ಇಂದಿನಿಂದ ಐಪಿಎಲ್‌ ಹವಾ: ಹತ್ತು ತಂಡಗಳು ಚಿತ್ತಾರ ಮೂಡಿಸುವ ಹೊತ್ತು; ತವರಿಗೆ ಮರಳಿದ ಐಪಿಎಲ್‌

2011ರ ಬಳಿಕ 10 ತಂಡಗಳ ಮೇಲಾಟ ; ಕ್ರಿಕೆಟ್‌ ಪ್ರೇಮಿಗಳಿಗೆ ಎರಡು ತಿಂಗಳ ಕಾಲ ಭರಪೂರ ಹಬ್ಬ

Team Udayavani, Mar 26, 2022, 7:45 AM IST

ಇಂದಿನಿಂದ ಐಪಿಎಲ್‌ ಹವಾ: ಹತ್ತು ತಂಡಗಳು ಚಿತ್ತಾರ ಮೂಡಿಸುವ ಹೊತ್ತು; ತವರಿಗೆ ಮರಳಿದ ಐಪಿಎಲ್‌

ಮುಂಬಯಿ: ಇಂದು ಹತ್ತು ತಂಡಗಳು ಚಿತ್ತಾರ ಮೂಡಿಸುವ ಹೊತ್ತು. ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್‌ ಲೀಗ್‌ ಆಗಿರುವ ಐಪಿಎಲ್‌ನ 15ನೇ ಆವೃತ್ತಿ ಗರಿಗೆದರುವ ಸಮಯ. ಮಾರ್ಚ್‌ 26ರ ಶನಿವಾರದಿಂದ ಮೊದಲ್ಗೊಂಡು ಮೇ 29ರ ತನಕ ಬರೋಬ್ಬರಿ 2 ತಿಂಗಳ ಕಾಲ ಕ್ರಿಕೆಟ್‌ ಪ್ರೇಮಿಗಳು ಭರಪೂರ ಸಂಭ್ರಮವನ್ನು ಆಚರಿಸುವ ಪರ್ವಕಾಲ. ಭಾರತವಷ್ಟೇ ಅಲ್ಲ, ಕ್ರೀಡಾ ಜಗತ್ತೇ ಈ ಚುಟುಕು ಕ್ರಿಕೆಟಿನ ಕೌತುಕ, ರೋಮಾಂಚನ, ರಸದೌತಣವನ್ನು ಆಸ್ವಾದಿಸಲು ತುದಿಗಾಲಲ್ಲಿ ನಿಂತಿದೆ.

ಕಳೆದ ವರ್ಷದ ಫೈನಲಿಸ್ಟ್‌ ತಂಡಗಳಾದ, ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ರನ್ನರ್ ಅಪ್‌ ಕೋಲ್ಕತಾ ನೈಟ್‌ರೈಡರ್ ಶನಿವಾರದ ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಮುಂಬಯಿಯ “ವಾಂಖೇಡೆ ಸ್ಟೇಡಿಯಂ’ನಲ್ಲಿ ಚೆಂಡು-ದಾಂಡಿನ ಕದನಕ್ಕೆ ಚಾಲನೆ ಲಭಿಸಲಿದೆ.

