ಆಂಡರ್‌-19 ಏಶ್ಯ ಕಪ್‌ ಕ್ರಿಕೆಟ್‌ ನೇಪಾಲದ ಬಲೆಗೆ ಬಿದ್ದ ಭಾರತ


Team Udayavani, Nov 13, 2017, 6:45 AM IST

Nepal-vs-ind.jpg

ಕೌಲಾಲಂಪುರ: ಅಂಡರ್‌-19 ಏಶ್ಯ ಕಪ್‌ ಕ್ರಿಕೆಟ್‌ ಕೂಟದ ತನ್ನ ದ್ವಿತೀಯ ಪಂದ್ಯದಲ್ಲಿ ನೆಚ್ಚಿನ ಭಾರತ ತಂಡ ನೇಪಾಲದ ಕೈಯಲ್ಲಿ ಆಘಾತಕಾರಿ ಸೋಲುಂಡಿದೆ. 

ರವಿವಾರದ ಈ ಮುಖಾಮುಖೀಯನ್ನು ನೇಪಾಲ 19 ರನ್ನುಗಳಿಂದ ಗೆದ್ದು ಬೀಗಿತು. ದಿನದ ಇನ್ನೊಂದು ಪಂದ್ಯದಲ್ಲಿ ಪಾಕಿಸ್ಥಾನ 226 ರನ್ನುಗಳ ಬೃಹತ್‌ ಅಂತರದಿಂದ ಯುಎಇಯನ್ನು ಮಣಿಸಿತು.

ಆತಿಥೇಯ ಮಲೇಶ್ಯವನ್ನು 202 ರನ್ನುಗಳ ಭಾರೀ ಅಂತರದಿಂದ ಮಣಿಸಿದ ಭಾರತ, ನೇಪಾಲಕ್ಕೆ ಸಾಟಿಯಾಗದೇ ಹೋದದೊಂದು ದುರಂತ. ಬ್ಯಾಟಿಂಗಿಗೆ ಇಳಿಸಲ್ಪಟ್ಟ ನೇಪಾಲ 8 ವಿಕೆಟಿಗೆ 185 ರನ್‌ ಗಳಿಸಿದರೆ, ಭಾರತ 48.1 ಓವರ್‌ಗಳಲ್ಲಿ 166 ರನ್ನಿಗೆ ಆಟ ಮುಗಿಸಿತು.

ನಾಯಕ ದೀಪೇಂದ್ರ ಸಿಂಗ್‌ ಅವರ ಆಲ್‌ರೌಂಡ್‌ ಪ್ರದರ್ಶನ ನೇಪಾಲದ ಜಯದಲ್ಲಿ ಮಹತ್ವದ ಪಾತ್ರ ವಹಿಸಿತು. ಬ್ಯಾಟಿಂಗ್‌ ವೇಳೆ 88 ರನ್‌ ಬಾರಿಸಿ ತಂಡದ ರಕ್ಷಣೆಗೆ ನಿಂತ ಅವರು, ಬೌಲಿಂಗ್‌ ಆಕ್ರಮಣದ ವೇಳೆ 39 ರನ್ನಿಗೆ 4 ವಿಕೆಟ್‌ ಕಿತ್ತು ಭಾರತಕ್ಕೆ ಕಡಿವಾಣ ತೊಡಿಸಿದರು. ಪವನ ಸರಾಫ್ ಮತ್ತು ಶಾಹಬ್‌ ಆಲಂ ತಲಾ 2 ವಿಕೆಟ್‌ ಉರುಳಿಸಿದರು.

ಭಾರತದ ಆರಂಭ ಉತ್ತಮವಾಗಿಯೇ ಇತ್ತು. ನಾಯಕ ಹಿಮಾಂಶು ರಾಣ (46) ಮತ್ತು ಮನ್‌ಜೋತ್‌ ಕಾಲಾÅ (35) ಮೊದಲ ವಿಕೆಟಿಗೆ 12.2 ಓವರ್‌ಗಳಿಂದ 65 ರನ್‌ ಪೇರಿಸಿ ಭದ್ರ ಬುನಾದಿ ಹಾಕಿದ್ದರು. ಆದರೆ ಇಲ್ಲಿಂದ ಮುಂದೆ ನಿರಂತರವಾಗಿ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತ ಹೋಯಿತು. ಮಧ್ಯಮ ಕ್ರಮಾಂಕದಲ್ಲಿ ಅಭಿಷೇಕ್‌ ಶರ್ಮ (27) ಮತ್ತು ಕೀಪರ್‌ ಅನುಜ್‌ ರಾವತ್‌ (18) ಒಂದಿಷ್ಟು ಹೋರಾಟ ನಡೆಸಿದ್ದನ್ನು ಬಿಟ್ಟರೆ ಕೆಳ ಕ್ರಮಾಂಕದ ಆಟಗಾರರೆಲ್ಲ ಅಗ್ಗಕ್ಕೆ ಔಟಾದರು.

