2021ರ ಜುಲೈಯಲ್ಲಿ ಟೋಕಿಯೊ ಒಲಿಂಪಿಕ್ಸ್ ?
Team Udayavani, Mar 30, 2020, 5:45 AM IST
ಟೋಕಿಯೊ: ಕೋವಿಡ್-19 ವೈರಸ್ ವಿಶ್ವದಾದ್ಯಂತ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟ ಟೋಕಿಯೊ ಒಲಿಂಪಿಕ್ಸ್ ಕೂಟವನ್ನು ಮುಂದಿನ ವರ್ಷದ ಜುಲೈ ತಿಂಗಳಲ್ಲಿ ನಡೆಸಲು ಒಲಿಂಪಿಕ್ಸ್ ಸಂಘಟಕರು ಒಲವು ವ್ಯಕ್ತಪಡಿಸಿದ್ದಾರೆ ಎಂಧು ಜಪಾನೀಸ್ ಮಾಧ್ಯಮ ವರದಿ ಮಾಡಿದೆ.
ಕೋವಿಡ್-19 ವೈರಸ್‌ನಿಂದಾಗಿ ವಿಶ್ವದೆಲ್ಲೆಡೆ ಜನಜೀವನ ಸಾಮಾನ್ಯ ಸ್ಥಿತಿಗೆ ಬರಬೇಕಾಗಿದೆ. ಇದೇ ವೇಳೆ ಗೇಮ್ಸ್ ಆಯೋಜಿಸುವ ನಿಟ್ಟಿನಲ್ಲಿ ಸಿದ್ಧತೆಗಾಗಿ ಸಮಯದ ಅಗತ್ಯವಿದೆ. ಹೀಗಾಗಿ ಗೇಮ್ಸ್ 2021ರ ಜುಲೈ ತಿಂಗಳಲ್ಲಿ ಆರಂಭವಾಗುವ ಸಾಧ್ಯತೆಯಿದೆ ಎಂದು ಸಂಘಟನಾ ಸಮಿತಿಯ ಮೂಲಗಳನ್ನು ಉಲ್ಲೇಖೀಸಿ ಪಬ್ಲಿಕ್ ಬ್ರಾಡ್‌ಕಾಸ್ಟರ್ ಎನ್‌ಎಚ್‌ಕೆ ತಿಳಿಸಿದೆ.
ಸಾಕಷ್ಟು ಸೆಕೆ ಮತ್ತು ಬಿಸಿಯ ವಾತಾವರಣ ಇಲ್ಲದ ಸಮಯದಲ್ಲಿ ಕೂಟ ಆಯೋಜಿಸುವುದು ಉತ್ತಮ ಇದರಿಂದಾಗಿ ಮ್ಯಾರಥಾನ್ ಮತ್ತು ಇತರ ರೇಸ್‌ಗಳನ್ನು ರಾಜಧಾನಿಯಲ್ಲಿ ನಡೆಸಲು ಸಾಧ್ಯವಾಗುತ್ತದೆ ಎಂದು ಟೋಕಿಯೊ ಗವರ್ನರ್ ಯುರಿಕೊ ಕೊಯಿಕೆ ಅವರು ಸಭೆಯೊಂದರಲ್ಲಿ ತಿಳಸಿದ್ದರು.
ಐಒಸಿ ಜತೆ ಚರ್ಚೆ
ಯೊಶಿರೊ ಮೊರಿ ನೇತೃತ್ವದ ಟೋಕಿಯೊ 2020 ತಂಡವು ಸಂಭಾವ್ಯ ದಿನಗಳ ಬಗ್ಗೆ ಇಂಟರ್‌ನ್ಯಾಶನಲ್ ಒಲಿಂಪಿಕ್ ಸಮಿತಿ (ಐಒಸಿ) ಜತೆ ಚರ್ಚಿಸುತ್ತಿದೆ. ಒಂದು ವಾರದ ಒಳಗಾಗಿ ಗೇಮ್ಸ್ ನಡೆಯುವ ದಿನ ಖಚಿತವಾಗಬಹುದು ಎಂದು ಮೊರಿ ಹೇಳಿದ್ದಾರೆ. ಗೇಮ್ಸ್ ಬೇಸಗೆಯಲ್ಲಿಯೇ ನಡೆಯಬೇಕೆಂಬ ನಿರ್ಬಂಧವಿಲ್ಲ. ಎಲ್ಲರಿಗೂ ಅನುಕೂಲವಾಗುವ ದಿನವನ್ನು ಸೂಚಿಸುವ ಆಯ್ಕೆಯಿದೆ ಎಂದು ಐಒಸಿ ಮುಖ್ಯಸ್ಥ ಥಾಮಸ್ ಬಾಕ್ ಕೂಡ ಹೇಳಿದ್ದಾರೆ.
ಒಲಿಂಪಿಕ್ ಜ್ಯೋತಿ ಪ್ರದರ್ಶನ
ಫುಕುಶಿಮಾದ ಜೆ-ವಿಲೇಜ್ ಕ್ರೀಡಾ ಸಂಕೀರ್ಣದಲ್ಲಿ ಒಂದು ತಿಂಗಳ ಕಾಲ ಒಲಿಂಪಿಕ್ ಜ್ಯೋತಿಯನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ. 2011ರ ಅಣುಬಾಂಬು ದುರಂತದಲ್ಲಿ ಬಹಳಷ್ಟು ಹಾನಿಗೆ ಒಳಗಾದ ಪ್ರದೇಶ ಇದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
M Chinnaswamy Stadium; ಶಾಂತಾ ಹೆಸರಿಡಲು ಸಮಸ್ಯೆಯೇನಿದೆ? ಕೆಎಸ್‌ಸಿಎ ತಾರತಮ್ಯವೇಕೆ?
PV Sindhu: ವಿಮಾನದಲ್ಲಿ ಶುರುವಾಯ್ತು ಸಿಂಧು-ದತ್ತಾ ಲವ್ ಸ್ಟೋರಿ
INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.