ಭಾರತಕ್ಕೆ ಟೋಕಿಯೊ ಟಿಕೆಟ್
ವನಿತೆಯರಿಗೆ ಅಮೆರಿಕ ವಿರುದ್ಧ ಸೋಲು; ಗೋಲು ಗಳಿಕೆಯಲ್ಲಿ ಮುನ್ನಡೆ
Team Udayavani, Nov 2, 2019, 10:44 PM IST
ಭುವನೇಶ್ವರ: ಭಾರತದ ಪುರುಷರ ಮತ್ತು ವನಿತಾ ಹಾಕಿ ತಂಡಗಳೆರಡೂ 2020ರ ಒಲಿಂಪಿಕ್ಸ್ ಅರ್ಹತೆ ಸಂಪಾದಿಸುವಲ್ಲಿ ಯಶಸ್ವಿಯಾಗಿವೆ. ಇದರೊಂದಿಗೆ ಮುಂದಿನ ವರ್ಷದ ಟೋಕಿಯೊ ಕೂಟವನ್ನು ಭಾರತದ ಕ್ರೀಡಾಭಿಮಾನಿಗಳು ಹೆಚ್ಚು ಕುತೂಹಲದಿಂದ ವೀಕ್ಷಿಸಬಹುದಾಗಿದೆ.
ಶನಿವಾರ ಇಲ್ಲಿನ “ಕಳಿಂಗ ಸ್ಟೇಡಿಯಂ’ನಲ್ಲಿ ನಡೆದ ಪಂದ್ಯಗಳಲ್ಲಿ ವನಿತಾ ತಂಡ ಅಮೆರಿಕಕ್ಕೆ 1-4 ಅಂತರದಿಂದ ಸೋತರೂ 2 ಪಂದ್ಯಗಳ ಒಟ್ಟು ಗೋಲು ಗಳಿಕೆಯಲ್ಲಿ 6-5 ಅಂತರದ ಮುನ್ನಡೆ ಸಾಧಿಸಿತು.
ಅನಂತರ ನಡೆದ ಪುರುಷರ ಮುಖಾಮುಖೀಯಲ್ಲಿ ಭಾರತ 7-1 ಗೋಲುಗಳಿಂದ ರಶ್ಯವನ್ನು ಮಣಿಸಿತು. ಮೊದಲ ಪಂದ್ಯದಲ್ಲಿ 4-2 ಅಂತರದಿಂದ ಜಯಿಸಿದ್ದ ಭಾರತ ಒಟ್ಟು 11-3 ಮುನ್ನಡೆಯೊಂದಿಗೆ ಪ್ರಭುತ್ವ ಸಾಧಿಸಿತು.
ರಾಣಿ ಗೋಲು ತಂದ ಅದೃಷ್ಟ
ಮೊದಲ ಪಂದ್ಯದಲ್ಲಿ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿದ್ದ ವನಿತೆಯರು ಅಮೆರಿಕ ವಿರುದ್ಧ 5-1 ಅಂತರದ ಜಯಭೇರಿ ಮೊಳಗಿಸಿದ್ದರು. ಆದರೆ ಶನಿವಾರದ ಪಂದ್ಯದಲ್ಲಿ ಅಮೆರಿಕ ತಿರುಗೇಟು ನೀಡಿತು. 4-1 ಅಂತರದಿಂದ ಭಾರತವನ್ನು ಮಣಿಸಿತು. ಆದರೆ ಎರಡೂ ಪಂದ್ಯಗಳ ಒಟ್ಟು ಗೋಲು ಲೆಕ್ಕಾಚಾರದಲ್ಲಿ ಭಾರತ 6-5 ಅಂತರದ ಮುನ್ನಡೆ ಕಾಯ್ದುಕೊಂಡು ಟೋಕಿಯೊ ಅರ್ಹತೆ ಸಂಪಾದಿಸುವಲ್ಲಿ ಯಶಸ್ವಿಯಾಯಿತು. ಇದು ಭಾರತಕ್ಕೆ ಲಭಿಸಿದ ಸತತ 2 ಒಲಿಂಪಿಕ್ ಟಿಕೆಟ್.
ಅರ್ಧ ಹಾದಿ ಕ್ರಮಿಸುವಾಗ ಅಮೆರಿಕ 4-0 ಅಂತರದ ಭರ್ಜರಿ ಮುನ್ನಡೆಯಲ್ಲಿತ್ತು. 48ನೇ ನಿಮಿಷದಲ್ಲಿ ನಾಯಕಿ ರಾಣಿ ರಾಮ್‌ಪಾಲ್ ಬಾರಿಸಿದ ಮಹತ್ವದ ಗೋಲು ಭಾರತದ ಅದೃಷ್ಟವನ್ನು ತೆರೆದಿರಿಸಿತು. ಅಕಸ್ಮಾತ್ ಇತ್ತಂಡಗಳ ಎರಡೂ ಪಂದ್ಯಗಳ ಗೋಲುಗಳು ಸಮನಾಗಿದ್ದರೆ ಪೆನಾಲ್ಟಿ ಶೂಟೌಟ್ ಮೂಲಕ ವಿಜೇತರನ್ನು ನಿರ್ಧರಿಸಬೇಕಿತ್ತು.
ಪುರುಷರಿಗೆ 7-1 ಜಯ
ಶುಕ್ರವಾರ ನಿರೀಕ್ಷಿತ ಮಟ್ಟದ ಆಟವಾಡದ ಭಾರತದ ಪುರುಷರು ದ್ವಿತೀಯ ಪಂದ್ಯದಲ್ಲಿ ರಶ್ಯದ ಮೇಲೆರಗಿ ಹೋದರು. ರಶ್ಯ ಮೊದಲ ನಿಮಿಷದಲ್ಲೇ ಗೋಲು ಬಾರಿಸಿದರೂ ಬಳಿಕ ಭಾರತ ಮುನ್ನುಗ್ಗಿ ಹೋಯಿತು. ಸತತ 7 ಗೋಲು ಬಾರಿಸಿ ಮೆರೆದಾಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Syed Mushtaq Ali Trophy ಸಿಕ್ಕಿಂ ವಿರುದ್ಧ ಕರ್ನಾಟಕಕ್ಕೆ ಸುಲಭ ಜಯ
Syed Modi International: ಫೇವರಿಟ್ ಸಿಂಧು, ಲಕ್ಷ್ಯ ಸೆಮಿಫೈನಲ್‌ಗೆ
Pro Kabaddi;ಹರಿಯಾಣದ ಅಗ್ರಸ್ಥಾನ ಇನ್ನಷ್ಟು ಗಟ್ಟಿ
ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್
Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.