ಟರ್ಕಿಸ್ ವಿಶ್ವಕಪ್ ಹೀರೊ ರೆಕ್ಬೆರ್ ಆಸ್ಪತ್ರೆಗೆ ದಾಖಲು
Team Udayavani, Mar 29, 2020, 11:15 PM IST
ಅಂಕರಾ (ಟರ್ಕಿ): ಟರ್ಕಿಯ ರಾಷ್ಟ್ರೀಯ ತಂಡದ ಮತ್ತು ಬಾರ್ಸಲೋನಾ ಕ್ಲಬ್ನ ಮಾಜಿ ಗೋಲ್ಕೀಪರ್ ರುಸ್ತು ರೆಕ್ಬೆರ್ ಅವರಿಗೆ ಕೋವಿಡ್-19 ಸೋಂಕು ತಗಲಿರುವುದು ದೃಢಪಟ್ಟ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರ ಪತ್ನಿ ತಿಳಿಸಿದ್ದಾರೆ.
2002ರ ಫುಟ್ಬಾಲ್ ವಿಶ್ವಕಪ್ನಲ್ಲಿ ಅಸಾಮಾನ್ಯ ನಿರ್ವಹಣೆ ನೀಡಿದ್ದ ರೆಕ್ಬೆರ್ ಅವರು ತಂಡವನ್ನು ಸೆಮಿಫೈನಲ್ ತಲುಪುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಂತಿಮವಾಗಿ ತಂಡ ಮೂರನೇ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿತ್ತು. ಇದು ವಿಶ್ವಕಪ್ನಲ್ಲಿ ಟಿರ್ಕಿನ ಮಹೋನ್ನತ ಸಾಧನೆಯಾಗಿದೆ.
ಎಲ್ಲರೂ ಆರೋಗ್ಯವಾಗಿರುವಾಗ ರುಸ್ತು ಅವರಿಗೆ ಹಠಾತ್ ಸೋಂಕಿನ ಲಕ್ಷಣ ಗೋಚರಿಸಿದಾಗ ಆಘಾತವಾಯಿತು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಇದೊಂದು ಕಠಿನ ಸಮಯ ಎಂದು ಅವರ ಪತ್ನಿ ಇಸಿಲ್ ರೆಕೆಬೆರ್ ಹೇಳಿದ್ದಾರೆ. ನಾವೆಲ್ಲರೂ ಪರೀಕ್ಷೆಗೆ ಒಳಗಾಗಿದ್ದು ನಾನು ಸಹಿತ ಪುತ್ರ ಮತ್ತು ಪುತ್ರಿಯ ವರದಿಯಲ್ಲಿ ನೆಗೆಟಿವ್ ಬಂದಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PCB: ಒಂದು ವರ್ಷದಲ್ಲಿ ಐದು ಕೋಚ್; ಪಾಕಿಸ್ತಾನ ವೈಟ್ ಬಾಲ್ ಕೋಚ್ ಆಗಿ ಆಖಿಬ್ ಜಾವೇದ್ ಆಯ್ಕೆ
T20 series: ಪಾಕಿಸ್ಥಾನಕ್ಕೆ ವೈಟ್ವಾಶ್ ಟಿ20: ಆಸ್ಟ್ರೇಲಿಯ 3-0 ಜಯಭೇರಿ
BGT 2024: ಐಪಿಎಲ್ ಹರಾಜಿನ ಕಾರಣಕ್ಕೆ ತಂಡ ತೊರೆದ ಆಸ್ಟ್ರೇಲಿಯಾದ ಸಹಾಯಕ ಕೋಚ್!
BGT Series: ವಿರಾಟ್ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್ ಜಾನ್ಸನ್
BGT 2024: ಗಾಯಗೊಂಡ ಗಿಲ್: ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.