U-20 ಹೈಜಂಪ್:ಪೂಜಾ ರಾಷ್ಟ್ರೀಯ ದಾಖಲೆ
Team Udayavani, Aug 31, 2024, 12:33 AM IST
ಲಿಮಾ (ಪೆರು): ಇಲ್ಲಿ ನಡೆಯುತ್ತಿರುವ 20 ವರ್ಷ ವಯೋಮಿತಿಯ ವಿಶ್ವ ಆ್ಯತ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಭಾರತದ ಪೂಜಾ ಸಿಂಗ್ ನೂತನ ರಾಷ್ಟ್ರೀಯ ದಾಖಲೆಯೊಂದಿಗೆ ಫೈನಲ್ ಪ್ರವೇಶಿಸಿದ್ದಾರೆ. ಅರ್ಹತಾ ಸುತ್ತಿನಲ್ಲಿ 1.83 ಮೀ. ಜಿಗಿತದ ಸಾಧನೆಯೊಂದಿಗೆ ದಾಖಲೆ ನಿರ್ಮಿಸಿರುವ ಅವರು 9ನೇ ಸ್ಥಾನ ಪಡೆದು ಫೈನಲ್ಗೆ ಅರ್ಹತೆ ಪಡೆದರು.
ಹರಿಯಾಣದ ಫತೇಹಾಬಾದ್ ಜಿಲ್ಲೆಯವರಾದ 17 ವರ್ಷದ ಪೂಜಾ ಸಿಂಗ್, ಮಹಿಳೆಯರ ಗ್ರೂಪ್ “ಬಿ’ ಅರ್ಹತಾ ಸುತ್ತಿನಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿದರು. ಕಳೆದ ವರ್ಷ ಕೊರಿಯಾದಲ್ಲಿ ನಡೆದಿದ್ದ ಏಷ್ಯನ್ ಯು-20 ಚಾಂಪಿಯನ್ಶಿಪ್ನಲ್ಲಿ ಅವರು 1.82 ಮೀ. ಸಾಧನೆಯೊಂದಿಗೆ ರಾಷ್ಟ್ರೀಯ ದಾಖಲೆ ಸಹಿತ ಬೆಳ್ಳಿ ಗೆದ್ದಿದ್ದರು. ಈಗ ತಮ್ಮದೇ ದಾಖಲೆಯನ್ನು ಉತ್ತಮಪಡಿಸಿಕೊಂಡರು. ಶನಿವಾರ ಫೈನಲ್ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Duleep Trophy: ಪ್ರಥಮ್ ಸಿಂಗ್, ತಿಲಕ್ ವರ್ಮ ಶತಕ
Dodda Ganesh: ಕೀನ್ಯಾ ಕೋಚ್ ಸ್ಥಾನದಿಂದ ದೊಡ್ಡ ಗಣೇಶ್ ವಜಾ
Pakistan Cricket Board: ಪಾಕ್ ಕ್ರಿಕೆಟ್ ಸ್ಟೇಡಿಯಂ ನವೀಕರಣಕ್ಕೆ ದೊಡ್ಡ ಮೊತ್ತ
Hockey; ಪಾಕ್ ವಿರುದ್ದ ಪ್ರಾಬಲ್ಯ ಮೆರೆದ ಭಾರತ; 2 ಗೋಲು ಬಾರಿಸಿದ ನಾಯಕ ಹರ್ಮನ್
Olympics; ವಿನೇಶ್ ಫೋಗಟ್ ಕ್ರೀಡಾನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಲೇ ಇಲ್ಲ: ಹರೀಶ್ ಸಾಳ್ವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.