ಫಿಲೋಮಿನಾದ ತ್ರಿಶೂಲ್ ರಾಷ್ಟ್ರೀಯ ಜೀವ ರಕ್ಷಣಾ ಈಜು ಚಾಂಪಿಯನ್
Team Udayavani, Dec 23, 2017, 9:38 AM IST
ಪುತ್ತೂರು: ಗೋವಾದಲ್ಲಿ ನಡೆದ 2017-18ರ ರಾಷ್ಟ್ರೀಯ ಜೀವ ರಕ್ಷಣಾ ಈಜು ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪ. ಪೂ. ಕಾಲೇಜಿನ ವಿದ್ಯಾರ್ಥಿ ತ್ರಿಶೂಲ್ ಅವರು ಕರ್ನಾಟಕ ರಾಜ್ಯದಿಂದ 16 ರ ವಯೋಮಿತಿಯ ಬಾಲಕರ ವಿಭಾಗದಲ್ಲಿ ಭಾಗವಹಿಸಿ 9 ಚಿನ್ನ ಮತ್ತು 1 ಬೆಳ್ಳಿ ಪದಕವನ್ನು ಜಯಿಸುವ ಮೂಲಕ ರಾಷ್ಟ್ರೀಯ ಚಾಂಪಿಯನ್ ಆಗಿ ಮೂಡಿ ಬಂದಿದ್ದಾರೆ. 2018ರಲ್ಲಿ ಆಸ್ಟ್ರೇ ಲಿಯಾದ ಅಡಿಲೇಡ್‌ನಲ್ಲಿ ಜರಗಲಿರುವ ವಿಶ್ವ ಮಟ್ಟದ ಜೀವ ರಕ್ಷಣಾ ಈಜು ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಸ್ಪಧೆಯ 200 ಮೀ. ಸೂಪರ್ ಲೈಫ್ ಸೇವರ್‌ನಲ್ಲಿ ಪ್ರಥಮ, 200 ಮೀ. ಒಬ್‌ಸ್ಟ್ರಾಕಲ್ ಕ್ಯಾರಿಯಲ್ಲಿ ಪ್ರಥಮ, 1 ಕಿ. ಮೀ. ಬೀಚ್ ರೇಸ್‌ನಲ್ಲಿ ಪ್ರಥಮ, ಬೀಚ್ ಫ್ಲ್ಯಾಗ್‌ನಲ್ಲಿ ಪ್ರಥಮ, ರನ್-ಸ್ವಿಮ್-ರನ್‌ನಲ್ಲಿ ಪ್ರಥಮ, ಸರ್ಫ್ ರೇಸ್‌ನಲ್ಲಿ ಪ್ರಥಮ, ಬೋರ್ಡ್ ರೇಸ್‌ನಲ್ಲಿ ಪ್ರಥಮ, ಮ್ಯಾನಿಕಿನ್ ಕ್ಯಾರಿಯ 50 ಮತ್ತು 100 ಮೀ. ನಲ್ಲಿ ಪ್ರಥಮ ಹಾಗೂ ಮ್ಯಾನಿಕಿನ್ ಟೊ ವಿದ್ ಫಿನ್ಸ್‌ನಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಪುತ್ತೂರು ಅಕ್ವಾಟಿಕ್ ಕ್ಲಬ್ ಸದಸ್ಯರಾಗಿರುವ ಅವರಿಗೆ ಪಾರ್ಥ ವಾರಣಾಸಿ, ನಿರೂಪ್ ಜಿ. ಆರ್. ಮತ್ತು ವಸಂತ ಗೌಡ ತರಬೇತಿ ನೀಡಿದ್ದಾರೆ. ವಿದ್ಯಾರ್ಥಿಯ ವಿಶಿಷ್ಟ ಸಾಧನೆಗೆ ಸಂತ ಫಿಲೋಮಿನಾ ಪ. ಪೂ. ಕಾಲೇಜಿನ ಪ್ರಾಂಶುಪಾಲ ವಂ| ವಿಜಯ್ ಲೋಬೊ, ದೈ.ಶಿ. ನಿರ್ದೇಶಕ ಪ್ರಕಾಶ್ ಡಿಸೋಜಾ ಮತ್ತು ಸೌಮ್ಯಲತಾ ಕೆ. ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvAUS; ಇತಿಹಾಸದಲ್ಲೇ ಮೊದಲ ಬಾರಿಗೆ…: 200 ವಿಕೆಟ್ ನೊಂದಿಗೆ ಹೊಸ ದಾಖಲೆ ಬರೆದ ಬುಮ್ರಾ
ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು
World Rapid Chess Championship: ವಿಶ್ವ ರ‍್ಯಾಪಿಡ್ ಚೆಸ್.. ಅರ್ಜುನ್ ಜಂಟಿ ಅಗ್ರಸ್ಥಾನ
PKL Season 11: ಇಂದು ಪ್ರೊ ಕಬಡ್ಡಿ ಫೈನಲ್… ಹರಿಯಾಣ – ಪಾಟ್ನಾ ಹಣಾಹಣಿ
T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.