ಫೈನಲ್ ಹಾದಿಯಲ್ಲಿ ಪೃಥ್ವಿರಾಜ್, ಖ್ಯಾನ್ ಚೆನೈ
Team Udayavani, Mar 20, 2019, 12:30 AM IST
ಅಕಾಪುಲ್ಕೊ (ಮೆಕ್ಸಿಕೊ): ಭಾರತದ ಶೂಟರ್‌ಗಳಾದ ಪೃಥ್ವಿರಾಜ್ ತೊಂಡೈಮನ್ ಹಾಗೂ ಖ್ಯಾನ್ ಚೆನೈ “ಐಎಸ್‌ಎಸ್‌ಎಒ ಶಾಟ್‌ಗನ್ ವಿಶ್ವಕಪ್’ ಕೂಟದ ಮೊದಲ ದಿನ ಮುನ್ನಡೆ ಸಾಧಿಸಿ ಫೈನಲ್ ಹಾದಿಯಲ್ಲಿದ್ದಾರೆ. ಆದರೆ ವನಿತಾ ಟ್ರ್ಯಾಪ್ ತಂಡ ಅರ್ಹತಾ ಸುತ್ತಿನಲ್ಲೇ ಸೋತು ಟೂರ್ನಿಯಿಂದ ಹೊರ ಬಿದ್ದಿದೆ.
ಸೋಮವಾರ ನಡೆದ ಪುರುಷರ ಟ್ರ್ಯಾಪ್ ವಿಭಾಗದ ಅರ್ಹತಾ ಸುತ್ತಿನಲ್ಲಿ 7 ಶೂಟರ್‌ಗಳ ತಂಡದಲ್ಲಿದ್ದ ಪೃಥ್ವಿರಾಜ್ ಮೊದಲೆರಡು ಸುತ್ತಿನಲ್ಲಿ 50 ಅಂಕ ಸಂಪಾದಿಸಿದರು. ಚೆನೈ 49 ಅಂಕ ಹಾಗೂ ಮನಜೀತ್ ಸಿಂಗ್ ಸಧು 46 ಅಂಕ ಗಳಿಸಿದರು. ಅಗ್ರ 6 ಶೂಟರ್‌ಗಳು ಫೈನಲ್ ಪ್ರವೇಶಿಸುವ ಮುನ್ನ ಇನ್ನೂ 3 ಸುತ್ತಿನ ಅರ್ಹತಾ ಸ್ಪರ್ಧೆಗಳು ನಡೆಯಲಿವೆ. ಫೈನಲ್‌ನಲ್ಲಿ 2 ಟೋಕಿಯೊ ಒಲಿಂಪಿಕ್ಸ್ ಕೋಟಾಗಳು ದೊರೆಯಲಿವೆ.
ಮುಗ್ಗರಿಸಿದ ವನಿತಾ ಟ್ರ್ಯಾಪ್ ತಂಡ
ಭಾರತದ ವನಿತಾ ಟ್ರ್ಯಾಪ್ ತಂಡ ಅರ್ಹತಾ ಸುತ್ತಿನಲ್ಲಿ ಸೋಲನುಭವಿಸುವ ಮೂಲಕ ಕೂಟದಿಂದ ಹೊರಬಿದ್ದಿದೆ. ಇಟಲಿಯ ಮಾಜಿ ಒಲಿಂಪಿಕ್ ಹಾಗೂ ವಿಶ್ವ ಚಾಂಪಿಯನ್ ಜೆಸ್ಸಿಕಾ ರೋಸಿ ಕೂಟದ ಮೊದಲ ಚಿನ್ನದ ಪದಕ ಗೆದ್ದು, 2020ರ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಅವರು ವನಿತಾ ಟ್ರ್ಯಾಪ್ ವಿಭಾಗದ ಫೈನಲ್‌ನಲ್ಲಿ 45 ಅಂಕ ಪಡೆದು ಪ್ರಥಮ ಸ್ಥಾನ ಸಂಪಾದಿಸಿದರು.
ಚೀನದ ಡೆಂಗ್ ವೈಯೂನ್ ಕಂಚಿನ ಪದಕ ಗೆಲ್ಲುವ ಮೂಲಕ ಇನ್ನೊಂದು ಒಲಿಂಪಿಕ್ ಕೋಟಾ ಸ್ಥಾನವನ್ನು ಪಡೆದರು. ಶಗುಣ್ ಚೌಧರಿ ಈ ಕೂಟದಲ್ಲಿ ಭಾರತದ ಪರ ಅತ್ಯುತ್ತಮ ಪ್ರದರ್ಶನ ನೀಡಿದ ಶೂಟರ್ ಆಗಿದ್ದಾರೆ. ಅವರು ಒಟ್ಟು 125 ಅಂಕಗಳಲ್ಲಿ 116 ಅಂಕಗಳನ್ನು ಸಂಪಾದಿಸಿ 19ನೇ ಸ್ಥಾನ ಪಡೆದರು. ರಾಜೇಶ್ವರಿ ಕುಮಾರಿ 36, ವರ್ಷಾ ವರ್ಮನ್ 52ನೇ ಸ್ಥಾನದಲ್ಲಿ ಸ್ಪರ್ಧೆಯನ್ನು ಮುಗಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cap Auction: ಬ್ರಾಡ್‌ಮನ್ ಕ್ಯಾಪ್ 2.11 ಕೋಟಿ ರೂ.ಗೆ ಹರಾಜು
Cricket: ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20: ಕರ್ನಾಟಕವನ್ನು ಬಗ್ಗುಬಡಿದ ಬರೋಡ
Hockey: ವನಿತಾ ಜೂ. ಏಷ್ಯಾ ಕಪ್ ಹಾಕಿ: ಭಾರತ ತಂಡ ಮಸ್ಕತ್‌ಗೆ
Pro Kabaddi: ಬೆಂಗಳೂರು ಬುಲ್ಸ್-ಗುಜರಾತ್ ಜೈಂಟ್ಸ್ ಪಂದ್ಯ ಟೈ
Mangaluru: ವಿವಿ ಅಂತರ್ ಕಾಲೇಜು ಆ್ಯತ್ಲೆಟಿಕ್ಸ್: ಸತತ 22 ಬಾರಿ ಆಳ್ವಾಸ್ ಚಾಂಪಿಯನ್
MUST WATCH
ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.