ಸಾಂಪ್ರದಾಯಿಕ ಆಟಗಳು ಇನ್ನೂ ಚಾಲ್ತಿಯಲ್ಲಿವೆ


Team Udayavani, Aug 23, 2021, 7:49 PM IST

dfgdtrtr

ಸಾಂಪ್ರದಾಯಿಕ ಆಟಗಳು ಕನಾ೯ಟಕದ ಸಂಸ್ಕೃತಿಯ ಶ್ರೀಮಂತಿಕೆಯನ್ನು ತೋರಿಸುತ್ತವೆ. ಆಟಗಳಲ್ಲಿ ಹೊರಾಂಗಣ ,ಒಳಾಂಗಣ ಮತ್ತು ಮಣೆ ಆಟಗಳೆಂದು ವಿಭಜನೆಗಳಿವೆ.

ಈ ಆಸಕ್ತಿದಾಯಕ ಆಟಗಳನ್ನು ಯುವಕರು ಮತ್ತು ಹಿರಿಯರು ಆಡುತ್ತಿದ್ದರು. ಆದರೆ ಮೊಬೈಲ್ ಫೋನ್ , ಕಂಪ್ಯೂಟರಗಳು ಲಗ್ಗೆ ಇಟ್ಟ ಮೇಲೆ ಸಾಂಪ್ರದಾಯಿಕ ಆಟಗಳು ತೆರೆಮರೆಗೆ ಸರಿದವು.

ಕೆಲವು ಸಾಂಪ್ರದಾಯಿಕ ಆಟಗಳನ್ನು ಈಗಲೂ ಕರ್ನಾಟಕದಲ್ಲಿ ಆಡಲಾಗುತ್ತದೆ. ಅವುಗಳಲ್ಲಿ ಪ್ರಮುಖವಾಗಿ ಕಬಡ್ಡಿ, ಗೋಲಿ ಆಟ, ಬುಗುರಿ, ಚಿನ್ನಿ ದಾಂಡು, ಲಗೋರಿ, ಚನ್ನೆಮಣೆಯಾಟ, ಕೆರೆ ದಂಡೆ, ಚೌಕಾಬಾರಾ, ಆನೆ-ಕುರಿಯಾಟ ಹೀಗೆ ಹಲವು ಬಗೆಯ ಸಾಂಪ್ರದಾಯಿಕ ಆಟಗಳೂ ಇನ್ನೂ ಜಾಸ್ತಿಯಲ್ಲಿವೆ. ಇಂಥ ಕೆಲವು ಜನಪ್ರಿಯವಾದ ಸಾಂಪ್ರದಾಯಿಕ ಆಟಗಳ ಬಗ್ಗೆ ವಿವರ ಇಲ್ಲಿದೆ ನೋಡಿ.

) ಕಬಡ್ಡಿ

ಇದು ಬಹಳ ಸರಳವಾದ ಹೊರಾಂಗಣ ಆಟ. ಈ ಆಟದಲ್ಲಿ ಏಳು ಆಟಗಾರರ ಎರಡು ತಂಡಗಳಿರುತ್ತವೆ. ಎರಡು ತಂಡಗಳು ಆವರಣದ ಎದುರು ಭಾಗವನ್ನು ಆಕ್ರಮಿಸುತ್ತವೆ. ನಾಣ್ಯವನ್ನು ಮೇಲೆ ಎಸೆದು ಯಾರು ಮೊದಲು ಆಟ ಪ್ರಾರಂಭಿಸಬೇಕು ಎಂಬುದನ್ನು ನಿರ್ಧರಿಸುತ್ತಾರೆ.

ನಿರ್ಣಾಯಕ ಗಡಿರೇಖೆಯಿಂದ ವಿಭಜಿಸಿದ ಆವರಣದಲ್ಲಿ ಟಾಸ್ ಗೆದ್ದವರು ಮೊದಲು  ಕಬಡ್ಡಿ ಕಬಡ್ಡಿ ಎನ್ನುತ್ತಾ ನಿರ್ಣಾಯಕ ರೇಖೆ ದಾಟಿ ಎದುರು ಗುಂಪಿನತ್ತ ಧಾವಿಸುತ್ತಾರೆ.