ಹತ್ತು-ಹಲವು ವಿಶೇಷ
ಭಾರತದ ಈ ಮಹೋನ್ನತ ಕ್ರಿಕೆಟ್‌ ಲೀಗ್‌ ತವರಿಗೆ ಮರಳಿದ್ದು, ಶೇ. 25ರಷ್ಟು ವೀಕ್ಷಕರಿಗೆ ಅವಕಾಶ ಕಲ್ಪಿಸಿದ್ದು, 2011ರ ಬಳಿಕ ಮೊದಲ ಸಲ 10 ತಂಡಗಳು ಸ್ಪರ್ಧೆಗಿಳಿದದ್ದು, ಬಹುತೇಕ ತಂಡಗಳ ನಾಯಕತ್ವದಲ್ಲಿ ಬದಲಾವಣೆ ಸಂಭವಿಸಿದ್ದು, ಮೆಗಾ ಹರಾಜಿನ ಬಳಿಕ ಹೆಚ್ಚಿನ ಸ್ಟಾರ್‌ ಆಟಗಾರರು ಮೂಲ ತಂಡದಿಂದ ಬೇರೆ ಬೇರೆ ತಂಡಗಳ ಪಾಲಾದದ್ದು, ತಂಡಗಳಲ್ಲಿ ಹೊಸ ಗಾಳಿ ಬೀಸಿದ್ದೆಲ್ಲ ಈ ಐಪಿಎಲ್‌ನ ವಿಶೇಷಗಳು. ಹಾಗೆಯೇ ಭಾರತಕ್ಕೆ ಅಂಡರ್‌-19 ವಿಶ್ವಕಪ್‌ ಗೆದ್ದು ತಂದ ಕಿರಿಯ ಸ್ಟಾರ್‌ ಆಟಗಾರರಿಗೂ ಐಪಿಎಲ್‌ ಬಾಗಿಲು ತೆರೆದಿರುವುದು ಮಹತ್ವದ ಬೆಳವಣಿಗೆ.

ಟಿ20 ವಿಶ್ವಕಪ್‌ ಇದೇ ವರ್ಷ ನಡೆಯಲಿರುವುದರಿಂದ ಈ ಬಾರಿಯ ಐಪಿಎಲ್‌ “ವರ್ಲ್ಡ್ ಕಪ್‌ ಬಿಗ್‌ ಶೋ’ಗೆ ವೇದಿಕೆಯೂ ಹೌದು. ಹಾಗೆಯೇ ಆಯಾ ರಾಷ್ಟ್ರೀಯ ತಂಡಗಳಿಗೆ ಮರಳುವ ಆಟಗಾರರ ಪ್ರತಿಭಾ ಸಾಮರ್ಥ್ಯವೂ ಇಲ್ಲಿ ಅನಾವರಣಗೊಳ್ಳಬೇಕಿದೆ. ಹಾರ್ಡ್‌ ಹಿಟ್ಟಿಂಗ್‌ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಇದಕ್ಕೊಂದು ಉತ್ತಮ ಉದಾಹರಣೆ. ಅವರು ಈ ಬಾರಿ ನೂತನ ಗುಜರಾತ್‌ ಟೈಟಾನ್ಸ್‌ ತಂಡದ ನಾಯಕರಾಗಿ ಅದೃಷ್ಟ ಪರೀಕ್ಷೆಗೆ ಇಳಿಯುವರು.

ಈ ನಡುವೆ ರವಿಶಾಸ್ತ್ರಿ ಕಮೆಂಟ್ರಿ ಬಾಕ್ಸ್‌ಗೆ ಮರಳಿದ್ದಾರೆ. ಚೆನ್ನೈ ತಂಡಕ್ಕೆ ಬೇಡವಾದ ಸುರೇಶ್‌ ರೈನಾ ವೀಕ್ಷಕ ವಿವರಣಕಾರನ ಇನ್ನಿಂಗ್ಸ್‌ ಆರಂಭಿಸುವುದೊಂದು ವಿಶೇಷ.

ಗೇಲ್‌, ಎಬಿಡಿ ಇಲ್ಲದ ಟೂರ್ನಿ
ಬಿಗ್‌ ಹಿಟ್ಟರ್‌ಗಳಾದ ಕ್ರಿಸ್‌ ಗೇಲ್‌, ಎಬಿ ಡಿ ವಿಲಿಯರ್, ಸುರೇಶ್‌ ರೈನಾ ಇಲ್ಲದ ಐಪಿಎಲ್‌ ಕೂಡ ಇದಾಗಿದೆ. ಧೋನಿ ಚೆನ್ನೈ ನಾಯಕತ್ವ ತ್ಯಜಿಸಿದ್ದು ಅಚ್ಚರಿಯ ಬೆಳವಣಿಗೆ. ಐಪಿಎಲ್‌ ವಿಜೇತ ಮೊದಲ ನಾಯಕ, ರಾಜಸ್ಥಾನ ರಾಯಲ್ಸ್‌ನ ಮೆಂಟರ್‌ ಆಗಿದ್ದ ಶೇನ್‌ ವಾರ್ನ್ ಅವರ ಅಕಾಲಿಕ ವಿದಾಯದಿಂದ ಐಪಿಎಲ್‌ ರೋಮಾಂಚನ ಅಷ್ಟರ ಮಟ್ಟಿಗೆ ಕಡಿಮೆಯಾಗಿದೆ.

