U19’ಕಿರಿಯರಿಗೆ ಉಜ್ವಲ ಭವಿಷ್ಯ’: ಸೀನಿಯರ್ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಕೆಲವರು
ಇಲ್ಲಿ ತೀವ್ರ ಸ್ಪರ್ಧೆ ಎನ್ನುವುದನ್ನು ಗಮನಿಸಬೇಕು...
Team Udayavani, Feb 13, 2024, 6:20 AM IST
ಬೆನೋನಿ: ಭಾರತದ ಅಂಡರ್-19 ತಂಡ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಕ್ಕೆ ಶರಣಾಗಿ ತೀವ್ರ ನಿರಾಸೆ ಮೂಡಿಸಿದೆ. ಆದರೆ ತಂಡದ ಒಟ್ಟಾರೆ ಸಾಧನೆ ತೃಪ್ತಿಕರ ಎಂಬುದು ಕೋಚ್ ಹೃಷಿಕೇಶ್ ಕಾನಿಟ್ಕರ್ ಅಭಿಪ್ರಾಯ. ಇವರಲ್ಲಿ ಕೆಲವರಾದರೂ ಭಾರತದ ಸೀನಿಯರ್ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದಿದ್ದಾರೆ.
“ಭಾರತದ ಕ್ರಿಕೆಟ್ ಭವಿಷ್ಯ ಖಂಡಿತವಾಗಿಯೂ ಉಜ್ವಲವಾಗಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಗಳೆರಡರಲ್ಲೂ ಪ್ರತಿಭಾನ್ವಿತ ಆಟಗಾರರಿದ್ದಾರೆ. ಪರಿಸ್ಥಿತಿಗೆ ತಕ್ಕಂತೆ ಪ್ರಬುದ್ಧತೆ ತೋರಿದರೆ ಮುಂದೊಂದು ದಿನ ಭಾರತದ ಸೀನಿಯರ್ ತಂಡವನ್ನು ಖಂಡಿತವಾಗಿಯೂ ಪ್ರತಿನಿಧಿಸಲಿದ್ದಾರೆ’ ಎಂಬುದಾಗಿ ಕಾನಿಟ್ಕರ್ ಹೇಳಿದರು.
ನಾಯಕ ಉದಯ್ ಸಹಾರಣ್, ಮುಶೀರ್ ಖಾನ್, ಸಚಿನ್ ಧಾಸ್, ಸೌಮ್ಯಕುಮಾರ್ ಪಾಂಡೆ ಅವರೆಲ್ಲ ಈ ಕೂಟದಲ್ಲಿ ಉತ್ತಮ ಪ್ರದರ್ಶನ ಕಾಯ್ದುಕೊಂಡು ಬಂದಿದ್ದರು.
ಪಂಜಾಬ್ ತಂಡವನ್ನು ಪ್ರತಿನಿಧಿಸುವ ಉದಯ್ ಸಹಾರಣ್ ಕೂಟದಲ್ಲೇ ಸರ್ವಾಧಿಕ 397 ರನ್ ಬಾರಿಸಿದ್ದಾರೆ. ಮುಶೀರ್ ಖಾನ್ ಅವಳಿ ಶತಕದೊಂದಿಗೆ 360 ರನ್ ಪೇರಿಸಿದ್ದಾರೆ. ಸಚಿನ್ ಧಾಸ್ ಫಿನಿಶಿಂಗ್ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ. ಎಡಗೈ ಸ್ಪಿನ್ನರ್ ಪಾಂಡೆ ಅವರದು 18 ವಿಕೆಟ್ ಸಾಧನೆಯಾಗಿದೆ.
ಯಶಸ್ವಿ ಕ್ರಿಕೆಟಿಗರು
ಕಿರಿಯರ ಕ್ರಿಕೆಟ್‌ನಲ್ಲಿ ಯಶಸ್ವಿಯಾಗಿ ಟೀಮ್ ಇಂಡಿಯಾವನ್ನು ಪ್ರತಿನಿಧಿ ಸಿದವರ ದೊಡ್ಡದೊಂದು ಯಾದಿಯೇ ಇದೆ. ಯುವರಾಜ್ ಸಿಂಗ್, ಮೊಹಮ್ಮದ್ ಕೈಫ್, ಸುರೇಶ್ ರೈನಾ, ಶಿಖರ್ ಧವನ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ರವೀಂದ್ರ ಜಡೇಜ, ಕೆ.ಎಲ್. ರಾಹುಲ್, ರಿಷಭ್ ಪಂತ್, ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್ ಇವರಲ್ಲಿ ಪ್ರಮುಖರು.
