ಇಂದು ಭಾರತ-ಇಂಗ್ಲೆಂಡ್ ಅಭ್ಯಾಸ ಪಂದ್ಯ
Team Udayavani, Oct 18, 2021, 6:17 AM IST
ದುಬಾೖ: ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗಾಗಿ ಸೋಮವಾರ ಭಾರತ-ಇಂಗ್ಲೆಂಡ್ ದುಬಾೖಯಲ್ಲಿ ಅಭ್ಯಾಸ ಪಂದ್ಯವನ್ನು ಆಡಲಿವೆ. ತಂಡದ ಸೂಕ್ತ ಕಾಂಬಿನೇಶನ್ ಒಂದನ್ನು ರಚಿಸುವುದು ಇತ್ತಂಡಗಳ ಗುರಿಯಾಗಿದೆ.
ಈಗಾಗಲೇ ಸೂಪರ್-12 ವಿಭಾಗದಲ್ಲಿರುವ 8 ತಂಡಗಳಿಗೆ ತಲಾ ಎರಡು ಅಭ್ಯಾಸ ಪಂದ್ಯಗಳನ್ನು ಆಯೋ ಜಿಸಲಾಗಿದೆ. ಒಂದು ಅಪರಾಹ್ನ, ಇನ್ನೊಂದು ರಾತ್ರಿ ನಡೆಯಲಿದೆ. ಅದರಂತೆ ಭಾರತ ಬುಧವಾರ ಆಸ್ಟ್ರೇಲಿಯ ವಿರುದ್ಧ ಆಡಲಿದೆ.
ಯುಎಇಯಲ್ಲೇ ಐಪಿಎಲ್ ಆಡಿ ಮುಗಿಸಿರುವ ಭಾರತದ ಬಹುತೇಕ ಆಟಗಾರರಿಗೆ ಇಲ್ಲಿನ ವಾತಾವರಣ, ಇಲ್ಲಿನ ಟ್ರ್ಯಾಕ್‌ಗಳು ಸಾಕಷ್ಟು ಪರಿಚಿತವಾಗಿವೆ. ಆಡುವ ಬಳಗವನ್ನು ಅಂತಿಮಗೊಳಿಸುವುದೊಂದೇ ಸವಾಲು.
ಓಪನಿಂಗ್ ಜೋಡಿ ಯಾರು?
ರೋಹಿತ್ ಶರ್ಮ ಅವರಿಗೆ ಓಪನಿಂಗ್ ಜತೆಗಾರರು ಯಾರು ಎಂಬುದು ಭಾರತದ ಮುಖ್ಯ ಪ್ರಶ್ನೆ. ಇಲ್ಲಿ ಕೆ.ಎಲ್. ರಾಹುಲ್ ಮತ್ತು ಇಶಾನ್ ಕಿಶನ್ ರೇಸ್‌ನಲ್ಲಿದ್ದಾರೆ. ಆದರೆ ಐಪಿಎಲ್‌ನಲ್ಲಿ 30 ಸಿಕ್ಸರ್ ಸೇರಿದಂತೆ 626 ರನ್ ಪೇರಿಸಿರುವ ರಾಹುಲ್ ಅವರೇ ಮೊದಲ ಆಯ್ಕೆ ಆಗುವುದು ನಿಶ್ಚಿತ. ಆಗ ಇಶಾನ್ ಕಿಶನ್ 6ನೇ ಕ್ರಮಾಂಕದಲ್ಲಿ ಆಡಲಿಳಿಯಬಹುದು. ಕಿಶನ್ ಕೀಪರ್ ಕೂಡ ಹೌದು. ಆದರೆ ಇಲ್ಲಿ ರಿಷಭ್ ಪಂತ್ ಅವರೇ ಈ ಜವಾಬ್ದಾರಿ ನಿಭಾಯಿಸಲಿದ್ದಾರೆ.
ಸ್ಪಿನ್ ವಿಭಾಗದಲ್ಲೂ ಸ್ಪರ್ಧೆ ಇದೆ. ರವೀಂದ್ರ ಜಡೇಜ, ವರುಣ್ ಚಕ್ರವರ್ತಿ, ರಾಹುಲ್ ಚಹರ್, ಆರ್. ಅಶ್ವಿನ್ ಅವರಲ್ಲಿ ಯಾರಿಗೆಲ್ಲ ಚಾನ್ಸ್ ಸಿಗಲಿದೆ ಎಂಬುದೊಂದು ಕೌತುಕ.