ಪಂದ್ಯಗಳ ಸಂಖ್ಯೆ ಹೆಚ್ಚಳ
ತಂಡಗಳ ಸಂಖ್ಯೆ ಹೆಚ್ಚಿದ್ದರಿಂದ ಸಹಜವಾಗಿಯೇ ಪಂದ್ಯಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. 60ರ ಬದಲು 74ಕ್ಕೆ ಏರಿದೆ. ಹೀಗಾಗಿ ಪಂದ್ಯಾವಳಿಯ ಅವಧಿಯೂ ಹೆಚ್ಚಿದೆ. ಎರಡು ತಿಂಗಳ ಗಡಿ ದಾಟಿದೆ.

ರೌಂಡ್‌ ರಾಬಿನ್‌ ಬದಲು ಗ್ರೂಪ್‌ ಮಾದರಿಯನ್ನು ಅಳವಡಿಸಲಾಗಿದೆ. ಆದರೆ ಪ್ರತಿಯೊಂದು ತಂಡ ಆಡಲಿರುವ ಲೀಗ್‌ ಪಂದ್ಯಗಳ ಸಂಖ್ಯೆ 14ಕ್ಕೇ ಸೀಮಿತಗೊಂಡಿದೆ. ಲೀಗ್‌ ಹಂತದ ಎಲ್ಲ 70 ಪಂದ್ಯಗಳು ಮಹಾರಾಷ್ಟ್ರದಲ್ಲೇ ನಡೆಯುವುದರಿಂದ ಕ್ರಿಕೆಟಿಗರಿಗೆ ವಿಮಾನ ಸಂಚಾರದ ಅಗತ್ಯ ಬೀಳುವುದಿಲ್ಲ.

ಕಳೆದ ವರ್ಷದ ಫೈನಲಿಸ್ಟ್‌
ಶನಿವಾರದ ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖೀ ಆಗಲಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ಕೋಲ್ಕತಾ ನೈಟ್‌ರೈಡರ್ 2021ರ ಫೈನಲಿಸ್ಟ್‌ ತಂಡಗಳು. ದುಬಾೖಯಲ್ಲಿ ನಡೆದ ಪ್ರಶಸ್ತಿ ಕಾಳಗದಲ್ಲಿ ಧೋನಿ ಸಾರಥ್ಯದ ಚೆನ್ನೈ 27 ರನ್ನುಗಳಿಂದ ಕೋಲ್ಕತಾವನ್ನು ಮಣಿಸಿ 4ನೇ ಸಲ ಪ್ರಶಸ್ತಿ ಎತ್ತಿತ್ತು.

ಚೆನ್ನೈ 3 ವಿಕೆಟಿಗೆ 192 ರನ್‌ ಪೇರಿಸಿ ಸವಾಲೊಡ್ಡಿತ್ತು. ಕೆಕೆಆರ್‌ ಆರಂಭ ಅಮೋಘ ಮಟ್ಟದಲ್ಲಿತ್ತು. ಶುಭಮನ್‌ ಗಿಲ್‌ (51) ಮತ್ತು ವೆಂಕಟೇಶ ಅಯ್ಯರ್‌ (50) ಆರಂಭಿಕ ವಿಕೆಟಿಗೆ 10.4 ಓವರ್‌ಗಳಲ್ಲಿ 91 ರನ್‌ ಪೇರಿಸಿ ಚೆನ್ನೈಗೆ ಸಡ್ಡು ಹೊಡೆದರು. ಆದರೆ ಈ ಜೋಡಿ ಬೇರ್ಪಟ್ಟೊಡನೆ ತೀವ್ರ ಕುಸಿತಕ್ಕೆ ಸಿಲುಕಿದ ಕೆಕೆಆರ್‌ 9 ವಿಕೆಟಿಗೆ 165 ರನ್‌ ಗಳಿಸಿ ಶರಣಾಯಿತು.