“ಕಿರಿಯರ ವಿಶ್ವಕಪ್ ಮುಗಿದ ಬಳಿಕ ಒಂದಿಬ್ಬರಾದರೂ ಭಾರತದ ಸೀನಿಯರ್ ತಂಡದಲ್ಲಿ ಅಥವಾ ಐಪಿಎಲ್‌ನಲ್ಲಿ ಆಡುವ ಅವಕಾಶ ಪಡೆಯುತ್ತಾರೆ. ಆದರೆ ಇಲ್ಲಿ ತೀವ್ರ ಸ್ಪರ್ಧೆ ಎನ್ನುವುದನ್ನು ಗಮನಿಸಬೇಕು’ ಎಂಬುದಾಗಿ ಕಾನಿಟ್ಕರ್ ಹೇಳಿದರು.
ಯು-19 ವಿಶ್ವಕಪ್ ತಂಡದಲ್ಲಿ ಭಾರತದ ನಾಲ್ಕು ಆಟಗಾರರು
ಸಂಪ್ರದಾಯದಂತೆ ಐಸಿಸಿ ಅಂಡರ್-19 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಮುಗಿದ ಬೆನ್ನಲ್ಲೇ “ಟೀಮ್ ಆಫ್ ದ ಟೂರ್ನಮೆಂಟ್’ ಪ್ರಕಟಗೊಂಡಿದೆ. ಇದರಲ್ಲಿ ಉದಯ್ ಸಹಾರನ್ ಸೇರಿದಂತೆ ಭಾರತದ ನಾಲ್ವರು ಸ್ಥಾನ ಪಡೆದಿದ್ದಾರೆ.
ಬ್ಯಾಟರ್‌ಗಳಾದ ಮುಶೀರ್ ಖಾನ್, ಸಚಿನ್ ಧಾಸ್ ಮತ್ತು ಸ್ಪಿನ್ನರ್ ಸೌಮ್ಯಕುಮಾರ್ ಪಾಂಡೆ ಇತರ ಮೂವರು. ಚಾಂಪಿಯನ್ ಆಸ್ಟ್ರೇಲಿಯದ ನಾಯಕ ಹ್ಯೂ ವೀಬೆjನ್ ಈ ತಂಡಕ್ಕೂ ನಾಯಕರಾಗಿದ್ದಾರೆ.
ತಂಡ: ಲಾನ್ ಡ್ರೆ ಪ್ರಿಟೋರಿಯಸ್ (ದ.ಆ.), ಹ್ಯಾರಿ ಡಿಕ್ಸನ್ (ಆ), ಮುಶೀರ್ ಖಾನ್ (ಭಾ), ಹ್ಯೂ ವೀಬೆjನ್ (ಆ., ನಾಯಕ), ಉದಯ್ ಸಹಾರಣ್ (ಭಾ), ಸಚಿನ್ ಧಾಸ್ (ಭಾ), ನಥನ್ ಎಡ್ವರ್ಡ್ (ವೆ), ಕಾಲಂ ವಿಡ್ಲರ್ (ಆ), ಉಬೇದ್ ಶಾ (ಪಾ), ಕ್ವೇನ ಡಂಫಕ (ದ.ಆ.), ಸೌಮ್ಯಕುಮಾರ್ ಪಾಂಡೆ (ಭಾ), ಜೇಮಿ ಡಂಕ್ (ಸ್ಕಾ).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
Eden Gardens; ‘ಬಿ’ ಬ್ಲಾಕ್‌ಗೆ ಜೂಲನ್ ಗೋಸ್ವಾಮಿ ಹೆಸರಿಡಲು ನಿರ್ಧಾರ
PCB; ಚಾಂಪಿಯನ್ಸ್ ಟ್ರೋಫಿಗೆ ಅಧಿಕಾರಿಯ ನೇಮಕ
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.