ಎದುರು ಗುಂಪಿನ ಯಾರನ್ನಾದರೂ ಮುಟ್ಟಿ ಅವರಿಂದ ತಪ್ಪಿಸಿಕೊಂಡು ಕಬಡ್ಡಿ ಕಬಡ್ಡಿ ಎನ್ನುವುದನ್ನು ನಿಲ್ಲಿಸದೆ ಗೆರೆ ದಾಟಿದರೆ ಮುಟ್ಟಿಸಿಕೊಂಡವರು ಸೋತಂತೆ.ಹೋದವನನ್ನು ಎದುರು ಗುಂಪಿನವರು ಹಿಡಿದು ಅವನು ಗೆರೆ ದಾಟದೆ ಇದ್ದರೆ ಅವನು ಸೋತಂತೆ.

ಸೋತವರು ಗುಂಪನ್ನು ಬಿಟ್ಟು ಹೊರಗೆ ಕೂರಬೇಕು. ಪ್ರತಿ ಸಾರಿಯೂ ಒಂದು ಗುಂಪಿನಿಂದ ಒಬ್ಬರು ಮಾತ್ರ ಕಬಡ್ಡಿ ಎನ್ನುತ್ತಾ ಎದುರಾಳಿ ಗುಂಪಿನೊಳಗೆ ಪ್ರವೇಶಿಸಬೇಕು.ಹೀಗೆ ಯಾವ ತಂಡ ಹೆಚ್ಚು ಅಂಕವನ್ನು ಗಳಿಸುತ್ತದೆಯೋ ಆ ತಂಡವನ್ನು ವಿಜಯಿಯೆಂದು ಘೋಷಿಸಲಾಗುತ್ತದೆ. ಈ ಪಂದ್ಯದಲ್ಲಿ ಕೈ-ಕಣ್ಣಿನ ಸಮನ್ವಯ ಮತ್ತು ಆಟಗಾರನ ಏಕಾಗ್ರತೆ ಅತಿ ಅವಶ್ಯಕ.

ಇತ್ತೀಚಿನ ದಿನಗಳಲ್ಲಿ ಕಬ್ಬಡ್ಡಿ ಕೂಡ online betting ಮಾಡುವ ನೆಚ್ಚಿನ ಕ್ರೀಡೆಯಾಗಿದೆ.

) ಚೌಕಾಬಾರಾ

ಚೌಕಾಬಾರಾ ಪುರಾತನವಾದ ಮಣೆ ಆಟ. ಇದನ್ನು ಮೈಸೂರಿನಲ್ಲಿ ಚೌಕಾಬಾರಾ ಮತ್ತು ಉತ್ತರ ಕನಾ೯ಟಕದಲ್ಲಿ  ಚಕ್ಕಾರಾ ಅಥವಾ ಚಕ್ಕಾ ಎಂದು ಕರೆಯುತ್ತಾರೆ. ಇದು 5×5, 7×7, 9×9, 11×11 ಚೌಕದ ಮಣೆ ಆಟ. ಇದರಲ್ಲಿ 2 ರಿಂದ 4 ಆಟಗಾರರಿರುತ್ತಾರೆ. ಕವಡೆಯನ್ನು ದಾಳ(dice)ವಾಗಿ ಉಪಯೋಗಿಸುತ್ತಾರೆ. ಪ್ರತಿ ಆಟಗಾರ 4 ಪ್ಯಾದೆ(pawns) ಹೊಂದಿರುತ್ತಾನೆ.

