ಟೋಕಿಯೊ: ಒಲಿಂಪಿಕ್ ಕ್ರೀಡಾಂಗಣ ಅನಾವರಣ
Team Udayavani, Dec 16, 2019, 1:53 AM IST
ಟೋಕಿಯೊ: ಇನ್ನು 7 ತಿಂಗಳಲ್ಲಿ ಜರಗಲಿರುವ 2020ರ ಟೋಕಿಯೊ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭದ, 60 ಸಾವಿರ ಆಸನ ಸಾಮರ್ಥ್ಯದ ನ್ಯೂ ನ್ಯಾಶನಲ್ ಒಲಿಂಪಿಕ್ ಕ್ರೀಡಾಂಗಣವನ್ನು ರವಿವಾರ ಅಧಿಕೃತವಾಗಿ ಅನಾವರಣಗೊಳಿಸಲಾಗಿದೆ.
1964ರ ಟೋಕಿಯೊ ಒಲಿಂಪಿಕ್ಸ್ ಗಾಗಿ ಬಳಸಲಾದ ರಾಷ್ಟ್ರೀಯ ಕ್ರೀಡಾಂಗಣದ ಸ್ಥಳದಲ್ಲಿಯೇ ಈ ಕ್ರೀಡಾಂಗಣವನ್ನು ನಿರ್ಮಿಸ ಲಾಗಿದೆ. ನೆಲ ಮಟ್ಟದಿಂದ ಮೇಲ್ಗಡೆ 5 ಮತ್ತು ಕೆಳಗಡೆ 2 ಅಂತಸ್ತನ್ನು ಒಳಗೊಂಡ ಈ ಕ್ರೀಡಾಂಗಣವನ್ನು ಪ್ರಧಾನಮಂತ್ರಿ ಶಿಂಝೊ ಅಬೆ ಅನಾವರಣಗೊಳಿಸಿದರು. ಇದೊಂದು ಉನ್ನತ ಗುಣಮಟ್ಟದ ಅದ್ಭುತ ವಿನ್ಯಾಸದಿಂದ ನಿರ್ಮಿಸಲಾದ ಕ್ರೀಡಾಂಗಣವಾಗಿದೆ ಎಂದವರು ಬಣ್ಣಿಸಿದ್ದಾರೆ. ಖ್ಯಾತ ಆರ್ಕಿಟೆಕ್ಟ್ ಕೆಂಗೊ ಕುಮ ಈ ಕ್ರೀಡಾಂಗಣವನ್ನು ವಿನ್ಯಾಸಗೊಳಿಸಿದ್ದಾರೆ.
ಈ ಭವ್ಯ ಕ್ರೀಡಾಂಗಣದಲ್ಲಿ 2020ರ ಒಲಿಂಪಿಕ್ ಗೇಮ್ಸ್‌ನ ಉದ್ಘಾಟನಾ ಮತ್ತು ಸಮಾರೋಪ ಸಮಾರಂಭವಲ್ಲದೆ ಬಹು ಆಕರ್ಷಣೆಯ ಆ್ಯತ್ಲೆಟಿಕ್ ಸ್ಪರ್ಧೆಗಳು ನಡೆಯಲಿವೆ.
ವಿಶೇಷ ಸೌಕರ್ಯ
ಇಲ್ಲಿನ ವಿಪರೀತ ಸೆಕೆಯನ್ನು ತಡೆಗಟ್ಟಲು ಈ ಕ್ರೀಡಾಂಗಣದಲ್ಲಿ ಹಲವು ವಿಶೇಷ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ರಣಬಿಸಿಲಿನಿಂದ ಪ್ರೇಕ್ಷಕರಿಗೆ ಕಿರಿಕಿರಿ ತಪ್ಪಿಸುವ ನಿಟ್ಟಿನಲ್ಲಿ ಎಲ್ಲ ಕಡೆ ನೆರಳು ಬೀಳುವ ಉದ್ದೇಶದಿಂದ ಕ್ರೀಡಾಂಗಣದ ಎಲ್ಲ ಅಂತಸ್ತಿನ ಬದಿಗಳಲ್ಲಿ ಗಿಡಗಳನ್ನು ನೆಡಲಾಗಿದೆ. ಮಂಜು, ಇಬ್ಬನಿ ದೂರ ಮಾಡುವ 8 ಸಾಧನಗಳಿವೆ. 185 ಫ್ಯಾನ್ ಮತ್ತು 16 ಹವಾ ನಿಯಂತ್ರಣ ಕೊಠಡಿಗಳಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.