ಕಂಚಿನ ಪದಕಕ್ಕೆ ಮುತ್ತಿಟ್ಟ ಸಿಂಧು
ಚೀನಾದ ಹೇ ಬಿಂಗ್ಜಾವ್ ವಿರುದ್ಧದ ಪಂದ್ಯದಲ್ಲಿ ಸಿಂಧುಗೆ ಭರ್ಜರಿ ಜಯ
Team Udayavani, Aug 1, 2021, 6:37 PM IST
ಟೋಕಿಯೋ : ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಟೋಕಿಯೊ ಒಲಂಪಿಕ್ಸ್ ನಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಇಂದು(ಭಾನುವಾರ, ಆಗಸ್ಟ್ 1) ಕಂಚಿನ ಪದಕಕ್ಕಾಗಿ ನಡದ ನಿರ್ನಾಯಕ ಪಂದ್ಯದಲ್ಲಿ ಸಿಂಧು, ಚೀನಾದ ಹೇ ಬಿಂಗ್ಜಾವ್ ವಿರುದ್ಧ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ 2ನೇ ಪದಕ ತಂದುಕೊಟ್ಟ ಕೀರ್ತಿಗೆ ಭಾಜನರಾಗಿದ್ದಾರೆ.
ಇದನ್ನೂ ಓದಿ : ಟೋಕಿಯೊ ಒಲಿಂಪಿಕ್ಸ್ : ಪಿವಿ ಸಿಂಧುಗೆ ಕಂಚಿನ ಪದಕ : ಪ್ರಧಾನಿ ಅಭಿನಂದನೆ
ಚೀನಾದ ಹೇ ಬಿಂಗ್ಜಾವ್ ವಿರುದ್ಧ ಸಿಂಧು 21-13 ಮತ್ತು 21-15 ನೇರ ಸೆಟ್ ಗಳಿಂದ ಗೆಲುವು ಸಾಧಿಸಿದ್ದಾರೆ. ಸೆಮಿಫೈನಲ್ ಪಂದ್ಯದಲ್ಲಿ ಪಿ.ವಿ.ಸಿಂಧು ವಿಶ್ವ ನಂ.1 ಆಟಗಾರ್ತಿ ಚೈನೀಸ್ ತೈಪೆಯ ತೈ ಜು ಯಿಂಗ್ ವಿರುದ್ಧ ಸೋಲು ಕಂಡಿದ್ದರು.
ಇಂದು ಚೀನಾದ ಹೇ ಬಿಂಗ್ಜಾವ್ ವಿರುದ್ಧ ಆರಂಭದಿಂದಲೂ ಸಿಂಧು ಆಕ್ರಮಣಕಾರಿ ಆಟ ಪ್ರದರ್ಶಿಸಿದರು. ಮೊದಲ ಸೆಟ್ ನಲ್ಲಿ ಚೀನಾದ ಆಟಗಾರ್ತಿ ಪೈಪೋಟಿ ನೀಡಿದರೂ ಕೂಡ ಸಿಂಧು ಭರ್ಜರಿ ಪ್ರದರ್ಶನದ ಮೂಲಕ 21-13ರ ಅಂತರದಿಂದ ಮುನ್ನಡೆ ಕಾಯ್ದುಕೊಂಡರು.
ಇನ್ನು, ಬಳಿಕ 2ನೇ ಸೆಟ್ ನಲ್ಲಿ ಮತ್ತೆ ತಮ್ಮ ಆಕ್ರಮಣಕಾರಿ ಆಟ ಮುಂದುವರಿಸಿದ ಸಿಂಧು, ಚೀನಾದ ಆಟಗಾರ್ತಿಗೆ ಪ್ರಬಲ ಪ್ರತಿರೋಧ ತೋರಿಸಿದರು. 2ನೇ ಸೆಟ್ ನಲ್ಲಿ ಸಿಂಧು ವಿರುದ್ಧ ಹೇ ಬಿಂಗ್ಜಾವ್ ಒಂದು ಹಂತದಲ್ಲಿ ಪೈಪೋಟಿ ನೀಡಿದರಾದರೂ, ಸಿಂಧು ತಮ್ಮ ಬಲವಾದ ಹೊಡೆತಗಳಿಂದ 2ನೇ ಸೆಟ್ ನನ್ನು ತಮ್ಮದಾಗಿಸಿಕೊಂಡರು.
ಈ ಮೂಲಕ ಟೋಕಿಯೊ ಒಲಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದು ಸಿಂಧು ದೇಶಕ್ಕೆ ಹೆಮ್ಮೆ ತಂದಿದ್ದಾರೆ.
ಇದನ್ನೂ ಓದಿ : ಪ್ರಪಂಚವನ್ನೇ ತಲ್ಲಣಗೊಳಿಸುತ್ತಿರುವ ಪೆಗಾಸಸ್ ಸ್ಪೈವೇರ್ ಕುರಿತು ನಿಮಗೆಷ್ಟು ತಿಳಿದಿದೆ..?
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.