ದ್ರಾವಿಡ್‌ ಹುಡುಗರ ಸರ್ಜಿಕಲ್‌ ಸ್ಟ್ರೈಕ್‌!


Team Udayavani, Jan 31, 2018, 10:17 AM IST

31-15.jpg

ಕ್ರೈಸ್ಟ್‌ಚರ್ಚ್‌: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 203 ರನ್ನುಗಳ ಭಾರೀ ಅಂತರದಿಂದ ಸೋಲಿಸಿದ ಭಾರತ ತಂಡವು ಐಸಿಸಿ ಅಂಡರ್‌ 19 ವಿಶ್ವಕಪ್‌ ಕ್ರಿಕೆಟ್‌ಟದ ಫೈನಲ್‌ ಹಂತಕ್ಕೇರಿದೆ. ಭಾರತ ಕ್ರಿಕೆಟ್‌ ದಿಗ್ಗಜ ದ್ರಾವಿಡ್‌ ಕೋಚಿಂಗ್‌ ಹೊಂದಿರುವ ಭಾರತ ಫೆ.3ರಂದು ನಡೆಯಲಿರುವ ಫೈನಲ್‌ ಹೋರಾಟದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಶುಭ್‌ ಮಾನ್‌ ಗಿಲ್‌ ಅವರ ಆಕರ್ಷಕ ಶತಕ ಮತ್ತು ಇಶಾನ್‌ ಪೊರೆಲ್‌ ಅವರ ಮಾರಕ ದಾಳಿಯಿಂದಾಗಿ ಭಾರತ 203 ರನ್‌ ಅಂತರದ ಭರ್ಜರಿ ಗೆಲುವು ಸಾಧಿಸುವಂತಾಯಿತು. 

ಶುಭ್‌ಮಾನ್‌ ಶತಕ: ಆರಂಭಿಕರಾದ ನಾಯಕ ಪೃಥ್ವಿ ಶಾ ಮತ್ತು ಮನ್‌ಜೋತ್‌ ಕಾಲ್ರ ಮೊದಲ ವಿಕೆಟಿಗೆ 89 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ಭಾರತಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ಆದರೆ ಅವರಿಬ್ಬರು 5 ರನ್ನಿನ ಅಂತರದಲ್ಲಿ ಪೆವಿಲಿಯನ್‌ ಸೇರಿಕೊಂಡಾಗ ಭಾರತ ಒತ್ತಡದಲ್ಲಿ ಸಿಲುಕಿತು. ಶಾ 42 ಎಸೆತಗಳಿಂದ 41 ಮತ್ತು ಮನ್‌ ಜೋತ್‌ 59 ಎಸೆತಗಳಿಂದ 47 ರನ್‌ ಹೊಡೆದರು.

ಆರಂಭಿಕರ ಬಳಿಕ ಶುಭ್‌ಮಾನ್‌ ಗಿಲ್‌ ಏಕಾಂಗಿಯಾಗಿ ತಂಡವನ್ನು ಆಧರಿಸುವ ಪ್ರಯತ್ನ ನಡೆಸಿದರು. ಇನ್ನಿಂಗ್ಸ್‌ನ ಕೊನೆಯವರೆಗೂ ಆಡಿದ ಗಿಲ್‌ ಅಂತಿಮ ಎಸೆತದಲ್ಲಿ ಶತಕ ಪೂರ್ತಿಗೊಳಿಸಿ ಅಜೇಯರಾಗಿ ಉಳಿದರು. ಅನುಕುಲ್‌ ರಾಯ್‌ ಜತೆ 6ನೇ ವಿಕೆಟಿಗೆ 67 ರನ್ನುಗಳ ಜತೆಯಾಟ ನಡೆಸಿದ ಗಿಲ್‌ ಒಟ್ಟಾರೆ 94 ಎಸೆತ ಎದುರಿಸಿದ್ದು 7 ಬೌಂಡರಿ ಬಾರಿಸಿದ್ದರು. 

