ಪಾಕಿಸ್ಥಾನವನ್ನು ಮಣಿಸಿದ ಅಫ್ಘಾನ್
Team Udayavani, Jan 14, 2018, 6:15 AM IST
ವಾಂಗರಿ: ಅಂಡರ್-19 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ ಪ್ರಚಂಡ ಆರಂಭ ಲಭಿಸಿದೆ. ಮೊದಲ ಪಂದ್ಯದಲ್ಲಿ ಅಪಾಯಕಾರಿ ಅಫ್ಘಾನಿಸ್ಥಾನ ತಂಡ 2 ಬಾರಿಯ ಚಾಂಪಿಯನ್ ಪಾಕಿಸ್ಥಾನವನ್ನು 5 ವಿಕೆಟ್‌ಗಳಿಂದ ಮಣಿಸಿದೆ.
ಮೊದಲು ಬ್ಯಾಟ್ ಮಾಡಿದ ಪಾಕಿಸ್ಥಾನ 47.4 ಓವರ್‌ಗಳಲ್ಲಿ 188ಕ್ಕೆ ಆಲೌಟಾದರೆ, ಅಫ್ಘಾನ್ 47.3 ಓವರ್‌ಗಳಲ್ಲಿ 5 ವಿಕೆಟಿಗೆ 194 ರನ್ ಬಾರಿಸಿ ವಿಜಯಿಯಾಯಿತು. ಅಜೇಯ 76 ರನ್ ಹೊಡೆದ ದಾರ್ವಿಶ್ ರಸೂಲಿ ಪಂದ್ಯಶ್ರೇಷ್ಠರೆನಿಸಿದರು.
ಜಿಂಬಾಬ್ವೆಗೆ 10 ವಿಕೆಟ್ ಜಯ
ಲಿಂಕನ್: ಕೂಟದ ದ್ವಿತೀಯ ಪಂದ್ಯದಲ್ಲಿ ಜಿಂಬಾಬ್ವೆ 10 ವಿಕೆಟ್‌ಗಳ ಅಂತರದಿಂದ ಪಪುವಾ ನ್ಯೂ ಗಿನಿ ತಂಡವನ್ನು ಮಣಿಸಿದೆ. ನ್ಯೂ ಗಿನಿ 20 ಓವರ್‌ಗಳಲ್ಲಿ 95 ರನ್ನಿಗೆ ಕುಸಿದರೆ, ಜಿಂಬಾಬ್ವೆ 14 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 98 ರನ್ ಬಾರಿಸಿತು. ಜಿಂಬಾಬ್ವೆಯ ವೆಸ್ಲಿ ಮಧೆವೇರ್ 19 ರನ್ನಿಗೆ 3 ವಿಕೆಟ್ ಕಿತ್ತು, ಅಜೇಯ 53 ರನ್ ಬಾರಿಸಿ ಅಮೋಘ ಆಲ್‌ರೌಂಡ್ ಪ್ರದರ್ಶನ ನೀಡಿದರು.
ಬಾಂಗ್ಲಾಕ್ಕೆ ಭರ್ಜರಿ ಗೆಲುವು
ಲಿಂಕನ್: ಮಳೆಯಿಂದಾಗಿ 20 ಓವರ್‌ಗಳಿಗೆ ಇಳಿಸಲ್ಪಟ್ಟ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ 87 ರನ್ನುಗಳಿಂದ ನಮೀಬಿಯಾವನ್ನು ಮಣಿಸಿದೆ. ಬಾಂಗ್ಲಾ 4 ವಿಕೆಟಿಗೆ 190 ರನ್ ಬಾರಿಸಿದರೆ, ನಮೀಬಿಯಾ 6 ವಿಕೆಟ್ ನಷ್ಟಕ್ಕೆ 103 ರನ್ ಮಾಡಿ ಶರಣಾಯಿತು.
ಚಾಂಪಿಯನ್ನರಿಗೆ ಸೋಲು
ಮೌಂಟ್ ಮಾಂಗನೂಯಿ: ಅಹರ್ನಿಶಿಯಾಗಿ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸನ್ನು ಆತಿಥೇಯ ನ್ಯೂಜಿಲ್ಯಾಂಡ್ 8 ವಿಕೆಟ್‌ಗಳಿಂದ ಕೆಡವಿದೆ. ಮೊದಲು ಬ್ಯಾಟಿಂಗ್ ನಡೆಸಿದ ವಿಂಡೀಸ್ 8 ವಿಕೆಟ್ ನಷ್ಟಕ್ಕೆ 233 ರನ್ ಹೊಡೆದರೆ, ನ್ಯೂಜಿಲ್ಯಾಂಡ್ 39.3 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 234 ರನ್ ಬಾರಿಸಿತು. ನ್ಯೂಜಿಲ್ಯಾಂಡಿನ ಫಿನ್ ಅಲೆನ್ ಈ ಕೂಟದ ಮೊದಲ ಶತಕಕ್ಕೆ ಸಾಕ್ಷಿಯಾದರು (ಅಜೇಯ 115).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Parliament: ಸಂಸದರ ತಳ್ಳಾಟ: ಇಂದು ಸಂಸತ್ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?
Former Supreme Court Judge ವಿ.ಸುಬ್ರಹ್ಮಣಿಯನ್ ಎನ್‌ಎಚ್‌ಆರ್‌ಸಿ ಮುಖ್ಯಸ್ಥ
Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್ ವಿವಾದಾಸ್ಪದ ಹೇಳಿಕೆ
Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್ ರೈಲು!
Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.