ್ಯುಮಿನಿ ನಾಲ್ಕನೇ ಕ್ರಮಾಂಕಕ್ಕೆ ಜಾರಲಿದ್ದಾರೆ. ಮಿಲ್ಲರ್ ಅಥವಾ ಜೊಂಡೊ ಅವರಲ್ಲಿ ಒಬ್ಬರು ತಂಡದಿಂದ ಹೊರಗುಳಿಯಲಿದ್ದಾರೆ. ತಂಡವನ್ನು ಐಡೆನ್ ಮಾರ್ಕ್‌ರಮ್ ಮುನ್ನಡೆಸಲಿದ್ದಾರೆ.
ಪಿಂಕ್ ಏಕದಿನ
ಸ್ತನ ಕ್ಯಾನ್ಸರ್ ವಿರುದ್ಧ ಜಾಗೃತಿ ಮೂಡಿಸಲು ಮತ್ತು ಈ ರೋಗದಿಂದ ಬಳಲುತ್ತಿರುವ ಮಂದಿಗೆ ನೆರವಾಗಲು ಈ ಪಂದ್ಯವನ್ನು “ಪಿಂಕ್ ಏಕದಿನ’ವನ್ನಾಗಿ ಆಡಿಸಲಾಗುತ್ತದೆ. ಇಂತಹ ಪಂದ್ಯ 2011ರಲ್ಲಿ ಮೊದಲ ಬಾರಿ ಆಡಿಸಲಾಗಿತ್ತು. ಇದು ಆರನೇ ಪಂದ್ಯವಾಗಿದೆ. ಪಿಂಕ್ ಜರ್ಸಿಯಲ್ಲಿ ಆಡುತ್ತಿರುವ ವೇಳೆ ದಕ್ಷಿಣ ಆಫ್ರಿಕಾ ಒಮ್ಮೆಯೂ ಸೋತದ್ದಿಲ್ಲ. ಪಿಂಕ್ ಏಕದಿನದಲ್ಲಿ ಡಿ’ವಿಲಿಯರ್ ಉತ್ತಮ ನಿರ್ವಹಣೆ ದಾಖಲಿಸಿದ್ದಾರೆ. 2015ರಲ್ಲಿ ಅವರು ವೆಸ್ಟ್‌ಇಂಡೀಸ್ ವಿರುದ್ದ ಕೇವಲ 44 ಎಸೆತಗಳಲ್ಲಿ 149 ರನ್ ಹೊಡೆದಿದ್ದರು. 2013ರಲ್ಲಿ ಭಾರತ ಮೊದಲ ಬಾರಿ ಪಿಂಕ್ ಏಕದಿನದಲ್ಲಿ ಆಡಿದಾಗ ಡಿ’ವಿಲಿಯರ್ 47 ಎಸೆತಗಳಿಂದ 77 ರನ್ ಹೊಡೆದಿದ್ದರು.
ಸಂಭಾವ್ಯ ತಂಡಗಳು
ಭಾರತ: ರೋಹಿತ್ ಶರ್ಮ, ಶಿಖರ್ ಧವನ್, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ಎಂಎಸ್ ಧೋನಿ, ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಕುಲದೀಪ್ ಯಾದವ್, ಜಸ್‌ಪ್ರೀತ್ ಬುಮ್ರಾ, ಯುಜುವೇಂದ್ರ ಚಾಹಲ್
ದಕ್ಷಿಣ ಆಫ್ರಿಕಾ: ಹಾಶಿಮ್ ಆಮ್ಲ, ಐಡೆನ್ ಮಾರ್ಕ್‌ರಾಮ್ (ನಾಯಕ), ಜೀನ್‌ಪಾಲ್ ಡ್ಯುಮಿನಿ, ಖಾಯ ಝೊಂಡೊ, ಡೇವಿಡ್ ಮಿಲ್ಲರ್, ಫರ್ಹಾನ್ ಬೆಹರ್ಡಿನ್, ಹೆನ್ರಿಚ್ ಕ್ಲಾಸೆನ್, ಕ್ರಿಸ್ ಮೊರಿಸ್, ಕಾಗಿಸೊ ರಬಾಡ, ಮಾರ್ನೆ ಮಾರ್ಕೆಲ್, ಇಮ್ರಾನ್ ತಾಹಿರ್
ಪಂದ್ಯ ಆರಂಭ: ಸಂಜೆ 4.30
ಪ್ರಸಾರ: ಸೋನಿ ಟೆನ್ ನೆಟ್‌ವರ್ಕ್
ಪಿಚ್ ಹೀಗಿದೆ