67ಕ್ಕೆ ಪಾಕ್‌ ಆಲೌಟ್‌: ಗೆಲ್ಲಲು 273 ರನ್‌ ಗಳಿಸುವ ಗುರಿ ಪಡೆದ ಪಾಕಿಸ್ತಾನ ಆರಂಭದಲ್ಲಿಯೇ ಕುಸಿಯಿತು. ಭಾರತೀಯ ದಾಳಿಯನ್ನು ಎದುರಿಸಲು ಪಾಕ್‌ ಆಟಗಾರರಿಂದ ಸಾಧ್ಯವಾಗಲೇ ಇಲ್ಲ. 18 ರನ್‌ ಗಳಿಸಿದ ನಜೀರ್‌ ತಂಡದ ಗರಿಷ್ಠ ಸ್ಕೋರರ್‌. ಅವರ ಸಹಿತ ಸಾದ್‌ ಖಾನ್‌ ಮತ್ತು ಮುಹಮ್ಮದ್‌ ಮೂಸಾ ಮಾತ್ರ ಎರಡಂಕೆಯ ಮೊತ್ತ ಗಳಿಸಿದರು. ಇಶಾನ್‌ ಪೊರೆಲ್‌ ತನ್ನ 6 ಓವರ್‌ ಗಳ ದಾಳಿಯಲ್ಲಿ ಕೇವಲ 17 ರನ್‌ ನೀಡಿ 4 ವಿಕೆಟ್‌ ಕಿತ್ತರೆ ಪರಾಗ್‌ ಮತ್ತು ಶಿವ ಸಿಂಗ್‌ ತಲಾ ಎರಡು ವಿಕೆಟ್‌ ಪಡೆದರು.

ಭಾರತಕ್ಕೆ ಬಲು ದೊಡ್ಡ ಜಯ
ಅಂಡರ್‌ 19 ವಯೋಮಿತಿಯಲ್ಲಿ ಇದು ಪಾಕಿಸ್ತಾನ ವಿರುದ್ಧ ಭಾರತದ ಬಲು ದೊಡ್ಡ ಗೆಲುವು ಆಗಿದೆ. ಆಲ್‌ರೌಂಡ್‌ ಪ್ರದರ್ಶನ ನೀಡುವ ಮೂಲಕ ಭಾರತ ತನ್ನ ಸಾಮರ್ಥ್ಯ ಏನೆಂಬುದನ್ನು ತೋರಿಸಿಕೊಟ್ಟಿರುವುದು ವಿಶೇಷ. ಭಾರತ ನಂತರ ಕಿರಿಯರ ವಿಶ್ವಕಪ್‌ ಅನ್ನು ಅತೀ ಹೆಚ್ಚು ಬಾರಿ ಗೆದ್ದಿರುವುದು ಪಾಕ್‌ (2 ಸಲ).  

2012 ಸಾಧನೆ ಪುನರಾವರ್ತಿಸುತ್ತಾ?
ಉನ್ಮುಕ್‌¤ ಚಾಂದ್‌ ನೇತೃತ್ವದ ಭಾರತ 2012ರಲ್ಲಿ 19 ವರ್ಷ ವಯೋಮಿತಿಯೊಳಗಿನ ವಿಶ್ವಕಪ್‌ ಫೈನಲ್‌ನಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿತ್ತು. ತವರಿನಲ್ಲಿ ಆಸೀಸ್‌ ತಂಡವನ್ನು ಸೋಲಿಸಿದ್ದು ಭಾರತದ್ದು ದೊಡ್ಡ ಸಾಧನೆ. ಇದೀಗ ಪ್ರಶಸ್ತಿ ಹಣಾಹಣಿಯಲ್ಲಿ ಭಾರತ – ಆಸೀಸ್‌ ಮತ್ತೂಂದು ಸಲ ಮುಖಾಮುಖಿಯಾಗುತ್ತಿವೆ. ಅಂದಿನ ಸೋಲಿಗೆ ತಿರುಗೇಟು ನೀಡಲು ಆಸೀಸ್‌ ಸಿದ್ಧವಾಗಿದೆ. 