ನೇಪಾಲ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶಕ್ಕೆ 2 ವಿಕೆಟ್‌ಗಳಿಂದ ಸೋತಿತ್ತು. ಭಾರತದ ಮುಂದಿನ ಎದುರಾಳಿ ಬಾಂಗ್ಲಾದೇಶ. ಈ ಪಂದ್ಯ ಮಂಗಳವಾರ ನಡೆಯಲಿದೆ. ಸೆಮಿಫೈನಲ್‌ ಪ್ರವೇಶಿಸಬೇಕಾದರೆ ಭಾರತ ಈ ಪಂದ್ಯವನ್ನು ಗೆಲ್ಲಲೇಬೇಕಿದೆ.

ಸಂಕ್ಷಿಪ್ತ ಸ್ಕೋರ್‌: ನೇಪಾಲ-8 ವಿಕೆಟಿಗೆ 185 (ದೀಪೇಂದ್ರ 88, ಜೀತೇಂದ್ರ 36, ಆದಿತ್ಯ ಠಾಕ್ರೆ 33ಕ್ಕೆ 2, ಅಭಿಷೇಕ್‌ ಶರ್ಮ 38ಕ್ಕೆ 2). ಭಾರತ-48.1 ಓವರ್‌ಗಳಲ್ಲಿ 166 (ರಾಣ 46, ಕಾಲಾÅ 35, ಅಭಿಷೇಕ್‌ 27, ದೀಪೇಂದ್ರ 39ಕ್ಕೆ 4, ಆಲಂ 11ಕ್ಕೆ 2, ಸರಾಫ್ 24ಕ್ಕೆ 2).

ಟಾಪ್ ನ್ಯೂಸ್

Na-Desoza

Passes Away: ಹಿರಿಯ ಸಾಹಿತಿ ನಾ.ಡಿ’ಸೋಜಾ ವಿಧಿವಶ

8

ಉತ್ತರ ಭಾರತದಲ್ಲಿ ಕವಿದ ಮಂಜು: ವಿಮಾನ ವ್ಯತ್ಯಯ

11

PAK- SA: 421 ರನ್ನುಗಳ ಭಾರೀ ಹಿನ್ನಡೆ; ಪಾಕಿಸ್ಥಾನಕ್ಕೆ ಫಾಲೋಆನ್‌

10

ODI: ಶ್ರೀಲಂಕಾ ಬ್ಯಾಟಿಂಗ್‌ ಕುಸಿತ; ನ್ಯೂಜಿಲ್ಯಾಂಡ್‌ಗೆ ಸುಲಭ ಜಯ

Yathanaa

BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್‌

7

‌RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್‌ ಕುಮಾರ್

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

PAK- SA: 421 ರನ್ನುಗಳ ಭಾರೀ ಹಿನ್ನಡೆ; ಪಾಕಿಸ್ಥಾನಕ್ಕೆ ಫಾಲೋಆನ್‌

10

ODI: ಶ್ರೀಲಂಕಾ ಬ್ಯಾಟಿಂಗ್‌ ಕುಸಿತ; ನ್ಯೂಜಿಲ್ಯಾಂಡ್‌ಗೆ ಸುಲಭ ಜಯ

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Na-Desoza

Passes Away: ಹಿರಿಯ ಸಾಹಿತಿ ನಾ.ಡಿ’ಸೋಜಾ ವಿಧಿವಶ

POlice

Manipal: ವೇಶ್ಯಾವಾಟಿಕೆ; ನಾಲ್ವರುಪೊಲೀಸರ ವಶಕ್ಕೆ

8

ಉತ್ತರ ಭಾರತದಲ್ಲಿ ಕವಿದ ಮಂಜು: ವಿಮಾನ ವ್ಯತ್ಯಯ

11

PAK- SA: 421 ರನ್ನುಗಳ ಭಾರೀ ಹಿನ್ನಡೆ; ಪಾಕಿಸ್ಥಾನಕ್ಕೆ ಫಾಲೋಆನ್‌

POLICE-5

Udupi: ಗಾಂಜಾ ಸೇವಿಸಿದ ವ್ಯಕ್ತಿ ಪೊಲೀಸ್‌ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.