ಪ್ರಥಮ ಏಕದಿನ: ವಿಲಿಯಮ್ಸನ್ -ಲ್ಯಾಥಂ ದಾಖಲೆಯ ಜೊತೆಯಾಟಕ್ಕೆ ಮಣಿದ ಭಾರತ
Team Udayavani, Nov 25, 2022, 3:02 PM IST
ಆಕ್ಲಂಡ್: ಭಾರತದ ಅನನುಭವಿ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ನ್ಯೂಜಿಲ್ಯಾಂಡ್ ನ ಅನುಭವಿ ಆಟಗಾರರಾದ ಕೇನ್ ವಿಲಿಯಮ್ಸನ್ ಮತ್ತು ಟಾಮ್ ಲ್ಯಾಥಂ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಗೆ ಜಯ ತಂದಿತ್ತಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು 50 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 306 ರನ್ ಗಳಿಸಿದರೆ, ಕಿವೀಸ್ ಕೇವಲ ಮೂರು ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಧವನ್- ಅಯ್ಯರ್ ಆಟ: ಟಾಸ್ ಸೋತರು ಮೊದಲು ಬ್ಯಾಟಿಂಗ್ ನಡೆಸುವ ಅವಕಾಶ ಪಡೆದ ಧವನ್ ಪಡೆಗೆ ಉತ್ತಮ ಆರಂಭ ದೊರಕಿತು. ನಾಯಕ ಧವನ್ ಮತ್ತು ಗಿಲ್ ಮೊದಲ ವಿಕೆಟ್ ಗೆ 124 ರನ್ ಜೊತೆಯಾಟವಾಡಿದರು. ಇಬ್ಬರೂ ತಲಾ ಅರ್ಧಶತಕ ಬಾರಿಸಿದರು. 50 ರನ್ ಗಳಿಸಿದ ಗಿಲ್ ಫರ್ಗ್ಯುಸನ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈಹಾಕಿ ಔಟಾದರು. ನಾಯಕ ಧವನ್ 72 ರನ್ ಗೆ ಔಟಾದರು.
ವಿಕೆಟ್ ಕೀಪರ್ ಪಂತ್ ಕೇವಲ 15 ರನ್ ಮಾಡಿ ಔಟಾದರು. ಸೂರ್ಯಕುಮಾರ್ ಯಾದವ್ ಅವರು ಕೇವಲ ನಾಲ್ಕು ರನ್ ಮಾಡಿ ಅಗ್ಗಕ್ಕೆ ಔಟಾದರು. ಇದರ ಮಧ್ಯೆ ಕ್ರೀಸ್ ಕಚ್ಚಿ ನಿಂತ ಶ್ರೇಯಸ್ ಅಯ್ಯರ್ ನಾಲ್ಕು ಸಿಕ್ಸರ್ ನೆರವಿನಿಂದ 80 ರನ್ ಗಳಿಸಿದರು. ಅವರಿಗೆ ನೆರವು ನೀಡಿದ ಸಂಜು ಸ್ಯಾಮ್ಸನ್ 36 ರನ್ ಮಾಡಿದರು. ಕೊನೆಯಲ್ಲಿ ಸಿಡಿದ ವಾಷಿಂಗ್ಟನ್ ಸುಂದರ್ ಕೇವಲ 16 ಎಸೆತಗಳಲ್ಲಿ ಅಜೇಯ 37 ರನ್ ಬಾರಿಸಿದರು. ಸುಂದರ್ ಮೂರು ಬೌಂಡರಿ ಮತ್ತು ಮೂರು ಸಿಕ್ಸರ್ ಹೊಡೆದರು.
ಕಿವೀಸ್ ಪರ ಟಿಮ್ ಸೌಥಿ ಮತ್ತು ಲ್ಯೂಕಿ ಫರ್ಗ್ಯುಸನ್ ತಲಾ ಮೂರು ವಿಕೆಟ್ ಕಿತ್ತರು. ಧವನ್ ವಿಕೆಟ್ ಕಿತ್ತ ವೇಳೆ ಟಿಮ್ ಸೌಥಿ ಏಕದಿನ ಕ್ರಿಕೆಟ್ ನಲ್ಲಿ 200 ವಿಕೆಟ್ ಪಡೆದ ಸಾಧನೆ ಮಾಡಿದರು.
