ಕಿರಿಯರ ವಿಶ್ವಕಪ್ ಹಾಕಿ: ಭಾರತಕ್ಕೆ ಲಾಲ್ರೆಮ್ಸಿಯಾಮಿ ನಾಯಕಿ
Team Udayavani, Nov 15, 2021, 10:15 PM IST
ನವದೆಹಲಿ: ಟೋಕಿಯೋ ಒಲಿಂಪಿಯನ್, ಯುವ ಆಟಗಾರ್ತಿ ಲಾಲ್ರೆಮ್ಸಿಯಾಮಿ ಅವರನ್ನು ಕಿರಿಯರ ವಿಶ್ವಕಪ್ ಹಾಕಿ ಕೂಟಕ್ಕಾಗಿ ಭಾರತ ತಂಡದ ನಾಯಕಿಯನ್ನಾಗಿ ನೇಮಿಸಲಾಗಿದೆ.
ಈ ಪಂದ್ಯಾವಳಿ ಡಿ.5ರಿಂದ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿದೆ. ರಕ್ಷಣಾ ಆಟಗಾರ್ತಿ ಇಶಿಕಾ ಚೌಧರಿ ಉಪನಾಯಕಿಯಾಗಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ ವೇಳೆ ಭಾರತದ ಹಿರಿಯರ ತಂಡವನ್ನು ಪ್ರತಿನಿಧಿಸಿದ್ದ ಸಲಿಮಾ ಟೇಟೆ ಮತ್ತು ಶರ್ಮಿಳಾದೇವಿ ಕೂಡ ಈ ತಂಡದಲ್ಲಿದ್ದಾರೆ. ಪ್ರೀತಿ ಮತ್ತು ಪ್ರಭಲೀನ್ ಕೌರ್ ಮೀಸಲು ಆಟಗಾರ್ತಿಯಾಗಿದ್ದಾರೆ. ಸಿ’ ವಿಭಾಗದಲ್ಲಿ ಸ್ಥಾನ ಪಡೆದಿರುವ ಭಾರತ, ಡಿ.6ರಂದು ರಷ್ಯಾ ವಿರುದ್ಧ ತನ್ನ ಮೊದಲ ಪಂದ್ಯ ಆಡಲಿದೆ. ಡಿ.7ರಂದು ಹಾಲಿ ಚಾಂಪಿಯನ್ ಅರ್ಜೆಂಟೀನ ವಿರುದ್ಧ, ಡಿ.9ರಂದು ಜಪಾನ್ ವಿರುದ್ಧ ಸೆಣೆಸಲಿದೆ. ಡಿ. 10-16ರ ನಡುವೆ ನಾಕೌಟ್ ಸ್ಪರ್ಧೆಗಳು ನಡೆಯಲಿವೆ.
ಇದನ್ನೂ ಓದಿ:ಗಡಿಯಲ್ಲಿ ವಿಫಲ: ಭಾರತದ ವಿರುದ್ಧ ಪಿತೂರಿಗೆ ಚೀನಾ ಹೊಸ ಮಾರ್ಗ?
ಭಾರತ ತಂಡ: ಲಾಲ್ರೆಮ್ಸಿಯಾಮಿ (ನಾಯಕಿ), ಇಶಿಕಾ ಚೌಧರಿ (ಉಪನಾಯಕಿ), ಬಿಛೂದೇವಿ ಖರಿಬಂ (ಗೋ.ಕೀ.), ಖುಷೂº(ಗೋ.ಕೀ.), ಅಕ್ಷತಾ ಅಬಾಸೊ ಧೇಕಲೆ, ಪ್ರಿಯಾಂಕಾ, ಮರಿನಾ , ಅಜ್ಮಿನಾ ಕುಜುರ್, ಬಲ್ಜೀತ್ ಕೌರ್, ರೀಟಾ, ವೈಷ್ಣವಿ ವಿಠuಲ್ ಫಲ್ಕೆ, ಸಲಿಮಾ ಟೇಟೆ, ಶರ್ಮಿಳಾದೇವಿ, ಬ್ಯೂಟಿ ಡುಂಗ್‌ಡುಂಗ್, ದೀಪಿಕಾ, ಮುಮ್ತಾಜ್ ಖಾನ್, ಸಂಗೀತಾ ಕುಮಾರಿ, ಜೀವನ್ ಕಿಶೋರಿ ಟೋಪ್ಪೊ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.