ನಿಮ್ಮ ಎದುರಾಳಿಗಳಿಗಿಂತ ಮೊದಲು ಮನೆಯ ಮಧ್ಯದ ಚೌಕವನ್ನು ತಲುಪುವುದು ಆಟದ ಮುಖ್ಯ ಉದ್ದೇಶವಾಗಿದೆ.ಆಟವು ಕಣ್ಣಿನಿಂದ ಕಣ್ಣಿನ ಸಮನ್ವಯವನ್ನು ಸುಧಾರಿಸುತ್ತದೆ ಮತ್ತು ತಂತ್ರಗಳನ್ನು ಮಾಡಲು ಕಲಿಸುತ್ತದೆ.

ನಿಯಮಗಳು:

4 ಕವಡೆಯನ್ನು ಎಸೆಯಿರಿ

1 ಬಾಯಿ ಮೇಲಕ್ಕೆ – 1 ಚೌಕವನ್ನು ಸರಿಸಿ

2 ಬಾಯಿ ಮೇಲಕ್ಕೆ – 2 ಚೌಕವನ್ನು ಸರಿಸಿ

3 ಬಾಯಿ ಮೇಲಕ್ಕೆ – 3 ಚೌಕವನ್ನು ಸರಿಸಿ

4 ಬಾಯಿ ಮೇಲಕ್ಕೆ – 4 ಚೌಕವನ್ನು ಸರಿಸಿ ಪುನಃ ಆಡುವುದು

0 ಬಾಯಿ ಮೇಲಕ್ಕೆ- 8 ಚೌಕವನ್ನು ಸರಿಸಿ ಪುನಃ ಆಡುವುದು

ಆಡುವ ರೀತಿ:

ಪ್ರತಿಯೊಬ್ಬ ಆಟಗಾರನು ವಿಭಿನ್ನ ಆರಂಭದ ಹಂತವನ್ನು ಹೊಂದಿರುತ್ತಾನೆ ಮತ್ತು ಆರಂಭದಲ್ಲಿ ತನ್ನ ಎಲ್ಲಾ ನಾಣ್ಯಗಳನ್ನು ಅಲ್ಲಿಯೇ ಇಡುತ್ತಾನೆ.ಪ್ರತಿ ಆಟಗಾರ ತನ್ನ turn ಬಂದಾಗ ಕವಡೆಯನ್ನು ಎಸೆದು ನಿಯಮದ ಪ್ರಕಾರ ನಾಣ್ಯವನ್ನು ಮುಂದಿನ ಚೌಕಕ್ಕೆ ಸರಿಸುತ್ತಾನೆ. ತನ್ನ ಎಲ್ಲಾ ನಾಣ್ಯಗಳನ್ನು ಒಳಗಿನ ಚೌಕದಲ್ಲಿ ಪಡೆದ ಮೊದಲ ಆಟಗಾರನು ಆಟವನ್ನು ಗೆಲ್ಲುತ್ತಾನೆ.

) ಗೋಟಿ ಅಥವಾ ಕಂಚೆ (marbles) ಆಟ

ಗೋಟಿ ಆಟವೆಂದರೆ ಕನಾ೯ಟಕದ ಬೀದಿಬೀದಿಗಳಲ್ಲಿ ಮಕ್ಕಳು ಆಡುವ ಜನಪ್ರೀಯ ಆಟ. ಇದರಲ್ಲಿ ಆಟಗಾರನು ತನ್ನ ಕಂಚೆಯಿಂದ ಗುರಿಯಿಟ್ಟು ಆಯ್ದ ಕಂಚೆಯನ್ನು ತಗುಲಿಸಬೇಕು.

ಈ ಆಟದಲ್ಲಿ ಗೆದ್ದವನಿಗೆ ಇತರ ಆಟಗಾರರ ಎಲ್ಲ ಕಂಚೆಗಳು ಸಿಗುತ್ತವೆ. ಗುರಿ ಮತ್ತು ಏಕಾಗ್ರತೆಯ ಕೌಶಲ್ಯಗಳು ಈ ಆಟದಲ್ಲಿ ಅವಶ್ಯಕ.