ದ್ರಾವಿಡ್‌ ಮಾರ್ಗದರ್ಶನದ ನೆರವು
ಭಾರತ ಕಿರಿಯರ ಯಶಸ್ಸಿನ ಹಿಂದೆ ಕೋಚ್‌ ರಾಹುಲ್‌ ದ್ರಾವಿಡ್‌ ಇದ್ದಾರೆ. ತಾನೊಬ್ಬ ಸ್ಟಾರ್‌ ಕ್ರಿಕೆಟಿಗ ಅನ್ನುವುದನ್ನು ಮರೆತು ಕಿರಿಯ ಕ್ರಿಕೆಟಿಗರೊಂದಿಗೆ ಅವರು ಮುಕ್ತವಾಗಿ ಬೆರೆಯುತ್ತಿರುವುದು, ಅಗತ್ಯ ಸಮಯದಲ್ಲಿ ಆಟಗಾರರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿರುವುದು ಭಾರತ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದೆ. ಭಾರತ ಹಿರಿಯರ ತಂಡದಲ್ಲಿ ಕೋಚ್‌ ಆಗುವ ಅವಕಾಶವಿದ್ದರೂ ಅದನ್ನು ತೊರೆದು ಕಿರಿಯ ಕ್ರಿಕೆಟಿಗರನ್ನು ಸಿದ್ಧಗೊಳಿಸುವ ಕಾಯಕದಲ್ಲಿ ದ್ರಾವಿಡ್‌ ನಿರತರಾಗಿರುವುದು ಪ್ರತಿಯೊಬ್ಬ ಕ್ರಿಕೆಟಿಗನಿಗೂ
ಮಾದರಿ.

ಪೃಥ್ವಿ ಪಡೆಗೆ ನಗದು ಘೋಷಣೆ
ಅಂಡರ್‌ 19 ವಿಶ್ವಕಪ್‌ ಕ್ರಿಕೆಟ್‌ ಕೂಟದ ಫೈನಲ್‌ ಹಂತಕ್ಕೇರಿದ ಭಾರತೀಯ ಆಟಗಾರರಿಗೆ ನಗದು ಬಹುಮಾನ ನೀಡಿ ಗೌರವಿಸಲಾಗುವುದು ಎಂದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಪ್ರಭಾರ ಅಧ್ಯಕ್ಷ ಸಿಕೆ ಖನ್ನಾ ಹೇಳಿದ್ದಾರೆ. ಕ್ರೈಸ್ಟ್‌ಚರ್ಚ್‌ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿದ ಭಾರತೀಯ ತಂಡಕ್ಕೆ ಅವರು ಅಭಿನಂದನೆ ಸಲ್ಲಿಸಿದರು. ಎಷ್ಟು ಹಣ ಎನ್ನುವುದು ಇನ್ನಷ್ಟೇ ಘೋಷಣೆಯಾಗಬೇಕಿದೆ. ಪ್ರಚಂಡ ನಿರ್ವಹಣೆ ನೀಡಿದ ಪೂರ್ಣ ತಂಡ ಮತ್ತು ಕೋಚ್‌ ರಾಹುಲ್‌ ದ್ರಾವಿಡ್‌ ಅವರಿಗೆ ಅಭಿನಂದನೆ ಸಲ್ಲಿಸುವೆ. ಮುಂದಿನ ಪೀಳಿಗೆಗೆ ಕ್ರಿಕೆಟಿಗರನ್ನು ರೂಪಿಸುವ ನಿಟ್ಟಿಯಲ್ಲಿ ರಾಹುಲ್‌ ಅವರ ಕೊಡುಗೆ ಅದ್ಭುತವಾದದ್ದು. ಅವರಿಂದಾಗಿಯೇ ನಮ್ಮಲ್ಲಿ ಈಗ ಅಂಡರ್‌ 19 ಕ್ರಿಕೆಟಿಗರ ದೊಡ್ಡ ಪಡೆಯೇ ಇದೆ ಎಂದ ಖನ್ನಾ ತಿಳಿಸಿದರು. ಉತ್ತಮ ಗುಣಮಟ್ಟದ ಆಟದ ಜತೆ ಪಂದ್ಯದ ಎಲ್ಲ ವಿಭಾಗಗಳಲ್ಲಿ ಆಟಗಾರರು ಒಳ್ಳೆಯ ಪ್ರದರ್ಶನ ನೀಡಿದರು ಎಂದರು.