ಇದನ್ನೂ ಓದಿ:ಟಿ20 ವಿಶ್ವಕಪ್ ಅರ್ಹತಾ ಸುತ್ತಿನ ಮೊದಲ ಪಂದ್ಯ: ಒಮಾನ್‌ಗೆ 10 ವಿಕೆಟ್ ಭರ್ಜರಿ ಗೆಲುವು
ವೇಗದ ವಿಭಾಗದಲ್ಲಿ ಜಸ್‌ಪ್ರೀತ್ ಬುಮ್ರಾ ತಂಡದ ಕೀ ಬೌಲರ್ ಆಗಿದ್ದಾರೆ. ಭುವನೇಶ್ವರ್ ಕುಮಾರ್ ಕೂಡ ಕ್ಲಿಕ್ ಆಗಬಲ್ಲರೆಂಬ ವಿಶ್ವಾಸವಿದೆ. ಶಾದೂìಲ್ ಠಾಕೂರ್ ಸೇರ್ಪಡೆಯಿಂದ ಆಲ್‌ರೌಂಡ್ ವಿಭಾಗ ಗಟ್ಟಿಗೊಂಡಿದೆ.
ಇಂಗ್ಲೆಂಡಿಗೆ ನಾಯಕ ಇಯಾನ್ ಮಾರ್ಗನ್ ಅವರ ಬ್ಯಾಟಿಂಗ್ ಫಾರ್ಮ್ ಬಗ್ಗೆ ಚಿಂತೆ ಇದೆ. ಉಳಿದಂತೆ ಬಟ್ಲರ್, ಬೇರ್‌ಸ್ಟೊ, ರಾಯ್, ಲಿವಿಂಗ್‌ಸ್ಟೋನ್, ಅಲಿ ಮೊದಲಾದ ಟಿ20 ಸ್ಪೆಷಲಿಸ್ಟ್‌ಗಳು ತಂಡದಲ್ಲಿದ್ದಾರೆ.
ಕೊಹ್ಲಿಗಾಗಿ ಕಪ್ ಗೆಲ್ಲಿ: ರೈನಾ
ಹೊಸದಿಲ್ಲಿ: ವಿರಾಟ್ ಕೊಹ್ಲಿ ಅವರ ಟಿ20 ನಾಯಕತ್ವ ವಿದಾಯವನ್ನು ಸ್ಮರಣೀಯಗೊಳಿಸುವ ಉದ್ದೇಶದಿಂದ ಟೀಮ್ ಇಂಡಿಯಾ ಮುಂದಿನ ಟಿ20 ವಿಶ್ವಕಪ್ ಗೆಲ್ಲಬೇಕಿದೆ ಎಂಬುದಾಗಿ ಮಾಜಿ ಆಟಗಾರ ಸುರೇಶ್ ರೈನಾ ಹೇಳಿದ್ದಾರೆ.
“ಭಾರತ ತಂಡಕ್ಕೆ ನನ್ನ ಸಂದೇಶ ಒಂದೇ, ಡೂ ಇಟ್ ಫಾರ್ ವಿರಾಟ್ ಕೊಹ್ಲಿ’ ಎಂಬುದಾಗಿ ರೈನಾ ತಮ್ಮ ಐಸಿಸಿ ಕಾಲಂನಲ್ಲಿ ಬರೆದಿದ್ದಾರೆ.
“ವಿರಾಟ್ ಕೊಹ್ಲಿ ಈ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಕೊನೆಯ ಸಲ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ನಾವೆಲ್ಲರೂ ಕೊಹ್ಲಿ ಹಿಂದಿದ್ದೇವೆ ಎಂಬ ರೀತಿಯಲ್ಲಿ ನಂಬಿಕೆ ಮೂಡುವಂತೆ ಆಡಿ ತಂಡವನ್ನು ಗೆಲ್ಲಿಸಬೇಕಿದೆ. ಭಾರತ ತಂಡದಲ್ಲಿ ಸಾಮರ್ಥ್ಯವಿದೆ, ಇದನ್ನು ಅಂಗಳದಲ್ಲಿ ಸಾಕಾರಗೊಳಿಸಬೇಕಿದೆ’ ಎಂದು ರೈನಾ ಹೇಳಿದರು.
“ಯುಎಇಯ ಕಠಿನ ಟ್ರ್ಯಾಕ್‌ಗಳಲ್ಲಿ ಬ್ಯಾಟಿಂಗೇ ದೊಡ್ಡ ಸವಾಲು. ಹೀಗಾಗಿ ಟಾಪ್-3 ಆಟಗಾರರಾದ ರೋಹಿತ್, ರಾಹುಲ್ ಮತ್ತು ಕೊಹ್ಲಿ ಅವರ ಸಾಮರ್ಥ್ಯವನ್ನು ಭಾರತ ಅವಲಂಬಿಸಿದೆ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chess player; ಕುಟುಂಬ ಸಮೇತ ಮೋದಿ ಭೇಟಿಯಾದ ಕೊನೆರು ಹಂಪಿ
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.