ನೂತನ ನಾಯಕರು
ಈ ಬಾರಿ ಎರಡೂ ತಂಡಗಳಿಗೆ ನೂತನ ನಾಯಕರಿದ್ದಾರೆ-ಚೆನ್ನೈಗೆ ರವೀಂದ್ರ ಜಡೇಜ, ಕೆಕೆಆರ್‌ಗೆ ಶ್ರೇಯಸ್‌ ಅಯ್ಯರ್‌. ಇಬ್ಬರೂ ಟೀಮ್‌ ಇಂಡಿಯಾದ ಸ್ಟಾರ್‌ ಆಟಗಾರರು. ಇಬ್ಬರೂ ಏಕದಿನ ವಿಶ್ವಕಪ್‌ ವಿಜೇತ ನಾಯಕರಾದ ಮಹೇಂದ್ರ ಸಿಂಗ್‌ ಧೋನಿ ಮತ್ತು ಇಯಾನ್‌ ಮಾರ್ಗನ್‌ ಸ್ಥಾನಕ್ಕೆ ಬಂದಿರುವುದು ಉಲ್ಲೇಖನೀಯ. ಇವರಲ್ಲಿ ಜಡ್ಡು ಮೊದಲ ಸಲ ಐಪಿಎಲ್‌ ನಾಯಕತ್ವ ವಹಿಸುತ್ತಿದ್ದು, ಇವರ ಅದೃಷ್ಟ ಹೇಗಿದೆ ಎಂಬುದು ಚೆನ್ನೈ ಅಭಿಮಾನಿಗಳ ಕುತೂಹಲ. ಶ್ರೇಯಸ್‌ ಅಯ್ಯರ್‌ ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ದಾಖಲೆ ಹೊಂದಿದ್ದಾರೆ. 2020ರಲ್ಲಿ ಡೆಲ್ಲಿಯನ್ನು ಮೊದಲ ಸಲ ಪ್ರಶಸ್ತಿ ಸುತ್ತಿಗೆ ಕೊಂಡೊಯ್ದದ್ದು ಅಯ್ಯರ್‌ ಹೆಗ್ಗಳಿಕೆ. ಅಲ್ಲಿ ಡೆಲ್ಲಿ ಪಡೆ ಮುಂಬೈಗೆ ಶರಣಾಗಿ ಪ್ರಶಸ್ತಿ ವಂಚಿತವಾಗಿತ್ತು.

ಚೆನ್ನೈ ಸೂಪರ್‌ಕಿಂಗ್ಸ್‌
ರವೀಂದ್ರ ಜಡೇಜ (ನಾಯಕ), ಋತುರಾಜ್‌ ಗಾಯಕ್ವಾಡ್‌, ರಾಬಿನ್‌ ಉತ್ತಪ್ಪ, ಎಂ.ಎಸ್‌. ಧೋನಿ, ಅಂಬಾಟಿ ರಾಯುಡು, ಮೊಯಿನ್‌ ಅಲಿ, ಶಿವಂ ದುಬೆ, ಡ್ವೇನ್‌ ಬ್ರಾವೊ, ಮಹೇಶ್‌ ತೀಕ್ಷಣ, ತುಷಾರ್‌ ದೇಶ್‌ಪಾಂಡೆ, ಕೆ.ಎಂ. ಆಸೀಫ್, ದೀಪಕ್‌ ಚಹರ್‌, ಹಂಗರ್ಕೇಕರ್‌,ಡೇವನ್‌ ಕಾನ್ವೆ, ಡ್ವೇನ್‌ ಪ್ರಿಟೋರಿಯಸ್‌, ಮಿಚೆಲ್‌ ಸ್ಯಾಂಟ್ನರ್‌, ಆಡಮ್​ ಮಿಲ್ನೆ, ಎಸ್‌. ಸೇನಾಪತಿ, ಪ್ರಶಾಂತ್‌ ಸೋಲಂಕಿ, ಮುಕೇಶ್‌ ಚೌಧರಿ, ಹರಿ ನಿಶಾಂತ್‌, ಎನ್‌. ಜಗದೀಶನ್‌, ಕ್ರಿಸ್‌ ಜೋರ್ಡನ್‌, ಭಗತ್‌ ವರ್ಮ

