ಟೈಟಾನ್ಸ್‌ಗೆ ಇಂದು ಪಾಟ್ನಾ ಎದುರಾಳಿ
Team Udayavani, Aug 3, 2017, 7:25 AM IST
ಹೈದರಾಬಾದ್: ಹಾಲಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ತಂಡವು ಗುರುವಾರ ನಡೆಯುವ ಪ್ರೊ ಕಬಡ್ಡಿ ಲೀಗ್ 5ರ ಹೈದರಾಬಾದ್ ಚರಣದ ಅಂತಿಮ ಪಂದ್ಯದಲ್ಲಿ ಆತಿಥೇಯ ತೆಲುಗು ಟೈಟಾನ್ಸ್ ತಂಡವನ್ನು ಎದುರಿಸಲಿದ್ದು ಗೆಲುವಿನ ಉತ್ಸಾಹದಲ್ಲಿದೆ.
ತನ್ನ ಮೊದಲ ಪಂದ್ಯದಲ್ಲಿ ಪಾಟ್ನಾ ತಂಡವು ತೆಲುಗು ತಂಡವನ್ನು 35-29 ಅಂಕಗಳಿಂದ ಉರುಳಿಸಿತ್ತು. ಪಾಟ್ನಾ ಗೆಲುವಿನಲ್ಲಿ ಪ್ರದೀಪ್ ನರ್ವಾಲ್ ಅವರ ಆಟ ನಿರ್ಣಾಯಕವಾಗಿತ್ತು. 15 ಅಂಕ ಗಳಿಸಿದ್ದ ನರ್ವಾಲ್ ತಂಡದ ಗೆಲುವಿನ ರೂವಾರಿಯಾಗಿದ್ದರು. ಆರಂಭದಲ್ಲಿ ಆತಿಥೇಯ ತೆಲುಗು ಮೇಲುಗೈ ಸಾಧಿಸಿದ್ದರೂ ಪಂದ್ಯ ಸಾಗುತಿªದ್ದಂತೆ ಪಾಟ್ನಾ ಹಿಡಿತ ಸಾಧಿಸುತ್ತ ಹೋಯಿತು. ಅಂತಿಮ ಹಂತದಲ್ಲಿ ಹಲವು ಅಂಕಗಳನ್ನು ಪಡೆಯುವ ಮೂಲಕ ಪಾಟ್ನಾ ಜಯಭೇರಿ ಬಾರಿಸಿತ್ತು. ಗುರುವಾರದ ಪಂದ್ಯ ದಲ್ಲಿಯೂ ಪಾಟ್ನಾ ಮತ್ತೆ ಜಯದ ವಿಶ್ವಾಸದಲ್ಲಿದೆ.
ತವರಿನಲ್ಲಿ ನಡೆಯುತ್ತಿರುವ ಈ ಕೂಟದಲ್ಲಿ ತೆಲುಗು ಟೈಟಾನ್ಸ್‌ಗೆ ಅದೃಷ್ಟ ಕೈಕೊಡುತ್ತಿದೆ. ಆರಂಭಿಕ ಪಂದ್ಯದಲ್ಲಿ ಹೊಸ ತಂಡವಾದ ತಮಿಳ್ ತಲೈವಾಸ್ ವಿರುದ್ಧ 32-27 ಅಂಕಗಳಿಂದ ಜಯ ಸಾಧಿಸಿದ್ದ ತೆಲುಗು ಈ ಬಳಿಕ ಸತತ ಮೂರು ಪಂದ್ಯಗಳಲ್ಲಿ ಸೋತು ಆಘಾತಕ್ಕೆ ಒಳಗಾಗಿದೆ. ಗುರುವಾರದ ಪಂದ್ಯ ಹೈದರಾಬಾದ್ ಚರಣದಲ್ಲಿ ನಡೆಯುವ ಅಂತಿಮ ಪಂದ್ಯವಾಗಿದೆ.
