ತ್ರಿಕೋನ ಸರಣಿ: ಬಾಂಗ್ಲಾ ವಿಜಯ
Team Udayavani, Jan 16, 2018, 12:26 PM IST
ಢಾಕಾ: ತ್ರಿಕೋನ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶ 8 ವಿಕೆಟ್‌ಗಳಿಂದ ಜಿಂಬಾಬ್ವೆಯನ್ನು ಮಣಿಸಿದೆ. ರವಿವಾರ ಇಲ್ಲಿ ನಡೆದ ಮುಖಾಮುಖೀಯಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಜಿಂಬಾಬ್ವೆ 49 ಓವರ್‌ಗಳಲ್ಲಿ 170 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಜವಾಬು ನೀಡಿದ ಬಾಂಗ್ಲಾ 28.3 ಓವರ್‌ಗಳಲ್ಲಿ 2 ವಿಕೆಟಿಗೆ 171 ರನ್ ಬಾರಿಸಿತು.
ಬಾಂಗ್ಲಾ ಆರಂಭಕಾರ ತಮಿಮ್ ಇಕ್ಬಾಲ್ ಔಟಾಗದೆ 84 ರನ್ ಮಾಡಿದರೆ, ಶಕಿಬ್ ಅಲ್ ಹಸನ್ ಆಲ್‌ರೌಂಡ್ ಪ್ರದರ್ಶನದ ಮೂಲಕ ಗಮನ ಸೆಳೆದರು. ಶಕಿಬ್ ಸಾಧನೆ 43ಕ್ಕೆ 3 ವಿಕೆಟ್ ಹಾಗೂ 37 ರನ್. ಬಾಂಗ್ಲಾ ಬೌಲಿಂಗ್ ಆರಂಭಿಸಿದ ಶಕಿಬ್ ಮೊದಲ ಓವರಿನಲ್ಲೇ ಮೈರ್ ಹಾಗೂ ಇರ್ವಿನ್ ಅವರನ್ನು ಶೂನ್ಯಕ್ಕೆ ಕೆಡವಿದರು. 2 ರನ್ನಿಗೆ 2 ವಿಕೆಟ್ ಕಳೆದುಕೊಂಡು ಸಂಕಟಕ್ಕೆ ಸಿಲುಕಿದ ಜಿಂಬಾಬ್ವೆ ಅನಂತರ ಚೇತರಿಸಿಕೊಳ್ಳಲೇ ಇಲ್ಲ. ಸಿಕಂದರ್ ರಾಜ 52 ಹಾಗೂ ವಾಲರ್ 33 ರನ್ ಮಾಡಿದ್ದರಿಂದ ತಂಡ ದೊಡ್ಡ ಕುಸಿತದಿಂದ ಪಾರಾಯಿತು, ಅಷ್ಟೇ.ಬುಧವಾರ ಶ್ರೀಲಂಕಾ-ಜಿಂಬಾಬ್ವೆ ಮುಖಾಮುಖೀಯಾಗಲಿವೆ.
ಸಂಕ್ಷಿಪ್ತ ಸ್ಕೋರ್: ಜಿಂಬಾಬ್ವೆ-49 ಓವರ್‌ಗಳಲ್ಲಿ 170 (ರಾಜ 52, ವಾಲರ್ 33, ಟಯ್ಲರ್ 24, ಶಕಿಬ್ 43ಕ್ಕೆ 3, ಮುಸ್ತಫಿಜುರ್ 29ಕ್ಕೆ 2, ರುಬೆಲ್ 24ಕ್ಕೆ 2). ಬಾಂಗ್ಲಾದೇಶ-28.3 ಓವರ್‌ಗಳಲ್ಲಿ 2 ವಿಕೆಟಿಗೆ 171 (ತಮಿಮ್ ಔಟಾಗದೆ 84, ಶಕಿಬ್ 37, ರಾಜ 53ಕ್ಕೆ 2).
ಪಂದ್ಯಶ್ರೇಷ್ಠ: ಶಕಿಬ್ ಅಲ್ ಹಸನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.