) ಚನ್ನೆಮಣೆಯಾಟ

ಪ್ರತಿ ಸಾಲಿನಲ್ಲಿ ಏಳು ಗುಣಿಗಳಿದ್ದು ಎರಡೂ ಸಾಲುಗಳಲ್ಲಿ ಹದಿನಾಲ್ಕು ಗುಣಿಗಳಿರುತ್ತವೆ. ಬಯಲುಸೀಮೆಯಲ್ಲಿ ಈ ಆಟಕ್ಕೆ ಹುಣಸೆಬೀಜ, ಪಾರಿವಾಳದ ಬೀಜಗಳನ್ನು,ಗುಲಗಂಜಿ ಅಥವಾ ಹೊಂಗಾರೆ ಮರದ ಬೀಜಗಳನ್ನು ಬಳಸುತ್ತಾರೆ. ಚನ್ನೆಮಣೆ ಆಟದಲ್ಲಿ ವೈವಿಧ್ಯಮಯವಾದ ಪ್ರಕಾರಗಳಿವೆ.ಚನ್ನೆಮಣೆ ಆಟದಲ್ಲಿ ಮುಖ್ಯವಾಗಿ ಆಟಗಾರನ ಜಾಣ್ಮೆ, ನೆನಪಿನ ಶಕ್ತಿ, ಮುಂದಾಲೋಚನೆಗಳು ಮಹತ್ವದ ಪಾತ್ರ ವಹಿಸುತ್ತವೆ. ಯಾವ ಮನೆಯನ್ನು ಮೊದಲು ಹಿಡಿದರೆ ಹೆಚ್ಚಿನ ಕಾಯಿಗಳನ್ನು ಗೆಲ್ಲಬಹುದು ಎನ್ನುವುದು ಕ್ಷಣದಲ್ಲಿ ತರ್ಕಿಸಿ ಕಾಯಿ ನಡೆಸಬೇಕಾಗಿರುತ್ತದೆ.

) ಚಿನ್ನಿ ದಾಂಡು

ಚಿನ್ನಿ ದಾಂಡು ಅಥವಾ ಗಿಲ್ಲಿ ದಾಂಡು ಒಂದು ಜನಪ್ರಿಯ ಗ್ರಾಮೀಣ ಆಟ.ಇದರಲ್ಲಿ ಮರದ ಕೋಲಿನಿಂದ ಮಾಡಿದ ಒಂದು ಚಿಕ್ಕ ಚಿನ್ನಿ(peg) ಅಥವಾ ಗಿಲ್ಲಿ ಮತ್ತು ಸ್ವಲ್ಪ ದೊಡ್ಡದಾದ ಒಂದು ದಾಂಡು (stick) ಅಥವಾ ಕೋಲು ಇವುಗಳ ಸಹಾಯದಿಂದ ಆಡಲಾಗುತ್ತದೆ .

ಆಟಗಾರನು ಗುಂಡಿಯ ಮೇಲೆ ಅಡ್ಡವಾಗಿ ಚಿನ್ನಿಯನ್ನು ಇಡಬೇಕು.ಚಿನ್ನಿಯ ಕೆಳಭಾಗದಲ್ಲಿ ದಾಂಡನ್ನಿಟ್ಟು ಚಿನ್ನಿಯನ್ನು ಆದಷ್ಟು ದೂರ ಚಿಮ್ಮಬೇಕು. ಆಟಗಾರನು(striker) ಚಿನ್ನಿಯನ್ನು ದಾಂಡಿನಿಂದ ಮೇಲಕ್ಕೆ ಚಿಮ್ಮಿಸಿ ಚಿನ್ನಿ ಗಾಳಿಯಲ್ಲಿರುವಾಗ ಅದಕ್ಕೆ ಹೊಡೆಯಬೇಕು.