ಮೂರು ಮಾದರಿಯ ಕ್ರಿಕೆಟ್‌ನಲ್ಲೂ ಇದೇ ರೀತಿಯ ಬ್ಯಾಟಿಂಗ್‌ ಮಾಡಬೇಕು ಎಂದು ನಿರ್ಧರಿಸಿದ್ದೇನೆ. ಪಾಕ್‌ ವಿರುದ್ಧ ಅಗತ್ಯ ಪಂದ್ಯದಲ್ಲಿ ಮಿಂಚಿರುವುದಕ್ಕೆ ಖುಷಿಯಿದೆ. ಫೈನಲ್‌ನಲ್ಲೂ ಇದೇ ಪ್ರದರ್ಶನ ನೀಡುವ ವಿಶ್ವಾಸವಿದೆ.
 ● ಶುಭ್‌ಮಾನ್‌ ಗಿಲ್‌, ಪಂದ್ಯಶ್ರೇಷ್ಠ 

3ನೇ ವರ್ಷದಿಂದಲೇ ಕ್ರಿಕೆಟ್‌ ಬಗ್ಗೆ ಮಗ ಹೆಚ್ಚು ಒಲವು ತೋರಿಸುತ್ತಿದ್ದ. ಆತ ಬೇರೆ ಯಾವುದೇ ಆಟಿಕೆಯನ್ನು ಇಷ್ಟಪಟ್ಟಿದ್ದಿಲ್ಲ. ನಿದ್ರೆಯಲ್ಲೂ ಕ್ರಿಕೆಟ್‌ ಬಗ್ಗೆ ಗುನುಗುತ್ತಿದ್ದ. ನಾವು ಕಳೆದ 15 ವರ್ಷಗಳಿಂದ ಆತನ ಕನಸನ್ನು ಬೆಳೆಸಿದ್ದೇವೆ.
 ● ಲಕ್ವಿಂದರ್‌ ಸಿಂಗ್‌, ಶುಭ್‌ಮಾನ್‌ ತಂದೆ 

ಪಾಕ್‌ ವಿರುದ್ಧ ಟ್ವೀಟರ್‌ನಲ್ಲಿಹರಿದಾಡಿದ ಆಯ್ದ ಜೋಕ್ಸ್‌
“ಸೆಮೀಸ್‌ನಲ್ಲಿ ಪಾಕ್‌ನ ವೈಯಕ್ತಿಕ ಗರಿಷ್ಠ ರನ್‌ 18. ಪಾಕ್‌ ಬ್ಯಾಟ್ಸ್‌ಮನ್‌ಗಳೆಲ್ಲ 18ರನ್‌ನೊಳಗೆ ಔಟ್‌ ಆಗಿ ಅಂಡರ್‌ 19 ಕೂಟ ಕ್ಕೆ ನಿಜವಾದ ಅರ್ಥ ನೀಡಿದ್ದಾರೆ’
 ● ಚೊವಿಯಾಲ್‌

