ಲಾಂಛನ ಬಿಡುಗಡೆ ಮಾಡಿದ ಜಪಾನ್
Team Udayavani, Jul 23, 2018, 11:53 AM IST
ಜಪಾನ್: 2020ರ ಟೋಕಿಯೊ ಒಲಿಂಪಿಕ್ಸ್‌ಗೆ ದೊಡ್ಡ ಮಟ್ಟದಲ್ಲಿ ಸಜ್ಜಾಗುತ್ತಿರುವ ಜಪಾನ್, ರವಿವಾರದ ವರ್ಣರಂಜಿತ ಸಮಾರಂಭದಲ್ಲಿ ಕೂಟದ ಲಾಂಛನವನ್ನು ಬಿಡುಗಡೆ ಮಾಡಿತು. ಜಪಾನೀ ಹೆಸರುಗಳನ್ನೊಳಗೊಂಡ 2 ಲಾಂಛನಗಳನ್ನು ಈ ಸಂದರ್ಭದಲ್ಲಿ ಜಗತ್ತಿನ ಮುಂದೆ ಅನಾವರಣಗೊಳಿಸಲಾಯಿತು.
ಒಂದರ ಹೆಸರು “ಮಿರೈತೋವಾ’. ಇದು ನೀಲಿ ಚೌಕಗಳ ಉಡುಗೆ ಧರಿಸಿದ ಗೊಂಬೆಯ ಮಾದರಿಯಲ್ಲಿದೆ. “ಭವಿಷ್ಯ ಮತ್ತು ಶಾಶ್ವತ’ ಎಂಬುದು ಇದರರ್ಥ. ಸದಾ ಕಾಲ ಉಜ್ವಲ ಭವಿಷ್ಯವನ್ನು ಹೊಂದಿರಲಿ ಎಂಬುದನ್ನು ಇದು ಧ್ವನಿಸುತ್ತದೆ ಎಂದು ಸಂಘಟಕರು ಈ ಸಂದರ್ಭದಲ್ಲಿ ಹೇಳಿದರು.ಪ್ಯಾರಾಲಿಂಪಿಕ್ಸ್ ಲಾಂಛನ ಕೂಡ “ಮಿರೈತೋವಾ’ವನ್ನೇ ಹೋಲುತ್ತಿದ್ದು, ಉಡುಗೆಯ ಬಣ್ಣದಲ್ಲಿ ಮಾತ್ರ ವ್ಯತ್ಯಾಸ ಕಾಣಬಹುದು. ಇದಕ್ಕೆ “ಸೊಮೀಟಿ’ ಎಂದು ನಾಮಕರಣ ಮಾಡಲಾಗಿದ್ದು, ಇದು ಗುಲಾಲಿ ಬಣ್ಣದ ಚೌಕುಳಿಯ ಉಡುಗೆಯನ್ನು ಧರಿಸಿದೆ. ಜಪಾನಿನ ಬಹು ಪ್ರಸಿದ್ಧ ಚೆರ್ರಿ ಮರದ ಹೋಲಿಕೆಯನ್ನು ಇಲ್ಲಿ ಕಾಣಬಹುದು. ಸೊಮೀಟಿ ಅಂದರೆ “ಭಾರೀ ಬಲಾಡ್ಯ’ ಎಂದರ್ಥ.
ಜಪಾನ್ ಒಲಿಂಪಿಕ್ಸ್ ಸಂಘಟಕರ ಪ್ರಕಾರ ಮಿರೈತೋವಾ “ನ್ಯಾಯ ಪ್ರಜ್ಞೆ’ಯ ಸಂಕೇತ. ಸೊಮೀಟಿ “ಬಹಳ ತಣ್ಣಗಿನ ಸ್ವಭಾವ’ ದ್ದಾಗಿದ್ದು, ಅನಿವಾರ್ಯ ಸಂದರ್ಭಗಳಲ್ಲಿ ತನ್ನ ಬಲಿಷ್ಠ ಸ್ವಭಾವನ್ನು ಪರಿಚಯಿಸಲು ಹಿಂಜರಿಯದು ಎಂದು ಬಣ್ಣಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2025: ಮೆಗಾ ಹರಾಜಿನ ಬಳಿಕ ಎಲ್ಲಾ ಹತ್ತು ತಂಡಗಳು ಹೀಗಿವೆ ನೋಡಿ
IPL: ಗೊಂದಲದಲ್ಲಿ ಮರಿ ಸೆಹ್ವಾಗ್ ನನ್ನು ಖರೀದಿಸಿದ ಆರ್ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.