ಲ್ಯಾಥಂ- ಕೇನ್ ದಾಖಲೆ: ಭಾರತದ ಬೃಹತ್ ಗುರಿಯನ್ನು ಬೆನ್ನತ್ತಿದ ಕಿವೀಸ್ ಗೆ ಉತ್ತಮ ಆರಂಭವೇನು ಸಿಕ್ಕಿರಲಿಲ್ಲ. ಫಿನ್ ಅಲೆನ್ 22 ರನ್ ಮತ್ತು ಡೆವೋನ್ ಕಾನ್ವೆ 24 ರನ್ ಗಳಿಸಿ ಔಟಾದರು. ಡ್ಯಾರೆಲ್ ಮಿಚೆಲ್ ಕೂಡಾ ಕೇವಲ 11 ರನ್ ಔಟಾದರು. 88 ರನ್ ಆಗುವಷ್ಟರಲ್ಲಿ ಕಿವೀಸ್ ನ ಮೂರು ಹುದ್ದರಿ ಬಿದ್ದಿತ್ತು.
ಬಳಿಕ ಜೊತೆಯಾದ ನಾಯಕ ವಿಲಿಯಮ್ಸನ್ ಮತ್ತು ಕೀಪರ್ ಟಾಮ್ ಲ್ಯಾಥಂ ನಾಲ್ಕನೇ ವಿಕೆಟ್ ಗೆ ಅಜೇಯ ಜೊತೆಯಾಟ ನಡೆಸಿದರು. ಇವರಿಬ್ಬರು 221 ರನ್ ಗಳ ದಾಖಲೆಯ ಜೊತೆಯಾಟವಾಡಿದರು.
ಆರಂಭದಲ್ಲಿ ನಿಧಾನವಾಗಿ ಇನ್ನಿಂಗ್ ಕಟ್ಟಿದ ಇಬ್ಬರು ನಂತರ ದೊಡ್ಡ ಹೊಡೆತಗಳಿಗೆ ಕೈಹಾಕಿದರು. ಅದರಲ್ಲೂ ಕೊನೆಯಲ್ಲಿ ಸ್ಫೋಟಕವಾಗಿ ಆಡಿದ ಲ್ಯಾಥಂ ಶತಕ ಬಾರಿಸಿದರು. 104 ಎಸೆತ ಎದುರಿಸಿದ ಲ್ಯಾಥಂ ಐದು ಸಿಕ್ಸರ್ ನೆರವಿನಿಂದ ಅಜೇಯ 145 ರನ್ ಗಳಿಸಿದರು. ನಾಯಕ ವಿಲಿಯಮ್ಸನ್ 94 ರನ್ ಗಳಿಸಿ ಔಟಾಗದೆ ಉಳಿದರು.
ಭಾರತದ ಪರ ಇಂದು ಪದಾರ್ಪಣೆ ಮಾಡಿದ ಉಮ್ರಾನ್ ಮಲಿಕ್ ಎರಡು ವಿಕೆಟ್ ಕಿತ್ತರು. ಒಂದು ವಿಕೆಟ್ ಶಾರ್ದೂಲ್ ಠಾಕೂರ್ ಪಾಲಾಯಿತು.
ನ್ಯೂಜಿಲೆಂಡ್ ಎರಡನೇ ಬಾರಿಗೆ ಏಕದಿನದಲ್ಲಿ ಭಾರತದ ವಿರುದ್ಧ 300+ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದೆ. ಅತ್ಯಧಿಕ: 348 ಹ್ಯಾಮಿಲ್ಟನ್, 2020
ಕೇನ್ ಮತ್ತು ಲ್ಯಾಥಂ ಭಾರತದ ವಿರುದ್ಧ ಏಕದಿನ ಪಂದ್ಯದಲ್ಲಿ ನಾಲ್ಕನೇ ವಿಕೆಟ್ ಗೆ ಅತ್ಯಧಿಕ ರನ್ ಜೊತೆಯಾಟವಾಡಿದ ಸಾಧನೆ ಮಾಡಿದರು. 2009 ರಲ್ಲಿ ಸೆಂಚುರಿಯನ್ ನಲ್ಲಿ ಮೊಹಮ್ಮದ್ ಯೂಸುಫ್ ಮತ್ತು ಶೋಯೆಬ್ ಮಲಿಕ್ ಅವರ 206 ರನ್ ದಾಖಲೆ ಮುರಿಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.