ಕೋಲ್ಕತಾ ನೈಟ್‌ರೈಡರ್
ಶ್ರೇಯಸ್‌ ಅಯ್ಯರ್‌ (ನಾಯಕ), ಅಜಿಂಕ್ಯ ರಹಾನೆ, ರಿಂಕು ಸಿಂಗ್‌,ಶೆಲ್ಡನ್‌ ಕಾಟ್ರೆಲ್‌,ಆಂಡ್ರೆ ರಸೆಲ್‌, ವೆಂಕಟೇಶ್‌ ಅಯ್ಯರ್‌,ಸುನೀಲ್‌ ನಾರಾಯಣ್‌, ಶಿವಂ ಮಾವಿ,ನಿತೀಶ್‌ ರಾಣಾ,ಪ್ಯಾಟ್‌ ಕಮಿನ್ಸ್‌, ವರುಣ್‌ ಚಕ್ರವರ್ತಿ, ಅನುಕೂಲ್‌ ರಾಯ್‌,ರಾಶಿಕ್‌ ಸಲಾಂ,ಬಾಬಾ ಇಂದ್ರಜಿತ್‌, ಚಮಿಕ ಕರುಣಾರತ್ನೆ, ಅಭಿಜಿತ್‌ ತೋಮರ್‌, ಪ್ರಥಮ್‌ ಸಿಂಗ್‌,ಅಶೋಕ್‌ ಶರ್ಮ,ಆರನ್‌ ಫಿಂಚ್‌, ಟಿಮ್‌ ಸೌಥಿ, ರಮೇಶ್‌ ಕುಮಾರ್‌, ಉಮೇಶ್‌ ಯಾದವ್‌,ಮೊಹಮ್ಮದ್‌ ನಬಿ, ಸ್ಯಾಮ್‌ ಬಿಲ್ಲಿಂಗ್ಸ್‌, ಶೆಲ್ಡನ್‌ ಜಾಕ್ಸನ್‌

ಇಂದಿನ ಪಂದ್ಯ
ಚೆನ್ನೈ vs ಕೆಕೆಆರ್‌
ಆರಂಭ: 7.30 ಸ್ಥಳ: ಮುಂಬಯಿ
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ಟಾಪ್ ನ್ಯೂಸ್

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

2-biggboss

BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

Mangaluru: ಅಪ್ರಾಪ್ತ ಬಾಲಕಿಯ ಅತ್ಯಾ*ಚಾರ: ಗರ್ಭಪಾತ ಪ್ರಕರಣ ಅಪರಾಧಿಗೆ 20 ವರ್ಷ ಜೈಲು

ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

1-a-JG

Eden Gardens; ‘ಬಿ’ ಬ್ಲಾಕ್‌ಗೆ ಜೂಲನ್‌ ಗೋಸ್ವಾಮಿ ಹೆಸರಿಡಲು ನಿರ್ಧಾರ

PCB

PCB; ಚಾಂಪಿಯನ್ಸ್‌ ಟ್ರೋಫಿಗೆ ಅಧಿಕಾರಿಯ ನೇಮಕ

1-sehwag

Cooch Behar Trophy: ಸೆಹವಾಗ್‌ ಪುತ್ರನಿಂದ ದ್ವಿಶತಕ

1-tt

Pro Kabaddi; ವಿಜಯ್‌ ಮಲಿಕ್‌ ಅಮೋಘ ಆಟ: ತೆಲುಗು ಟೈಟಾನ್ಸ್‌ ಗೆ ಗೆಲುವು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

2-biggboss

BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.