ಅಂಡರ್ 19 ವಿಶ್ವಕಪ್:ಬಾಂಗ್ಲಾ ಮಣಿಸಿ ಪಾಕ್ ಸವಾಲಿಗೆ ಸಜ್ಜಾದ ಭಾರತ
Team Udayavani, Jan 27, 2018, 12:19 PM IST
ಕ್ವೀನ್ಸ್ಟೌನ್ (ನ್ಯೂಜಿಲ್ಯಾಂಡ್): ಅಂಡರ್- 19 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಮುಖಾಮುಖಿಯಲ್ಲಿ ಬಾಂಗ್ಲಾದೇಶವನ್ನು 131 ರನ್ನುಗಳಿಂದ ಬಗ್ಗುಬಡಿದ ಭಾರತ ಸೆಮಿಫೈನಲ್ಗೆ ಲಗ್ಗೆ ಇರಿಸಿದೆ. ಇಲ್ಲಿ ಪೃಥ್ವಿ ಶಾ ಬಳಗ ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನವನ್ನು ಎದುರಿಸಲಿದ್ದು, ಈ ಪಂದ್ಯ ಜ. 30ರಂದು ಕ್ರೈಸ್ಟ್ಚರ್ಚ್ನಲ್ಲಿ ನಡೆಯಲಿದೆ.
ಶುಕ್ರವಾರ ಕ್ವೀನ್ಸ್ಟೌನ್ನಲ್ಲಿ ಸಾಗಿದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ 49.2 ಓವರ್ಗಳಲ್ಲಿ 265 ರನ್ ಬಾರಿಸಿ ಸವಾಲೊಡ್ಡಿದರೆ, ಬಾಂಗ್ಲಾದೇಶ 42.1 ಓವರ್ಗಳಲ್ಲಿ 134ಕ್ಕೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು.
ಭಾರತದ ಸವಾಲಿನ ಮೊತ್ತ
ಭಾರತದ ಆರಂಭ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಆದರೆ ಮಧ್ಯಮ ಸರದಿಯ ಬ್ಯಾಟ್ಸ್ಮನ್ಗಳು ತಂಡವನ್ನು ಆಧರಿಸಿ ನಿಂತರು. ಬಳಿಕ ಕೆಳ ಕ್ರಮಾಂಕದಲ್ಲಿ ಭಾರತದ ಬ್ಯಾಟಿಂಗ್ ತೀವ್ರ ಕುಸಿತ ಕಂಡಿತು. ಆದರೆ ಅಷ್ಟರಲ್ಲಿ ಸ್ಕೋರ್ಬೋರ್ಡ್ನಲ್ಲಿ ಸವಾಲಿನ ಮೊತ್ತ ಜಮೆಯಾಗಿತ್ತು.
ಪಂಜಾಬಿನ ಭರವಸೆಯ ಬ್ಯಾಟ್ಸ್ಮನ್ ಶುಭಂ ಗಿಲ್ ಮತ್ತೂಂದು ಶ್ರೇಷ್ಠ ಪ್ರದರ್ಶನ ನೀಡಿ ಸರ್ವಾಧಿಕ 86 ರನ್ ಬಾರಿಸಿದರು. ಪಂಜಾಬಿನ ಮತ್ತೂಬ್ಬ ಬ್ಯಾಟ್ಸ್ಮನ್ ಅಭಿಷೇಕ್ ಶರ್ಮ 50 ರನ್ ಕೊಡುಗೆ ಸಲ್ಲಿಸಿದರು. ನಾಯಕ, ಆರಂಭಕಾರ ಪೃಥ್ವಿ ಶಾ 40, ಕೀಪರ್ ಹಾರ್ವಿಕ್ ದೇಸಾಯಿ 34 ರನ್ ಹೊಡೆದರು. 44ನೇ ಓವರ್ ವೇಳೆ 4 ವಿಕೆಟಿಗೆ 215 ರನ್ ಬಾರಿಸಿ ಸುಸ್ಥಿತಿಯಲ್ಲಿದ್ದ ಭಾರತ, 50 ರನ್ ಅಂತರದಲ್ಲಿ ಕೊನೆಯ 6 ವಿಕೆಟ್ಗಳನ್ನು ಕಳೆದುಕೊಂಡಿತು.
