ಉದ್ಘಾಟನೆಗೆ 11 ಸದಸ್ಯರ ಭಾರತ ತಂಡ
Team Udayavani, Aug 23, 2021, 6:06 AM IST
ಟೋಕಿಯೊ: ಮಂಗಳವಾರ ನಡೆಯಲಿರುವ ಟೋಕಿಯೊ ಪ್ಯಾರಾಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಕೇವಲ 11 ಸದಸ್ಯರು ಪಾಲ್ಗೊಳ್ಳಲಿದ್ದಾರೆ. ಚೆಫ್ ಡಿ ಮಿಷನ್ ಗುರುಶರಣ್ ಸಿಂಗ್ ಈ ಕುರಿತು ಮಾಹಿತಿ ನೀಡಿದರು.
ಈ ಹನ್ನೊಂದರಲ್ಲಿ ಐವರು ಕ್ರೀಡಾಪಟುಗಳಾದರೆ, ಉಳಿದ 6 ಮಂದಿ ಅಧಿಕಾರಿಗಳಾಗಿದ್ದಾರೆ. ಹೈಜಂಪರ್ ಮರಿಯಪ್ಪನ್ ತಂಗವೇಲು ಪಥಸಂಚಲ ನದಲ್ಲಿ ಭಾರತದ ತ್ರಿವರ್ಣ ಧ್ವಜ ಹಿಡಿದು ಸಾಗಲಿದ್ದಾರೆ. ಡಿಸ್ಕಸ್ ತ್ರೋವರ್ ವಿನೋದ್ ಕುಮಾರ್, ಜಾವೆಲಿನ್ ಎಸೆತಗಾರ ಟೇಕ್ ಚಂದ್, ಪವರ್ಲಿಫ್ಟರ್ಗಳಾದ ಜೈದೀಪ್ ಮತ್ತು ಸಕಿನಾ ಖಾತುನ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿರುವ ಇತರ ಕ್ರೀಡಾಪಟುಗಳು. ಟೇಬಲ್ ಟೆನಿಸಿಗರಾದ ಸೋನಾಲ್ ಪಟೇಲ್ ಮತ್ತು ಭವಿನಾ ಪಟೇಲ್ ಅವರಿಗೆ ಮರುದಿನ ಸ್ಪರ್ಧೆ ಇರುವ ಕಾರಣ ಸಮಾರಂಭದಿಂದ ದೂರ ಉಳಿಯಲಿದ್ದಾರೆ.
6 ಮಂದಿ ಅಧಿಕಾರಿಗಳು :
6 ಮಂದಿಯ ಅಧಿಕಾರಿಗಳ ತಂಡದ ನಾಲ್ವರ ಹೆಸರು ಈಗಾಗಲೇ ಅಧಿಕೃತಗೊಂಡಿದೆ. ಇದರಲ್ಲಿ ಚೆಫ್ ಡಿ ಮಿಷನ್ ಗುರುಶರಣ್ ಸಿಂಗ್ ಕೂಡ ಸೇರಿದ್ದಾರೆ. ಉಳಿದವರೆಂದರೆ ಡೆಪ್ಯುಟಿ ಚೆಫ್ ಡಿ ಮಿಷನ್ ಅರ್ಹಾನ್ ಬಗಾಟಿ, ಕೋವಿಡ್-19 ಅಧಿಕಾರಿ ವಿ.ಕೆ. ದಬಾಸ್, ಮರಿಯಪ್ಪನ್ ಅವರ ಕೋಚ್ ಮತ್ತು ಪ್ಯಾರಾ ಆ್ಯತ್ಲೆಟಿಕ್ಸ್ ಅಧ್ಯಕ್ಷ ಸತ್ಯನಾರಾಯಣ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pro Kabaddi League-11: ಇಂದು ಎಲಿಮಿನೇಟರ್ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ
ICC : 904 ರೇಟಿಂಗ್ ಅಂಕ ನೂತನ ಎತ್ತರಕ್ಕೆ ಜಸ್ಪ್ರೀತ್ ಬುಮ್ರಾ
Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್ ಎದುರಾಳಿ
Boxing Day Test: ನೀಗಲಿ ಭಾರತದ ಬ್ಯಾಟಿಂಗ್ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್
ಧ್ಯಾನ್ಚಂದ್ ಖೇಲ್ರತ್ನ ನನಗೇಕಿಲ್ಲ: ಹರ್ವಿಂದರ್ ಸಿಂಗ್ ಪ್ರಶ್ನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.