ಟೆಸ್ಟ್ ಸರಣಿಗೆ ಸೂಕ್ತವಾದ ನ್ಯೂಲ್ಯಾಂಡ್ಸ್ ಪಿಚ್ ದಕ್ಷಿಣ ಆಫ್ರಿಕಾ ಪಾಲಿಗೆ ಶುಭದಾಯಕ ಎನಿಸಿಕೊಂಡಿದೆ. ಸೀಮ್ ಬೌಲರ್‌ಗಳಿಗೆ ಸ್ವಲ್ಪಮಟ್ಟಿಗೆ ನೆರವಾಗುವ ಸಾಧ್ಯತೆಯಿದ್ದರೂ ಈ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚಿನ ಪ್ರಯೋಜನ ನೀಡುತ್ತಿದೆ. ಕಳೆದ ಆರು ಏಕದಿನ ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಸರಾಸರಿಯಾಗಿ 300 ಪ್ಲಸ್ ರನ್ ಗಳಿಸಿದೆ. ದಿನವಿಡೀ ಬಿಸಿಲು ಇರಲಿದ್ದು ಮಧ್ಯಾಹ್ನ 30 ಡಿಗ್ರಿ ತಾಪಮಾನ ಇರಲಿದೆ.
ಅಂಕಿ ಅಂಶ
* ನ್ಯೂಲ್ಯಾಂಡ್ಸ್ ದಕ್ಷಿಣ ಆಫ್ರಿಕಾದ ನೆಚ್ಚಿನ ತಾಣವಾಗಿದೆ. ಇಲ್ಲಿ ಆಡಿದ 33 ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ 28 ಪಂದ್ಯಗಳಲ್ಲಿ ಗೆದ್ದಿದೆ.
* ದ್ವಿಪಕ್ಷೀಯ ಏಕನಿರ ಸರಣಿಯಲ್ಲಿ ಭಾರತ ಈ ಹಿಂದೆ ದಕ್ಷಿಣ ಆಫ್ರಿಕಾವನ್ನು 2010ರ ಫೆಬ್ರವರಿಯಲ್ಲಿ ನಡೆದ ಪಂದ್ಯದಲ್ಲಿ ಸೋಲಿಸಿತ್ತು.
* ಸದ್ಯದ ದಕ್ಷಿಣ ಆಫ್ರಿಕಾ ತಂಡದಲ್ಲಿ ಡ್ಯುಮಿನಿ ಈ ಪಿಚ್‌ನಲ್ಲಿ ಶ್ರೇಷ್ಠ ನಿರ್ವಹಣೆ ನೀಡಿದ್ದಾರೆ. ಆಡಿದ 8 ಪಂದ್ಯಗಳಲ್ಲಿ ಅವರು ಮೂರು ಅರ್ಧಶತಕ ಸಹಿತ 301 ರನ್ ಹೊಡೆದಿದ್ದಾರೆ. ಹಾಶಿಮ್ ಆಮ್ಲ ಆರು ಪಂದ್ಯವನ್ನಾಡಿದ್ದು ಎರಡು ಅರ್ಧಶತಕ ಸಹಿತ 190 ರನ್ ಗಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Sydney: ಆಸ್ಟ್ರೇಲಿಯಾ ಪ್ರೇಕ್ಷಕರಿಗೆ ಸ್ಯಾಂಡ್‌ಪೇಪರ್ ಕೇಸ್ ನೆನಪು ಮಾಡಿದ ವಿರಾಟ್|Video
World Test Championship: ಭಾರತದ ಕನಸು ಛಿದ್ರ; ಆಸೀಸ್ ಫೈನಲ್ ಸ್ಥಾನ ಭದ್ರ
INDvAUS: ಸಿಡ್ನಿಯಲ್ಲಿ ಸೋಲು; ದಶಕದ ಬಳಿಕ ಬಾರ್ಡರ್ ಗಾವಸ್ಕರ್ ಟ್ರೋಫಿ ಸೋತ ಭಾರತ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.