![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, Oct 20, 2021, 6:10 AM IST
ದುಬಾೖ: ಇಂಗ್ಲೆಂಡನ್ನು 7 ವಿಕೆಟ್‌ಗಳಿಂದ ಬಗ್ಗುಬಡಿದು ಟಿ20 ವಿಶ್ವಕಪ್‌ಗೆ ಪರಿಪೂರ್ಣ ಅಭ್ಯಾಸವೊಂದನ್ನು ನಡೆಸಿದ ಭಾರತ ಬುಧವಾರದ ಕೊನೆಯ ಪ್ರ್ಯಾಕ್ಟೀಸ್ ಮ್ಯಾಚ್‌ನಲ್ಲಿ ಆಸ್ಟ್ರೇಲಿಯವನ್ನು ಎದುರಿಸಲಿದೆ.
ಇನ್ನೊಂದೆಡೆ ಕಾಂಗರೂ ಪಡೆ ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲ್ಯಾಂಡನ್ನು ಮಣಿಸಿದ ಹುರುಪಿನಲ್ಲಿದೆ. ಹೀಗಾಗಿ ಇದು ಗೆದ್ದವರ ಗುದ್ದಾಟ. ತನ್ನ ಮೊದಲ ಲೀಗ್ ಪಂದ್ಯದಲ್ಲೇ ಬದ್ಧ ಎದುರಾಳಿ ಪಾಕಿಸ್ಥಾವನ್ನು ಎದುರಿಸುವುದರಿಂದ ಭಾರತಕ್ಕೆ ಆಸೀಸ್ ಎದುರಿನ ಮುಖಾಮುಖೀ ಅತ್ಯಂತ ಮಹತ್ವದ್ದಾಗಿದೆ. ಮುಖ್ಯವಾಗಿ ಬ್ಯಾಟಿಂಗ್ ಕಾಂಬಿನೇಶನ್ ಒಂದನ್ನು ಅಂತಿಮಗೊಳಿಸಬೇಕಿದೆ.
ಇಂಗ್ಲೆಂಡ್ ಎದುರಿನ ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮ ಅವರಿಗೆ ಜೋಡಿ ಯಾರು ಎಂಬ ಚರ್ಚೆ ನಡೆದಿತ್ತು. ಆದರೆ ಅವರು ಬ್ಯಾಟಿಂಗಿಗೇ ಬರಲಿಲ್ಲ. ಕೆ.ಎಲ್. ರಾಹುಲ್-ಇಶಾನ್ ಕಿಶನ್ ಸ್ಫೋಟಕ ಆರಂಭದ ಮೂಲಕ ಆಂಗ್ಲ ಪಡೆಯನ್ನು ಬೆಚ್ಚಿ ಬೀಳಿಸಿದರು. ನಾಯಕ ಕೊಹ್ಲಿ ವನ್‌ಡೌನ್‌ನಲ್ಲಿ ಬಂದರು. ಸೂರ್ಯಕುಮಾರ್ ಯಾದವ್‌ಗೂ ಮೊದಲು ರಿಷಭ್ ಪಂತ್ ಆಗಮಿಸಿದರು.
ರೋಹಿತ್ ಓಪನಿಂಗ್
ಆಸ್ಟ್ರೇಲಿಯವ ವಿರುದ್ಧ ಆರಂಭಿಕ ಜೋಡಿ ಬದಲಾಗುವುದು ಬಹುತೇಕ ನಿಶ್ಚಿತ. ಇಲ್ಲಿ ಖಾಯಂ ಓಪನರ್ ರೋಹಿತ್ ಶರ್ಮ ಬರಬೇಕಿದೆ. ಆಗ ರಾಹುಲ್ ಅಥವಾ ಇಶಾನ್ ಕಿಶನ್, ಇಬ್ಬರಲ್ಲೊಬ್ಬರಿಗೆ ವಿಶ್ರಾಂತಿ ನೀಡಬೇಕಾ ಗುತ್ತದೆ. ಅಥವಾ ಒಬ್ಬರು ಕೆಳ ಕ್ರಮಾಂಕ ದಲ್ಲಿ ಕಾಣಿಸಿಕೊಳ್ಳಲೂಬಹುದು. ರೋಹಿತ್, ರಾಹುಲ್, ಕೊಹ್ಲಿ, ಇಶಾನ್ ಕಿಶನ್, ಸೂರ್ಯಕುಮಾರ್, ಪಂತ್… ಈ ಬ್ಯಾಟಿಂಗ್ ಸರದಿಯನ್ನು ಟಿ20 ಮುಖ್ಯ ಸಮರಕ್ಕೆ ಅಂತಿಮಗೊಳಿಸುವ ಯೋಜನೆ ಭಾರತದ್ದು.
