U19 Asia Cup: 13 ವರ್ಷದ ವೈಭವ್ ಸ್ಫೋಟಕ ಬ್ಯಾಟಿಂಗ್; ಫೈನಲ್ ಪ್ರವೇಶಿಸಿದ ಭಾರತ
ಶ್ರೀಲಂಕಾ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿದ ಟೀಮ್ ಇಂಡಿಯಾ, ವಿಡಿಯೋ ನೋಡಿ, ಫೈನಲ್‌ನಲ್ಲಿ ಭಾರತ -ಬಾಂಗ್ಲಾದೇಶ ಸೆಣಸಾಟ
Team Udayavani, Dec 6, 2024, 7:35 PM IST
ಶಾರ್ಜಾ: 19 ವರ್ಷದೊಳಗಿನ ಏಷ್ಯಾಕಪ್ (U-19 Asia Cup) ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ 13 ವರ್ಷದ ವೈಭವ್ ಸೂರ್ಯವಂಶಿ ಅಮೋಘ ಬ್ಯಾಟಿಂಗ್ ನೆರವಿನಿಂದ ಶ್ರೀಲಂಕಾ ತಂಡವನ್ನು ಮಣಿಸಿ ಭಾರತ ಫೈನಲ್ ಪ್ರವೇಶಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡವನ್ನು ಭಾರತೀಯ ಬೌಲರ್ಗಳು ಸಂಘಟಿತ ದಾಳಿ ನಡೆಸಿ 46.2 ಓವರ್ ನಲ್ಲಿ 173 ರನ್ಗಳಿಗೆ ನಿಯಂತ್ರಿಸಿ ಭಾರತ ತಂಡವು 174 ರನ್‌ಗಳ ಗುರಿ ಪಡೆಯಿತು. ಈ ಮೊತ್ತ ಬೆನ್ನಟ್ಟಿದ ಭಾರತ ತಂಡವು ಕೇವಲ 21.4 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಗುರಿ ತಲುಪುವುದರೊಂದಿಗೆ ಭಾರತ ತಂಡವು ಏಷ್ಯಾ ಕಪ್‌ನಲ್ಲಿ 8ನೇ ಬಾರಿ ಫೈನಲ್ ಪ್ರವೇಶಿಸಿದೆ.
ಭಾರತದ ದಾಳಿಗೆ ತತ್ತರಿಸಿದ ಲಂಕಾ ಪಡೆ
ಸೆಮಿಫೈನಲ್ನಲ್ಲಿ ಭಾರತ ತಂಡದ ಬೌಲಿಂಗ್ ದಾಳಿಯನ್ನ ಎದುರಿಸಲು ಶ್ರೀಲಂಕಾ ಬೌಲರ್ಗಳು ಪರದಾಡಿದರು. ಕೇವಲ 8 ರನ್ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತು. ನೂರು ರನ್‌ಗಳ ಗಡಿ ದಾಟುವುದು ಅನುಮಾನ ಎನ್ನುವ ಸ್ಥಿತಿಯಲ್ಲಿದ್ದ ಲಂಕಾ ತಂಡಕ್ಕೆ ವಿಕೆಟ್ ಕೀಪರ್ ಶಾರುಜನ್ ಷಣ್ಮುಗನಾಥನ್ ಹಾಗೂ ಲಕ್ಷಿನ್ ಅಭಯ್ ಸಿಂಘೆ 93 ರನ್‌ಗಳ ಜೊತೆಯಾಟ ನಡೆಸಿ ತಂಡದ ಮೊತ್ತ 100ರ ಗಡಿ ದಾಟಿಸಿದರು.
ಅಭಯ್ 110 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ಗಳ ಸಹಿತ 69 ರನ್ಗಳಿಸಿದರೆ, ಶಾರುಜನ್ 78 ಎಸೆತಗಳಲ್ಲಿ 42 ರನ್ಗಳಿಸಿದರು. ಭಾರತದ ಚೇತನ್ ಶರ್ಮಾ 34ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು. ಕಿರಣ್ ಚೋರಮಾಲೆ 32ಕ್ಕೆ 2, ಆಯುಷ್ ಮಹಾತ್ರೆ 37ಕ್ಕೆ 2, ಕನ್ನಡಿಗ ಹಾರ್ದಿಕ್ ರಾಜ್ 1 ವಿಕೆಟ್ ಪಡೆದು ಲಂಕಾ ತಂಡವನ್ನ 46.2 ಓವರ್ಗಳಲ್ಲಿ ಆಲೌಟ್ ಮಾಡಲು ನೆರವಾದರು.
ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ಮತ್ತೆ ಮಿಂಚಿದ ವೈಭವ್ ಸೂರ್ಯವಂಶಿ:
174 ರನ್‌ಗಳ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ ಕಳೆದ ಪಂದ್ಯದಂತೆ ಅಬ್ಬರದ ಆರಂಭ ಪಡೆಯಿತು. ಆಯುಷ್ ಮ್ಹಾತ್ರೆ ಮತ್ತು ವೈಭವ್ ಸೂರ್ಯವಂಶಿ ಮೊದಲ ವಿಕೆಟ್ಗೆ 91 ರನ್‌ಗಳ ಜೊತೆಯಾಟ ನೀಡಿದರು. ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದ 13 ವರ್ಷದ ವೈಭವ್ ಸೂರ್ಯವಂಶಿ ಈ ಪಂದ್ಯದಲ್ಲೂ ಸ್ಫೋಟಕ ಬ್ಯಾಟಿಂಗ್ ನಡೆಸಿ ಕೇವಲ 24 ಎಸೆತಗಳಲ್ಲೇ ಅರ್ಧಶತಕ ಸಿಡಿಸಿದರು. ಒಟ್ಟಾರೆ 36 ಎಸೆತಗಳಲ್ಲಿ 6 ಬೌಂಡರಿ, 5 ಭರ್ಜರಿ ಸಿಕ್ಸರ್ಗಳ ಸಹಿತ 67 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಮತ್ತೊಬ್ಬ ಆರಂಭಿಕ ಆಟಗಾರ ಆಯುಷ್ 28 ಎಸೆತಗಳಲ್ಲಿ 7 ಬೌಂಡರಿ ಸಹಿತ 34ರನ್ಗಳಿಸಿ ಔಟಾದರೆ, ಆ್ಯಂಡ್ರ್ಯೂ ಸಿದ್ಧಾರ್ಥ್ 22 ರನ್ಗಳಿಸಿದರು. ನಾಯಕ ಮೊಹಮ್ಮದ್ ಅಮಾನ್ ಅಜೇಯ 25, ಕನ್ನಡಿಗ ಕಾರ್ತಿಕೇಯ ಅಜೇಯ 11 ರನ್ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.
ಸಂಕ್ಷಿಪ್ತ ಸ್ಕೋರ್:
ಶ್ರೀಲಂಕಾ- 173 ಆಲೌಟ್ (46.2 ಓವರ್)
ಭಾರತ- 175-3 (21.4 ಓವರ್)
ಪಂದ್ಯಶ್ರೇಷ್ಠ: ವೈಭವ್ ಸೂರ್ಯವಂಶಿ
Back to back 50s for Vaibhav Suryavanshi 🌟💎
50 from just 24 balls 💪🏼@rajasthanroyals @JakeLushMcCrum
Vaibhav Sooryavanshi #ACCMensU19AsiaCup pic.twitter.com/Yav5Iy8xz0
— Sanju Samson Fans Page (@SanjuSamsonFP) December 6, 2024
ಪಾಕಿಸ್ತಾನ ಬಗ್ಗು ಬಡಿದ ಬಾಂಗ್ಲಾದೇಶ
ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಪಾಕಿಸ್ತಾನವನ್ನು 7 ವಿಕೆಟ್‌ಗಳಿಂದ ಮಣಿಸಿ ಸತತ 2ನೇ ಬಾರಿಗೆ ಫೈನಲ್ ಪ್ರವೇಶಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 37 ಓವರ್ಗಳಲ್ಲಿ ಕೇವಲ 116 ರನ್ಗಳಿಗೆ ಆಲೌಟ್ ಆಯಿತು. ಮೊಹಮ್ಮದ್ ರಿಯಾಜುಲ್ಲಾ 28, ಫರ್ಹಾನ್ ಯೂಸುಫ್ 32 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಇದರೊಂದಿಗೆ ಭಾರತ -ಬಾಂಗ್ಲಾದೇಶ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಸೆಣಸಾಡಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rohit, Pant, Jaiswal, Gill: ರಣಜಿ ಪುನರಾಗಮನದಲ್ಲಿ ವೈಫಲ್ಯ ಕಂಡ ಟೀಂ ಇಂಡಿಯಾ ಸ್ಟಾರ್ಸ್
INDvsENG: ಯುಜಿ ಚಾಹಲ್ ದಾಖಲೆ ಅಳಿಸಿ ಹೊಸ ದಾಖಲೆ ಬರೆದ ಅರ್ಶದೀಪ್ ಸಿಂಗ್
Ranaji Trophy: ಇಂದಿನಿಂದ ಕರ್ನಾಟಕ-ಪಂಜಾಬ್ ರಣಜಿ
Champions Trophy: ಜೆರ್ಸಿಯಲ್ಲಿ ಪಾಕ್ ಹೆಸರು ಹಾಕಲು ಬಿಸಿಸಿಐ ಒಪ್ಪಿಗೆ
Australian Open: ಸಿನ್ನರ್‌ಗೆ ಬೆನ್ ಶೆಲ್ಟನ್ ಸವಾಲು
MUST WATCH
ಹೊಸ ಸೇರ್ಪಡೆ
Rohit, Pant, Jaiswal, Gill: ರಣಜಿ ಪುನರಾಗಮನದಲ್ಲಿ ವೈಫಲ್ಯ ಕಂಡ ಟೀಂ ಇಂಡಿಯಾ ಸ್ಟಾರ್ಸ್
UV Fusion: ಸ್ವಾಮಿ ವಿವೇಕಾನಂದರ ಕನಸಿನ ರಾಷ್ಟ್ರನಿರ್ಮಾಣದಲ್ಲಿ ಯುವಜನತೆಯ ಪಾತ್ರ
Tumkur: ತುಮುಲ್ ಅಧ್ಯಕರಾಗಿ ಕೈ ಬೆಂಬಲಿತ ಅಭ್ಯರ್ಥಿ ಗೆಲುವು
Tollywood: ಹಾಲಿವುಡ್‌ಗೆ ಜೂ. ಎನ್‌ಟಿಆರ್ ಎಂಟ್ರಿ? ಖ್ಯಾತ ನಿರ್ದೇಶಕ ಹೇಳಿದ್ದೇನು?
Shiva Rajkumar: ಜ.26ಕ್ಕೆ ಶಿವಣ್ಣ ವಾಪಸ್: ಸ್ವಾಗತಕ್ಕೆ ಅದ್ಧೂರಿ ತಯಾರಿ