ಮಗಳ ಬಳಿಕ ತಂದೆಯನ್ನು ಕಳೆದುಕೊಂಡ ಸೋಲಂಕಿ
Team Udayavani, Mar 1, 2022, 6:30 AM IST
ಅಹ್ಮದಾಬಾದ್: ಇತ್ತೀಚೆಗಷ್ಟೇ ತನ್ನ ಪುಟ್ಟ ಮಗಳನ್ನು ಕಳೆದುಕೊಂಡ ನೋವಿನಲ್ಲೂ ಶತಕ ಬಾರಿಸಿ ಸುದ್ದಿಯಾಗಿದ್ದ ಬರೋಡಾ ತಂಡದ ಕ್ರಿಕೆಟಿಗ ವಿಷ್ಣು ಸೋಲಂಕಿಗೆ ಮತ್ತೊಂದು ಆಘಾತ ಎದುರಾಗಿದೆ. ಅವರ ತಂದೆ ಕೂಡ ಕೊನೆಯುಸಿರೆಳೆದಿದ್ದಾರೆ.
ಸೋಲಂಕಿ ಅವರ ತಂದೆ ದೀರ್ಘಕಾಲದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದು, ಎರಡು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಬರೋಡಾ ಕ್ರಿಕೆಟ್ ತಂಡದ ಮ್ಯಾನೇಜರ್ ಧರ್ಮೇಂದ್ರ ಅರೋಥೆ ಮಾಹಿತಿ ನೀಡಿದ್ದಾರೆ. ತಂದೆಯ ಅಗಲಿಕೆಯ ಸುದ್ದಿ ಬಂದ ಬಳಿಕವೂ ಸೋಲಂಕಿ ರಣಜಿ ಪಂದ್ಯದಲ್ಲಿ ಮುಂದುವರಿಯುವ ನಿರ್ಧಾರ ತೆಗೆದುಕೊಂಡಿದ್ದರು.
ರವಿವಾರ ಚಂಡೀಗಢ ವಿರುದ್ಧದ ಪಂದ್ಯದ ಬಳಿಕ ತಮಗೆ ಈ ಸುದ್ದಿ ತಿಳಿಯಿತು ಎಂದು ಬರೋಡಾ ತಂಡದ ನಾಯಕ ಕೇದಾರ್ ದೇವಧರ್ ತಿಳಿಸಿದ್ದಾರೆ.
ಇದನ್ನೂ ಓದಿ:ವಿಂಡೀಸ್ನ ಲೆಜೆಂಡ್ರಿ ಸ್ಪಿನ್ನರ್ ಸೋನಿ ರಾಮಧಿನ್ ನಿಧನ
“ಡ್ರೆಸ್ಸಿಂಗ್ ರೂಮ್ನ ಮೂಲೆಯಲ್ಲಿ ಕುಳಿತು ವಿಷ್ಣು ತಂದೆಯ ಅಂತಿಮ ವಿಧಿವಿಧಾನವನ್ನು ವೀಡಿಯೋ ಕಾಲ್ ಮೂಲಕ ನೋಡುತ್ತಿದ್ದರು. ಅದು ನಿಜಕ್ಕೂ ಆತನ ಪಾಳಿಗೆ ಅತ್ಯಂತ ಕಠಿನ ಕ್ಷಣ. ಆದರೆ ಇಂಥ ಸಂದರ್ಭದಲ್ಲಿಯೂ ಆತ ತೋರಿದ ಧೈರ್ಯಕ್ಕೆ ನಮ್ಮಲ್ಲಿ ಪದಗಳಿಲ್ಲ. ದುಃಖದ ಹೊರೆಯನ್ನು ಹೊತ್ತು ಕ್ರಿಕೆಟ್ ಆಡಿ ಮಿಂಚಿದ್ದಕ್ಕೆ ಅವರಿಗೆ ಹ್ಯಾಟ್ಸ್ ಆಫ್’ ಎಂದು ದೇವಧರ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.