ಐಪಿಎಲ್‌ಗೆ ಇನ್ನೆರಡು ತಂಡಗಳ ಸೇರ್ಪಡೆ: ಇಬ್ಬರು ಉದ್ಯಮಿಗಳ ಆಸಕ್ತಿ
Team Udayavani, Dec 4, 2020, 11:58 AM IST
ಹೊಸದಿಲ್ಲಿ: ಹೆಚ್ಚು ಕಡಿಮೆ ಒಂದು ವರ್ಷದಿಂದ ಐಪಿಎಲ್ ತಂಡಗಳ ಸಂಖ್ಯೆಯನ್ನು 8ರಿಂದ 10ಕ್ಕೆ ಏರಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಇದೀಗ ಹೊಸ ತಂಡಗಳು ಸೇರ್ಪಡೆಯಾಗುವ ದಿನಗಳು ಹತ್ತಿರವಾಗಿವೆ.
ಡಿ. 24ರಂದು ಬಿಸಿಸಿಐ ವಾರ್ಷಿಕ ಸರ್ವಸದಸ್ಯರ ಸಭೆಯನ್ನು ಹಮ್ಮಿಕೊಂಡಿದೆ. ಇಲ್ಲಿ 10 ತಂಡಗಳಿಗೆ ಅನುಮೋದನೆ ಪಡೆದು ಕೊಳ್ಳುವುದು ಮುಖ್ಯ ವಿಷಯವಾಗಿದೆ. ಒಟ್ಟು 23 ಅಂಶಗಳು ಸರ್ವಸದಸ್ಯರ ಸಭೆಯಲ್ಲಿ ಚರ್ಚೆಯಾಗಲಿವೆ.
ಐಪಿಎಲ್‌ಗೆ ಹೊಸ ತಂಡಗಳು
ಐಪಿಎಲ್‌ಗೆ ಇನ್ನೆರಡು ತಂಡಗಳನ್ನು ಸೇರಿಸುವ ಬಗ್ಗೆ ಲೆಕ್ಕಾಚಾರ ನಡೆದೇ ಇದೆ. ಗುಜರಾತ್‌ನ ಅಹ್ಮದಾಬಾದ್‌ನಿಂದ ಒಂದು ತಂಡ ಸಿದ್ಧವಾಗುವುದು ಖಚಿತ. ಇನ್ನೊಂದು ತಂಡ ಪುಣೆಯನ್ನು ಪ್ರತಿನಿಧಿಸಬಹುದು. ಸದ್ಯದ ಲೆಕ್ಕಾಚಾರದಲ್ಲಿ ಗೌತಮ್ ಅದಾನಿ ಮಾಲಕತ್ವದ ಅದಾನಿ ಸಮೂಹ ಮತ್ತು ಉದ್ಯಮಿ ಸಂಜೀವ್ ಗೊಯೆಂಕಾ ಈ ಎರಡು ತಂಡಗಳನ್ನು ಖರೀದಿಸುವ ಪೈಪೋಟಿಯಲ್ಲಿದ್ದಾರೆ.
ಆದರೆ ಈ ತಂಡಗಳು 2021ರಲ್ಲೇ ಆಡುತ್ತವೋ, 2022ರಲ್ಲಿ ಕಣಕ್ಕಿಳಿಯುತ್ತವೋ ಕಾದು ನೋಡಬೇಕು. ಜತೆಗೆ ಮುಂದಿನ ವರ್ಷ ಐಪಿಎಲ್ ಬೃಹತ್ ಹರಾಜು ನಡೆದೀತೇ ಎಂಬ ಪ್ರಶ್ನೆಯೂ ಇದೆ.
ಇದನ್ನೂ ಓದಿ:ಭಾರತ-ಆಸ್ಟ್ರೇಲಿಯ ಮೊದಲ ಟಿ20: ತಿರುಗೇಟು ನೀಡಲು ಕೊಹ್ಲಿ ಪಡೆಗೊಂದು ಅವಕಾಶ
ಉಪಾಧ್ಯಕ್ಷರ ಆಯ್ಕೆ: ಇದುವರೆಗೆ ಬಿಸಿಸಿಐ ಉಪಾಧ್ಯಕ್ಷ ಸ್ಥಾನ ಖಾಲಿಯೇ ಇದೆ. ಆ ಸ್ಥಾನವನ್ನು ಚುನಾವಣೆ ನಡೆಸಿ ಭರ್ತಿ ಮಾಡಲಾಗುತ್ತದೆ.
ಮೂವರು ಆಯ್ಕೆಗಾರರ ನೇಮಕ: ಬಿಸಿಸಿಐ ಆಯ್ಕೆ ಸಮಿತಿಗೆ ಬಾಕಿ ಉಳಿದ ಮೂವರು ಆಯ್ಕೆ ಗಾರರನ್ನು ಸೇರಿಸಿಕೊಳ್ಳುವುದು, ಹಾಗೆಯೇ ಅವರಿಗಾಗಿ ಮುಖ್ಯಸ್ಥರೊಬ್ಬರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆಯೂ ನಡೆಯಲಿದೆ.
ಐಸಿಸಿಯಲ್ಲಿ ಜಯ್ ಶಾ ಪ್ರತಿನಿಧಿ: ಬಿಸಿಸಿಐಯನ್ನು ಐಸಿಸಿ ಹಾಗೂ ಏಶ್ಯ ಕ್ರಿಕೆಟ್ ಕೌನ್ಸಿಲ್‌ನಲ್ಲಿ ಪ್ರತಿನಿಧಿಸುವವರು ಯಾರು ಎಂಬ ಪ್ರಶ್ನೆ ಇದೆ. ಸದ್ಯದ ಪ್ರಕಾರ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಈ ಹೊಣೆ ಹೊತ್ತುಕೊಳ್ಳಲಿದ್ದಾರೆ.
ಮುಂದಿನ ವರ್ಷ ಭಾರತದಲ್ಲೇ ನಡೆಯಲಿರುವ ಟಿ20 ವಿಶ್ವಕಪ್ ಸಿದ್ಧತೆ, ತೆರಿಗೆ ವಿನಾಯಿತಿ ಪಡೆದುಕೊಳ್ಳುವುದು, 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಸೇರ್ಪಡೆ ಬಗ್ಗೆಯೂ ಚರ್ಚೆಯಾಗಲಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Sydney: ಆಸ್ಟ್ರೇಲಿಯಾ ಪ್ರೇಕ್ಷಕರಿಗೆ ಸ್ಯಾಂಡ್‌ಪೇಪರ್ ಕೇಸ್ ನೆನಪು ಮಾಡಿದ ವಿರಾಟ್|Video
World Test Championship: ಭಾರತದ ಕನಸು ಛಿದ್ರ; ಆಸೀಸ್ ಫೈನಲ್ ಸ್ಥಾನ ಭದ್ರ
INDvAUS: ಸಿಡ್ನಿಯಲ್ಲಿ ಸೋಲು; ದಶಕದ ಬಳಿಕ ಬಾರ್ಡರ್ ಗಾವಸ್ಕರ್ ಟ್ರೋಫಿ ಸೋತ ಭಾರತ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.