ಭಾರತೀಯ ಕ್ರಿಕೆಟಿಗರ ಟ್ರೆಕ್ಕಿಂಗ್
Team Udayavani, Feb 28, 2017, 11:24 AM IST
ಪುಣೆ: ಆಸ್ಟ್ರೇಲಿಯ ವಿರುದ್ಧ ಪುಣೆಯಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ ಭಾರತೀಯ ತಂಡ ಕೇವಲ ಮೂರೇ ದಿನಗಳಲ್ಲಿ ಹೀನಾಯ ಸೋಲನ್ನು ಕಂಡಿದೆ. ದ್ವಿತೀಯ ಟೆಸ್ಟ್ಗೆ ಇನ್ನೂ ಕೆಲವು ದಿನವಿರುವುದರಿಂದ ಪುಣೆ ಸೋಲಿನ ಆಘಾತವನ್ನು ಮರೆಯುವ ಉದ್ದೇಶದಿಂದ ನಾಯಕ ವಿರಾಟ್ ಕೊಹ್ಲಿ ಮತ್ತು ತಂಡದ ಸದಸ್ಯರು ಸೋಮವಾರ ಕ್ರಿಕೆಟ್ಗೆ ವಿಶ್ರಾಂತಿ ನೀಡಿ ಟ್ರೆಕ್ಕಿಂಗ್ ವಿಹಾರಕ್ಕೆ ಹೊರಟರು. ದ್ವಿತೀಯ ಟೆಸ್ಟ್ ಬೆಂಗಳೂರಿನಲ್ಲಿ ಮಾ. 4ರಿಂದ ಆರಂಭವಾಗಲಿದೆ.
ಕೊಹ್ಲಿ, ಅಶ್ವಿನ್, ಅಜಿಂಕ್ಯ ರಹಾನೆ, ರವೀಂದ್ರ ಜಡೇಜ ಮುಂತಾದವರು ಪುಣೆಯಿಂದ 80 ಕಿ.ಮೀ.ದೂರದಲ್ಲಿರುವ ತಮಿØನಿ ಘಾಟ್ಗೆ ತೆರಳಿ ದಿನವಿಡೀ ಸಮಯ ಕಳೆದರು. ಘಾಟ್ನಲ್ಲಿ ತೆಗೆದ ಚಿತ್ರಗಳನ್ನು ಅವರೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಸಂಭ್ರಮಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.