ಪಾಕಿಸ್ತಾನ ಗಳಿಸಿದ ಒಟ್ಟಾರೆ 69 ರನ್‌ಗೆ 1 ಬಾಯ್ಲರ್‌ ಕೋಳಿ ಕೂಡ ಸಿಗುವುದಿಲ್ಲ’ 
 ● ಸನ್ನಿ ಗುಪಾ

ಪಾಕ್‌ ಕ್ರಿಕೆಟಿಗರು ನೆಟ್‌ಗಿಂತ ಹೆಚ್ಚು ಬೆಡ್‌ನ‌ಲ್ಲಿ ಪ್ರ್ಯಾಕ್ಟಿಸ್‌ ಮಾಡಿದಂತಿದೆ’
 ● ತ್ರಿನಾಥ್‌

ನಮ್ಮ ಬೌಲರ್‌ಗಳ ಪರಿಣಾಮಕಾರಿ ಬೌಲಿಂಗ್‌, ಬ್ಯಾಟ್ಸ್‌ಮನ್‌ಗಳ ಸಮರ್ಥ ಆಟಕ್ಕೆ ಸಿಕ್ಕ ಗೆಲುವು ಇದು. ಫೈನಲ್‌ನಲ್ಲೂ ಅದ್ಭುತ ಆಟ ಸಂಘಟಿಸಲಿದ್ದೇವೆ.
 ● ಪೃಥ್ವಿ ಶಾ, ಭಾರತ ಕಿರಿಯರ ಕ್ರಿಕೆಟ್‌ ತಂಡದ ನಾಯಕ 

ಸ್ಕೋರ್‌ಪಟ್ಟಿ
ಅಂಡರ್‌ 19 ಭಾರತ
ಪೃಥ್ವಿ ಶಾ    ರನೌಟ್‌    41
ಮನ್‌ಜೋತ್‌ ಕಾಲ್ರ    ಸಿ ನಜೀರ್‌ ಬಿ ಮೂಸಾ    47
ಶುಭ್‌ಮಾನ್‌ ಗಿಲ್‌    ಔಟಾಗದೆ    102
ಹಾರ್ವಿಕ್‌ ದೇಸಾಯಿ    ಸಿ ಸಾದ್‌ ಬಿ ಇಕ್ಬಾಲ್‌    20
ರಿಯಾನ್‌  ಪರಾಗ್‌    ಸಿ ನಜೀರ್‌ ಬಿ ಇಕ್ಬಾಲ್‌    2
ಅಭಿಷೇಕ್‌ ಶರ್ಮ    ಸಿ ನಜೀರ್‌ ಬಿ ಇಕ್ಬಾಲ್‌    5
ಅನುಕುಲ್‌ ರಾಯ್‌    ಸಿ ನಜೀರ್‌ ಬಿ ಮೂಸಾ    33
ಕಮಲೇಶ್‌ ನಗರ್‌ಕೋಟಿ    ಬಿ ಶಹೀನ್‌ ಅಫ್ರಿದಿ    1
ಶಿವಂ ಮವಿ    ಸಿ ಮತ್ತು ಬಿ ಮೂಸಾ    10
ಶಿವ ಸಿಂಗ್‌    ಎಲ್‌ಬಿಡಬ್ಲ್ಯು ಬಿ ಮೂಸಾ    1
ಇಶಾನ್‌ ಪೊರೆಲ್‌     ಔಟಾಗದೆ    1

ಇತರ:        9
ಒಟ್ಟು (50 ಓವರ್‌ಗಳಲ್ಲಿ 9 ವಿಕೆಟಿಗೆ)    272
ವಿಕೆಟ್‌ ಪತನ: 1-89, 2-94, 3-148, 4-156, 5-166, 6-233, 7-242, 8-265, 9-267