ಆ. 4ರಿಂದ ಬೆಂಗಳೂರು ಚರಣದ ಪಂದ್ಯಗಳು ಆರಂಭವಾಗಲಿದೆ. ಕಂಠೀರವ ಕ್ರೀಡಾಂಗಣ ಲಭ್ಯವಿಲ್ಲದ ಕಾರಣ ಬೆಂಗಳೂರು ಚರಣದ ಪಂದ್ಯಗಳು ನಾಗ್ಪುರಕ್ಕೆ ಸ್ಥಳಾಂತರಗೊಂಡಿವೆ.
ತೆಲುಗು ಟೈಟಾನ್ಸ್ ಹೈದರಾಬಾದ್ ಚರಣದಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಜಯ ಸಾಧಿಸಿ ಆರಂಕ ಪಡೆದಿದೆ. ವಲಯ “ಬಿ’ಯಲ್ಲಿ ಇರುವ ತೆಲುಗು ಸದ್ಯ ಅಗ್ರಸ್ಥಾನದಲ್ಲಿದೆ. ಒಂದೇ ಪಂದ್ಯ ಆಡಿರುವ ಪಾಟ್ನಾ ಐದಂಕ ಹೊಂದಿದೆ. ವಲಯ “ಎ’ಯಲ್ಲಿ ಎರಡು ಪಂದ್ಯ ಆಡಿರುವ ಡೆಲ್ಲಿ ದಬಾಂಗ್ ಆರಂಕದೊಂದಿಗೆ ಅಗ್ರಸ್ಥಾನದಲ್ಲಿದ್ದರೆ ಯು ಮುಂಬಾ 5 ಅಂಕದೊಂದಿಗೆ ದ್ವಿತೀಯ ಸ್ಥಾನದಲ್ಲಿದೆ.
ತವರಿನ ಪಂದ್ಯಗಳಲ್ಲಿ ಆತಿಥೇಯ ತಂಡ ಮೇಲುಗೈ ಸಾಧಿಸಬೇಕಿತ್ತು. ತವರಿನ ಅಂಗಣ ಮತ್ತು ಅಭಿಮಾನಿಗಳ ಸಮ್ಮುಖದಲ್ಲಿ ಪಂದ್ಯಗಳು ನಡೆಯುವ ಕಾರಣ ತೆಲುಗು ಟೈಟಾನ್ಸ್ ಭರ್ಜರಿ ಆಟ ಆಡಬೇಕಿತ್ತು. ಆದರೆ ಟೈಟಾನ್ಸ್‌ಗೆ ಅದೃಷ್ಟ ಕೈಕೊಟ್ಟಿದೆ. ಪಾಟ್ನಾ ಮತ್ತು ಬೆಂಗಳೂರು ಬುಲ್ಸ್ ವಿರುದ್ಧ ಸೋತಿದ್ದ ಟೈಟಾನ್ಸ್ ತಂಡವು ಮಂಗಳವಾರ ಇದೇ ಮೊದಲ ಬಾರಿ ಪ್ರೊ ಕಬಡ್ಡಿಯಲ್ಲಿ ಆಡಿದ ಯುಪಿ ಯೋಧಾಸ್ ವಿರುದ್ಧ ಸೋತಿದೆ.
ಈ ಸೋಲಿನಿಂದ ತಂಡದ ಆತ್ಮವಿಶ್ವಾಸಕ್ಕೆ ದೊಡ್ಡ ಪೆಟ್ಟಾಗಿದೆ. ನಮ್ಮ ತಪ್ಪುಗಳೇನು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ತಿಳಿಸಿದ ತೆಲುಗು ಟೈಟಾನ್ಸ್ ತಂಡದ ಕೋಚ್ ನವೀನ್ ಕುಮಾರ್ ವೈಯಕ್ತಿಕ ಆಟಗಾರರ ವೈಫಲ್ಯಕ್ಕಿಂತ ನಮ್ಮ ಆಟದ ತಂತ್ರಗಳಲ್ಲಿ ಬದಲಾವಣೆ ಮಾಡಬೇಕಾದ ಅಗತ್ಯ ಕಾಣುತ್ತಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.