ಭಾರತದ ಬೌಲಿಂಗ್ ಸರದಿಯಲ್ಲಿ ಮಿಂಚಿದ ಕಮಲೇಶ್ ನಾಗರ್ಕೋಟಿ 3 ವಿಕೆಟ್, ಶಿವಂ ಮಾವಿ ಮತ್ತು ಅಭಿಷೇಕ್ ಶರ್ಮ ತಲಾ 2 ವಿಕೆಟ್ ಹಾರಿಸಿದರು. ಶರ್ಮ ಆಲ್ರೌಂಡ್ ಪ್ರದರ್ಶನದೊಂದಿಗೆ ಮಿಂಚು ಹರಿಸಿದರೆ, ಗಿಲ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ರಕ್ಷಣೆಗೆ ನಿಂತ ಶಾ-ಗಿಲ್
ಆರಂಭಕಾರ ಮನೋಜ್ ಕಾಲಾ (9) ಅವರನ್ನು 16 ರನ್ ಆಗಿದ್ದಾಗ ಕಳೆದುಕೊಂಡ ಭಾರತಕ್ಕೆ ಶಾ ಮತ್ತು ಗಿಲ್ ರಕ್ಷಣೆ ಒದಗಿಸಿದರು. ಇವರಿಂದ 2ನೇ ವಿಕೆಟಿಗೆ 86 ಒಟ್ಟುಗೂಡಿತು. ಸ್ಕೋರ್ 102ಕ್ಕೆ ಏರಿದಾಗ 54 ಎಸೆತಗಳಿಂದ 40 ರನ್ ಮಾಡಿದ ಶಾ ವಿಕೆಟ್ ಉರುಳಿತು (5 ಬೌಂಡರಿ). ಗಿಲ್-ದೇಸಾಯಿ ಸೇರಿಕೊಂಡು ಮತ್ತೂಂದು ಉಪಯುಕ್ತ ಜತೆಯಾಟ ನಡೆಸಿ 74 ರನ್ ಪೇರಿಸಿದರು. ಇವರಿಬ್ಬರ ವಿಕೆಟ್ 5 ರನ್ ಅಂತರದಲ್ಲಿ ಉರುಳಿದೊಡನೆ ಅಭಿಷೇಕ್ ಶರ್ಮ ಜವಾಬ್ದಾರಿಯುತ ಆಟದ ಮೂಲಕ ಇನ್ನಿಂಗ್ಸ್ ಬೆಳೆಸತೊಡಗಿದರು.
ಗಿಲ್ 84 ರನ್ 94 ಎಸೆತಗಳಲ್ಲಿ ಬಂತು. ಬೀಸಿದ್ದು 9 ಬೌಂಡರಿ. 9ನೇ ವಿಕೆಟ್ ರೂಪದಲ್ಲಿ ಪೆವಿಲಿಯನ್ ಸೇರಿ ಕೊಂಡ ಶರ್ಮ 49 ಎಸೆತಗಳಿಂದ ಭರ್ತಿ 50 ರನ್ ಬಾರಿಸಿ ದರು (6 ಬೌಂಡರಿ). ಭಾರತ ಸರದಿಯ ಏಕೈಕ ಸಿಕ್ಸರ್ ರಿಯಾನ್ ಪರಾಗ್ ಅವರಿಂದ ಸಿಡಿಯಲ್ಪಟ್ಟಿತು. ಬಾಂಗ್ಲಾ ಪರ ಖಾಜಿ ಒನಿಕ್ 3, ನಯೀಮ್ ಹಸನ್ ಮತ್ತು ಸೈಫ್ ಹಸನ್ ತಲಾ 2 ವಿಕೆಟ್ ಕಿತ್ತರು. ಬ್ಯಾಟಿಂಗ್ ಸರದಿಯಲ್ಲಿ 43 ರನ್ ಮಾಡಿದ ಆರಂಭಕಾರ ಪಿನಾಕ್ ಘೋಷ್ ಅವರದೇ ಹೆಚ್ಚಿನ ಗಳಿಕೆ. ಉಳಿದವರ್ಯಾರೂ ಇಪ್ಪತ್ತರ ಗಡಿ ಮುಟ್ಟಲಿಲ್ಲ.
ಸಂಕ್ಷಿಪ್ತ ಸ್ಕೋರ್: ಭಾರತ-49.2 ಓವರ್ಗಳಲ್ಲಿ 265 (ಗಿಲ್ 86, ಅಭಿಷೇಕ್ 50, ಶಾ 40, ದೇಸಾಯಿ 34, ಖಾಜಿ ಒನಿಕ್ 48ಕ್ಕೆ 3, ನಯೀಮ್ ಹಸನ್ 36ಕ್ಕೆ 2, ಸೈಫ್ ಹಸನ್ 41ಕ್ಕೆ 2). ಬಾಂಗ್ಲಾದೇಶ-42.1 ಓವರ್ಗಳಲ್ಲಿ 134 (ಪಿನಾಕ್ ಘೋಷ್ 43, ಆಫಿಫ್ ಹೊಸೈನ್ 18, ರೊಬಿಯುಲ್ ಹಕ್ 14, ನಾಗರ್ಕೋಟಿ 18ಕ್ಕೆ 3, ಅಭಿಷೇಕ್ ಶರ್ಮ 11ಕ್ಕೆ 2, ಶಿವಂ ಮಾವಿ 27ಕ್ಕೆ 2). ಪಂದ್ಯಶ್ರೇಷ್ಠ: ಶುಭಂ ಗಿಲ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Champions Trophy: ಮೋದಿ ಪಾಕ್ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ
IPL 2025: ಭಾರತ ಕ್ರಿಕೆಟ್ ನಾಯಕನಾಗುವ ಉದ್ದೇಶ ಪಂತ್ ಗಿದೆ: ಜಿಂದಾಲ್
BGT 2024: ಟೀಂ ಇಂಡಿಯಾಗೆ ಶುಭ ಸುದ್ದಿ; ತಂಡಕ್ಕೆ ಮರಳಿದ ಪ್ರಮುಖ ಆಟಗಾರ
Pune: ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಬ್ಯಾಟರ್!; ವಿಡಿಯೋ ವೈರಲ್
Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.