ಬೌಲಿಂಗ್‌:
ಅರ್ಶದ್‌ ಇಕ್ಬಾಲ್‌        10-0-51-3
ಮುಹಮ್ಮದ್‌ ಮೂಸಾ        10-0-67-4
ಶಹೀನ್‌ ಶಾ ಅಫ್ರಿದಿ        10-0-62-1
ಹಸನ್‌ ಖಾನ್‌        10-0-46-0
ಮೊಹಮ್ಮದ್‌ ತಾಹಾ        7-0-35-0
ಅಲಿ ಜರ್ಯಾಬ್‌ ಆಸಿಫ್        3-0-11-0

ಅಂಡರ್‌ 19 ಪಾಕಿಸ್ಥಾನ
ಇಮ್ರಾನ್‌ ಶಾ    ಸಿ ಶಾ ಬಿ ಪೊರೆಲ್‌    2
ಮುಹಮ್ಮದ್‌ ಝೈದ್‌ ಆಲಂ    ಸಿ ಶಿವಂ ಬಿ ಪೊರೆಲ್‌    7
ರೊಹೈಲ್‌ ನಜೀರ್‌    ಸಿ ಶುಭ್‌ಮಾನ್‌ ಬಿ ಪರಾಗ್‌    18
ಅಲಿ ಜರ್ಯಾಬ್‌ ಆಸಿಫ್    ಸಿ ಶಾ ಬಿ ಪೊರೆಲ್‌    1
ಅಮ್ಮದ್‌ ಆಲಂ    ಸಿ ಶಿವಂ ಬಿ ಪೊರೆಲ್‌    4
ಮೊಹಮ್ಮದ್‌ ತಾಹಾ    ಸಿ ನಗರ್‌ಕೋಟಿ ಬಿ ಶಿವ    4
ಸಾದ್‌ ಖಾನ್‌    ಸ್ಟಂಪ್ಡ್ ದೇಸಾಯಿ ಬಿ ರಾಯ್‌    15
ಹಸನ್‌ ಖಾನ್‌    ಸಿ ಶುಭ್‌ಮಾನ್‌ ಬಿ ಪರಾಗ್‌    1
ಶಹೀನ್‌ ಶಾ ಅಫ್ರಿದಿ    ಸಿ ಮತ್ತು ಬಿ ಶಿವ     0
ಮುಹಮ್ಮದ್‌ ಮೂಸಾ    ಔಟಾಗದೆ    11
ಅರ್ಶದ್‌ ಇಕ್ಬಾಲ್‌    ಸಿ ಪೊರೆಲ್‌ ಬಿ ಶರ್ಮ    1
ಇತರ:        5

ಒಟ್ಟು  (29.3 ಓವರ್‌ಗಳಲ್ಲಿ ಆಲೌಟ್‌)    69
ವಿಕೆಟ್‌ ಪತನ: 1-10, 2-13, 3-20, 4-28, 5-37, 6-41, 7-45, 8-48, 9-68

ಬೌಲಿಂಗ್‌:
ಶಿವಂ ಮವಿ        4-3-6-1
ಇಶಾನ್‌ ಪೊರೆಲ್‌        6-2-17-4
ಕಮಲೇಶ್‌ ನಗರ್‌ಕೋಟಿ        5-1-7-0
ಶಿವ ಸಿಂಗ್‌        8-0-20-2
ರಿಯಾನ್‌ ಪರಾಗ್‌        4-1-6-2
ಅನುಕುಲ್‌ ರಾಯ್‌        2-0-11-1
ಅಭಿಷೇಕ್‌ ಶರ್ಮ        0.3-0-0-1