ಆಲ್‌ರೌಂಡರ್ ಸ್ಥಾನಕ್ಕೆ ಹಾರ್ದಿಕ್ ಪಾಂಡ್ಯ ಫಿಟ್ ಆಗಲಾರರು ಎಂಬುದು ಈಗಾಗಲೇ ಸಾಬೀತಾಗಿದೆ. ಕಾರಣ, ಅವರೀಗ ಬೌಲಿಂಗ್ ನಡೆಸುವ ಸ್ಥಿತಿಯಲ್ಲಿಲ್ಲ. ಆದರೂ ಆಸ್ಟ್ರೇಲಿಯ ವಿರುದ್ಧ ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್ ಆಗಿ ಅವರು ಆಡುವ ಸಾಧ್ಯತೆ ಇದೆ. ಈ ಸ್ಥಾನಕ್ಕೆ ಶಾರ್ದೂಲ್ ಠಾಕೂರ್ ಕೂಡ ಫಿಟ್ ಆಗಬಲ್ಲರು. ರವೀಂದ್ರ ಜಡೇಜ ಹೊರತುಪಡಿಸಿದರೆ ಬೌಲಿಂಗ್, ಬ್ಯಾಟಿಂಗ್ ಎರಡರನ್ನೂ ನಿಭಾಯಿಸಬಲ್ಲ ಸಾಮರ್ಥ್ಯ ಠಾಕೂರ್ ಅವರಲ್ಲಿದೆ. ಆಸೀಸ್ ವಿರುದ್ಧ ಭುವನೇಶ್ವರ್ ಅವರನ್ನು ಕೈಬಿಟ್ಟು ಠಾಕೂರ್‌ಗೆ ಅವಕಾಶ ನೀಡುವುದು ಖಚಿತ.
ಇದನ್ನೂ ಓದಿ:ಬಾಂಗ್ಲಾ ಹಿಂದುಗಳ ರಕ್ಷಣೆಗೆ ಸಿಎಎ ಬೇಕು: ಕಾಂಗ್ರೆಸ್ ನಾಯಕ ಮಿಲಿಂದ್ ದೇವ್ರಾ!
ಇಂಗ್ಲೆಂಡ್ ಎದುರು ಅತ್ಯಂತ ದುಬಾರಿಯಾದ ಭುವನೇಶ್ವರ್ 4 ಓವರ್‌ಗಳಿಂದ 54 ರನ್ ಬಿಟ್ಟುಕೊಟ್ಟದ್ದು ಭಾರತದ ಪಾಲಿಗೆ ಚಿಂತೆಯ ಸಂಗತಿಯಾಗಿದೆ. ಉಳಿದಂತೆ ಬುಮ್ರಾ, ಅಶ್ವಿನ್ ಉತ್ತಮ ನಿಯಂತ್ರಣ ಸಾಧಿಸಿದ್ದರು. ಶಮಿ ಮೊದಲ ಸ್ಪೆಲ್‌ನಲ್ಲಿ ಘಾತಕವಾಗಿ ಪರಿಣಮಿಸಿದ್ದರು. ಅಷ್ಟೇನೂ ಪರಿಣಾಮ ಬೀರದ ರಾಹುಲ್ ಚಹರ್ ಬದಲು ವರುಣ್ ಚಕ್ರವರ್ತಿ ದಾಳಿಗಿಳಿಯುವ ಸಾಧ್ಯತೆ ಇದೆ.
ಆಸೀಸ್ ಗೆಲುವಿನ ಆರಂಭ
ಭಾರತದಂತೆ ಆರನ್ ಫಿಂಚ್ ನಾಯಕತ್ವದ ಆಸ್ಟ್ರೇಲಿಯ ಕೂಡ ಗೆಲುವಿನ ಆರಂಭ ಪಡೆದಿದೆ. ರವಿವಾರದ ಮುಖಾಮುಖೀಯಲ್ಲಿ ಅದು ನ್ಯೂಜಿಲ್ಯಾಂಡ್‌ಗೆ 3 ವಿಕೆಟ್ ಸೋಲುಣಿಸಿತ್ತು. ಕಿವೀಸ್ 7 ವಿಕೆಟಿಗೆ 158 ರನ್ ಮಾಡಿದರೆ, ಆಸೀಸ್ 19.5 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159 ರನ್ ಬಾರಿಸಿತ್ತು.
ಆಸೀಸ್ ತಂಡದ ಚಿಂತೆಯೆಂದರೆ ಆರಂಭಕಾರ ಡೇವಿಡ್ ವಾರ್ನರ್ ಅವರ ಫಾರ್ಮ್. ಐಪಿಎಲ್‌ನಲ್ಲಿ ರನ್ ಬರಗಾಲ ಅನುಭವಿಸಿ ಹೈದರಾಬಾದ್ ತಂಡದ ಆಡುವ ಬಳಗದಿಂದಲೇ ಬೇರ್ಪಟ್ಟ ವಾರ್ನರ್, ನ್ಯೂಜಿಲ್ಯಾಂಡ್ ವಿರುದ್ಧ ಮೊದಲ ಎಸೆತದಲ್ಲೇ ಸೌಥಿಗೆ ವಿಕೆಟ್ ಒಪ್ಪಿಸಿದ್ದಾರೆ.
ಉಳಿದಂತೆ ಆಸೀಸ್ ಬ್ಯಾಟಿಂಗ್ ಲೈನ್‌ಅಪ್ ಬಲಿಷ್ಠ. ಫಿಂಚ್, ಮಿಚೆಲ್ ಮಾರ್ಷ್, ಸ್ಮಿತ್, ಸ್ಟೋಯಿನಿಸ್, ವೇಡ್ ಇಲ್ಲಿನ ಪ್ರಮುಖರು. ಆರ್‌ಸಿಬಿ ಬ್ಯಾಟಿಂಗ್ ಹೀರೋ ಮ್ಯಾಕ್ಸ್‌ವೆಲ್ ಮೊದಲ ಅಭ್ಯಾಸ ಪಂದ್ಯ ಆಡಿರಲಿಲ್ಲ. ಬುಧವಾರ ಕೊಹ್ಲಿ ಟೀಮ್ ವಿರುದ್ಧ ಬ್ಯಾಟ್ ಝಳಪಿಸಬಹುದು.
ಆರಂಭ: ಅ. 3.30 ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.