ಹಾಲೆಪ್‌ಗೆ ಆಘಾತವಿಕ್ಕಿದ ಟೌನ್‌ಸೆಂಡ್
Team Udayavani, Aug 31, 2019, 5:11 AM IST
ವನಿತಾ ಮುಖಾಮುಖೀಯಲ್ಲಿ ಅಮೆರಿಕದ 116ನೇ ರ್‍ಯಾಂಕಿಂಗ್ ಆಟಗಾರ್ತಿ ಟಯ್ಲರ್ ಟೌನ್‌ಸೆಂಡ್ ನೆಚ್ಚಿನ ಆಟಗಾರ್ತಿ ಸಿಮೋನಾ ಹಾಲೆಪ್ ಅವರನ್ನು ಕೆಡವಿ ಅಚ್ಚರಿಯ ಫಲಿತಾಂಶ ದಾಖಲಿಸಿದರು. ದ್ವಿತೀಯ ಸುತ್ತಿನ ಈ ಮುಖಾಮುಖೀಯಲ್ಲಿ ಟೌನ್‌ಸೆಂಡ್ 2-6, 6-3, 7-6 (7-4) ಅಂತರದಿಂದ ಗೆದ್ದು ಬೀಗಿದರು. ಕಳೆದೆರಡೂ ವರ್ಷ ಹಾಲೆಪ್ ಇಲ್ಲಿ ಮೊದಲ ಸುತ್ತಿನಲ್ಲೇ ಎಡವಿದ್ದರು.
6ನೇ ಶ್ರೇಯಾಂಕದ ಜೆಕ್ ಆಟಗಾರ್ತಿ ಪೆಟ್ರಾ ಕ್ವಿಟೋವಾ ಸೋಲು ಕೂಡ ಏರುಪೇರಿನ ಫಲಿತಾಂಶಕ್ಕೆ ಸಾಕ್ಷಿಯಾಗಿದೆ. ಅವರನ್ನು ಜರ್ಮನಿಯ ಆ್ಯಂಡ್ರಿಯಾ ಪೆಟ್ಕೊವಿಕ್ 6-4, 6-4ರಿಂದ ಮಣಿಸಿದರು.
ಒಸಾಕಾ – ಗಾಫ್ ಮುಖಾ ಮುಖೀ
ಅಗ್ರ ಶ್ರೇಯಾಂಕ ದ ನವೋಮಿ ಒಸಾಕಾ ಪೋಲ್ಯಾಂಡ್‌ನ ಮಾಗಾx ಲೆನೆಟ್ ಅವರನ್ನು 6-2, 6-4ರಿಂದ ಮಣಿಸಿ 3ನೇ ಸುತ್ತಿಗೆ ಏರಿದರು. ಒಸಾಕಾ ಎದುರಾಳಿ ಅಮೆರಿಕದ 15ರ ಹರೆಯದ ಪ್ರತಿಭಾನ್ವಿತ ಆಟಗಾರ್ತಿ ಕೊಕೊ ಗಾಫ್. ದಿನದ ಇನ್ನೊಂದು ಪಂದ್ಯದಲ್ಲಿ ಅವರು ಹಂಗೇರಿಯ ಟೈಮಿಯಾ ಬಬೋಸ್ ವಿರುದ್ಧ 6-2, 4-6, 6-4 ಅಂತರದ ಜಯ ಸಾಧಿಸಿದರು. ಈ ಪಂದ್ಯಕ್ಕಾಗಿ ಅಮೆರಿಕದ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.
2 ಬಾರಿಯ ರನ್ನರ್ ಅಪ್ ಡೆನ್ಮಾರ್ಕ್‌ನ ಕ್ಯಾರೋಲಿನ್ ವೋಜ್ನಿಯಾಕಿ ಅಮೆರಿಕದ ಡೇನಿಯಲ್ ಕೊಲಿನ್ಸ್ ವಿರುದ್ಧ 4-6, 6-3, 6-4ರಿಂದ; ಲಾತ್ವಿಯಾದ ಜೆಲೆನಾ ಒಸ್ಟಾಪೆಂಕೊ ಅಮೆರಿಕದ ಮತ್ತೋರ್ವ ಆಟಗಾರ್ತಿ ಅಲಿಸನ್ ರಿಸ್ಕೆ ವಿರುದ್ಧ 6-4, 6-3 ಅಂತರದಿಂದ ಮೇಲುಗೈ ಸಾಧಿಸಿದರು. ಆದರೆ ಅಮೆರಿಕದ ಸೋಫಿಯಾ ಕೆನಿನ್ 3ನೇ ಸುತ್ತು ತಲಪುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಜರ್ಮನಿಯ ಲಾರಾ ಸಿಗ¾ಂಡ್ ವಿರುದ್ಧ 7-6 (7-4), 6-0 ಅಂತರದ ಗೆಲುವು ಒಲಿಸಿಕೊಂಡರು.
ಸ್ವಿಜರ್‌ಲ್ಯಾಂಡ್‌ನ ಬೆಲಿಂಡಾ ಬೆನ್ಸಿಕ್ ಫ್ರಾನ್ಸ್ ನ ಅಲಿಜ್ ಕಾರ್ನೆಟ್ ವಿರುದ್ಧ 6-4, 1-6, 6-2ರಿಂದ ಮೇಲುಗೈ ಸಾಧಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ
You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.