ಪಂದ್ಯಶ್ರೇಷ್ಠ: ಶುಭ್‌ಮಾನ್‌ ಗಿಲ್‌

ಟಾಪ್ ನ್ಯೂಸ್

Koppal-Bjp

Overview: ಕೊಪ್ಪಳ ಜಿಲ್ಲಾಸ್ಪತ್ರೆಗೆ ಬಿಜೆಪಿ ಸತ್ಯ ಶೋಧನಾ ತಂಡ ಭೇಟಿ

1-dee

ಪ್ರಸಾರಕ ಸಂಸ್ಥೆಗಳ ಶುಲ್ಕ ಹೆಚ್ಚಳ: ಚಾನೆಲ್‌ಗ‌ಳ ದರವೂ ಹೆಚ್ಚಳ

1-dam

ಬ್ರಹ್ಮಪುತ್ರ ಅಣೆಕಟ್ಟಿಂದ ಭಾರತಕ್ಕೆ ಧಕ್ಕೆ ಆಗದು: ಚೀನ

1-ran

National Anthem Controversy:ಭಾಷಣ ಮಾಡದೆ ಹೋದ ತಮಿಳುನಾಡು ರಾಜ್ಯಪಾಲ

Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ

Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ

Mangaluru: ಬಾಲಕಿಯ ವೀಡಿಯೋ ಮಾಡಿದ್ದ ಯುವಕನಿಗೆ ಜೈಲು

Mangaluru: ಬಾಲಕಿಯ ವೀಡಿಯೋ ಮಾಡಿದ್ದ ಯುವಕನಿಗೆ ಜೈಲು

Belthangady ಶಾರ್ಟ್ ಸರ್ಕ್ಯೂಟ್: ಮನೆ ಬೆಂಕಿಗಾಹುತಿ

Belthangady ಶಾರ್ಟ್ ಸರ್ಕ್ಯೂಟ್: ಮನೆ ಬೆಂಕಿಗಾಹುತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-Y-J

Yashasvi Jaiswal ವಿಶ್ವಾಸ; ನಾವು ಬಲಿಷ್ಠರಾಗಿ ಬರುವೆವು…

1-SA

Test; ಪಾಕಿಸ್ಥಾನಕ್ಕೆ 10 ವಿಕೆಟ್‌ ಸೋಲು :ದಕ್ಷಿಣ ಆಫ್ರಿಕಾ 2-0 ಕ್ಲೀನ್‌ಸ್ವೀಪ್‌

1-aff

Test; ಅಫ್ಘಾನಿಸ್ಥಾನಕ್ಕೆ ಒಲಿಯಿತು 1-0 ಸರಣಿ

mandhana (2)

ODI; ಐರ್ಲೆಂಡ್‌ ಸರಣಿ: ಕೌರ್‌, ರೇಣುಕಾ ಸಿಂಗ್‌ಗೆ ರೆಸ್ಟ್‌

Bumrah’s injury worries Team India: Out of England series

Team India; ಬುಮ್ರಾ ಗಾಯದಿಂದ ಟೀಂ ಇಂಡಿಯಾಗೆ ಆತಂಕ: ಪ್ರಮುಖ ಸರಣಿಯಿಂದ ಔಟ್

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Koppal-Bjp

Overview: ಕೊಪ್ಪಳ ಜಿಲ್ಲಾಸ್ಪತ್ರೆಗೆ ಬಿಜೆಪಿ ಸತ್ಯ ಶೋಧನಾ ತಂಡ ಭೇಟಿ

1-shiv

ಪಟ್ನಾದಲ್ಲಿ ಸುಮಾರು 500 ವರ್ಷಗಳ ಹಿಂದಿನ ದೇಗುಲ ಪತ್ತೆ

1-dee

ಪ್ರಸಾರಕ ಸಂಸ್ಥೆಗಳ ಶುಲ್ಕ ಹೆಚ್ಚಳ: ಚಾನೆಲ್‌ಗ‌ಳ ದರವೂ ಹೆಚ್ಚಳ

1-devvvi

ಕಂದಹಾರ್‌ ಹೈಜಾಕ್‌ ವೇಳೆಯ ಪೈಲಟ್‌ ದೇವಿ ಶರಣ್‌ ನಿವೃತ್ತಿ

1-dam

ಬ್ರಹ್ಮಪುತ್ರ ಅಣೆಕಟ್ಟಿಂದ ಭಾರತಕ್ಕೆ ಧಕ್ಕೆ ಆಗದು: ಚೀನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.