ಗಾಳಿಯಲ್ಲಿರುವಾಗ ಎಷ್ಟು ಸಲ ಬೇಕಾದರೂ ಹೊಡೆಯಬಹುದು.  ಹೀಗೆ ಮೇಲೆ ಚಿಮ್ಮಿಸಿದಾಗ ಎದುರು ತಂಡದ ಆಟಗಾರರು (fielders) ಚಿನ್ನಿಯನ್ನು ಹಿಡಿದರೆ ಆಟಗಾರ ತನ್ನ ಪಾಳಿ ಕಳೆದುಕೊಂಡಂತೆ. ಮೂರು ಬಾರಿ ಚಿನ್ನಿಯನ್ನು ಹೀಗೆ ಹೊಡೆಯಲಾಗದಿದ್ದರೆ ಆಟಗಾರ ಪಾಳಿ ಕಳೆದುಕೊಂಡಂತೆ. ಚಿನ್ನಿಯನ್ನು ಎರಡಕ್ಕಿಂತ ಹೆಚ್ಚು ಬಾರಿ ಹೊಡೆದರೆ ಗಿಲ್ಲಿ ಎಂದು ಕರೆಯಲಾಗುತ್ತದೆ.

Striker ಚಿನ್ನಿ ನೆಲಕ್ಕೆ ತಗಲುವ ಮುಂಚೆ ನಿಗಧಿಪಡಿಸಿದ ಜಾಗಕ್ಕೆ ಓಡಬೇಕು. ನೆಲಕ್ಕೆ ಬಿದ್ದ ಚಿನ್ನಿಯನ್ನು ಹತ್ತಿರದಲ್ಲಿದ್ದ ಎದುರಾಳಿ ಆಟಗಾರ (fielder) ನಿಂತ ಜಾಗದಿಂದಲೇ ಗುರಿಯಿಟ್ಟು ಕೋಲಿನಿಂದ ಹೊಡಿಯಬೇಕು. ವಿಫಲವಾದರೆ striker ಮತ್ತೊಂದು ಅವಕಾಶ ಪಡೆಯುತ್ತಾನೆ.

ಅನೇಕ online betting websites ಈ ಕ್ರೀಡೆಗಳ ಮೇಲೆ ಬಾಜಿ ಕಟ್ಟಲು ನಿಮಗೆ ಅವಕಾಶ ನೀಡುತ್ತವೆ. ಈ online betting sites ಭಾರತೀಯ ಆಟಗಾರರಿಗೆ ಕಾನೂನುಬದ್ಧ ಮತ್ತು ಸುರಕ್ಷಿತವಾಗಿದೆ.

ಟಾಪ್ ನ್ಯೂಸ್

11

IPL ‌Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?

Iyer

IPL ‌Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್‌ ಅಯ್ಯರ್‌ ಪಂಜಾಬ್‌ ಪಾಲಿಗೆ

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ

1-abaz-matr-11

Maharashtra; ಇನ್‌ಸ್ಟಾದಲ್ಲಿ 56 ಲಕ್ಷ ಫಾಲೋವರ್ಸ್‌ ಇದ್ರು ಸಿಕ್ಕಿದ್ದು ಕೇವಲ 155 ಮತ!!

Riots against mosque survey: Police fire tear gas at Sambhal

Sambhal: ಮಸೀದಿ ಸರ್ವೇ ವಿರೋಧಿಸಿ ಗಲಾಟೆ: ಅಶ್ರುವಾಯು ಸಿಡಿಸಿದ ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

IPL ‌Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?

Iyer

IPL ‌Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್‌ ಅಯ್ಯರ್‌ ಪಂಜಾಬ್‌ ಪಾಲಿಗೆ

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ

Rishabh Pant gave gifts to those who helped during the accident

Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್‌ ನೀಡಿದ ರಿಷಭ್‌ ಪಂತ್‌

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

11

IPL ‌Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?

Iyer

IPL ‌Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್‌ ಅಯ್ಯರ್‌ ಪಂಜಾಬ್‌ ಪಾಲಿಗೆ

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

20-uv-fusion

UV Fusion: ಜೀವಂತಿಕೆ

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.