Team India; ಕೆನಡಾ ವಿರುದ್ದದ ಪಂದ್ಯದ ಬಳಿಕ ತವರಿಗೆ ಮರಳಲಿದ್ದಾರೆ ಇಬ್ಬರು ಆಟಗಾರರು
Team Udayavani, Jun 14, 2024, 2:57 PM IST
ಫ್ಲೋರಿಡಾ: ಐಸಿಸಿ ಟಿ20 ವಿಶ್ವಕಪ್ ನಲ್ಲಿ ಭಾರತ ತಂಡ ಈಗಾಗಲೇ ಸೂಪರ್ 8 ಹಂತಕ್ಕೇರಿದೆ. ಆಡಿದ ಮೂರು ಪಂದ್ಯಗಳನ್ನು ಗೆದ್ದ ರೋಹಿತ್ ಬಳಗ ಗುಂಪು ಹಂತದಲ್ಲಿ ಒಂದು ಪಂದ್ಯವನ್ನು ಆಡಲಿದೆ. ನ್ಯೂಯಾರ್ಕ್ ನ ನಸ್ಸೌ ಸ್ಟೇಡಿಯಂನಲ್ಲಿ ಮೊದಲ ಮೂರು ಪಂದ್ಯಗಳನ್ನು ಆಡಿರುವ ಭಾರತ ಕೆನಡಾ ವಿರುದ್ದ ನಡೆಯಲಿರುವ ನಾಲ್ಕನೇ ಪಂದ್ಯವನ್ನು ಫ್ಲೋರಿಡಾದಲ್ಲಿ ಆಡಲಿದೆ. ಸೂಪರ್ 8 ಪಂದ್ಯಗಳನ್ನು ವೆಸ್ಟ್ ಇಂಡೀಸ್ ನಲ್ಲಿ ಆಡಲಿದೆ.
ಕ್ರಿಕ್‌ಬಜ್ ವರದಿಯ ಪ್ರಕಾರ, ಜೂನ್ 15 ರಂದು ಭಾರತೀಯ ಕ್ರಿಕೆಟ್ ತಂಡದ ಯುಎಸ್ಎ ಲೆಗ್ ಮುಗಿದ ನಂತರ ಇಬ್ಬರು ಆಟಗಾರರು ತಂಡ ಬಿಟ್ಟು ತವರಿಗೆ ಮರಳಲಿದ್ದಾರೆ.
ಮೀಸಲು ಆಟಗಾರರ ಪಟ್ಟಿಯಲ್ಲಿರುವ ಬ್ಯಾಟರ್ ಶುಭಮನ್ ಗಿಲ್ ಮತ್ತು ಬೌಲರ್ ಆವೇಶ್ ಖಾನ್ ಅವರು ಗುಂಪು ಹಂತದ ಪಂದ್ಯಗಳು ಮುಗಿದ ಬಳಿಕ ಭಾರತಕ್ಕೆ ಮರಳಲಿದ್ದಾರೆ ಎಂದು ವರದಿ ಹೇಳಿದೆ.
ಮೀಸಲು ಪಡೆಯಲ್ಲಿರುವ ಉಳಿದ್ದಬ್ಬರು ಆಟಗಾರರಾದ ರಿಂಕು ಸಿಂಗ್ ಮತ್ತು ಖಲೀಲ್ ಅಹಮದ್ ಅವರು ತಂಡದೊಂದಿಗೆ ಇರಲಿದ್ದಾರೆ. 15ರ ಬಳಗದಲ್ಲಿ ಯಾವುದೇ ಆಟಗಾರನಿಗೆ ಗಾಯಗಳಾದರೆ ಮೀಸಲು ಆಟಗಾರರನ್ನು ಬಳಸಲಾಗುತ್ತದೆ.
New York ✅#TeamIndia arrive in Florida 🛬 for their last group-stage match of the #T20WorldCup! 👍 pic.twitter.com/vstsaBbAQx
— BCCI (@BCCI) June 14, 2024
ಭಾರತವು ಶನಿವಾರ ಫ್ಲೋರಿಡಾದಲ್ಲಿ ಕೆನಡಾ ವಿರುದ್ದ ಪಂದ್ಯವಾಡಲಿದೆ. ಸೂಪರ್ 8ನ ಮೊದಲ ಪಂದ್ಯದಲ್ಲಿ ಭಾರತವು ಅಫ್ಘಾನಿಸ್ತಾನ ವಿರುದ್ದ ಆಡಲಿದ್ದು, ಅದು ಜೂನ್ 20ರಂದು ಬಾರ್ಬಡೋಸ್ ನಲ್ಲಿ ನಡೆಯಲಿದೆ. ಎರಡನೇ ಪಂದ್ಯದ ಎದುರಾಳಿ ತಂಡ ಇದುವರೆಗೂ ಖಚಿತವಾಗಿಲ್ಲ. ಇದು ಜೂನ್ 22ರಂದು ಆ್ಯಂಟಿಗುವಾದಲ್ಲಿ, ಮೂರನೇ ಪಂದ್ಯ ಆಸೀಸ್ ವಿರುದ್ದ ಜೂನ್ 24ರಂದು ಸೈಂಟ್ ಲೂಸಿಯಾದಲ್ಲಿ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
Australia vs India: ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.