ಟಿ20 ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯ: ನೇಪಾಲ ವನಿತೆಯರು 8 ರನ್ನಿಗೆ ಆಲೌಟ್
ಐಸಿಸಿ ಅಂಡರ್-19 ವನಿತೆಯರು
Team Udayavani, Jun 4, 2022, 11:28 PM IST
ಬಾಂಗಿ (ಮಲೇಶ್ಯ): ಐಸಿಸಿ ಅಂಡರ್-19 ವನಿತೆಯರ ಟಿ20 ವಿಶ್ವಕಪ್ ಅರ್ಹತಾ ಕೂಟದ ಪಂದ್ಯದಲ್ಲಿ ನೇಪಾಲ ವನಿತೆಯರು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ತಂಡದೆದುರು ಕೇವಲ 8 ರನ್ನಿಗೆ ಆಲೌಟಾಗಿದ್ದಾರೆ.
ಈ ಕೂಟ ಇದೇ ಮೊದಲ ಬಾರಿ ನಡೆಯುತ್ತಿದೆ. ನೇಪಾಲ, ಯುಎಇ, ಥಾಯ್ಲೆಂಡ್, ಭೂತಾನ್ ಮತ್ತು ಕತಾರ್ ಈ ಅರ್ಹತಾ ಕೂಟದಲ್ಲಿ ಭಾಗವಹಿಸುತ್ತಿದೆ.
ವಿಜೇತರು 2023ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಉದ್ಘಾಟನ ಅಂಡರ್-19 ವನಿತೆಯರ ಟಿ20 ವಿಶ್ವಕಪ್‌ನಲ್ಲಿ ಸ್ಪರ್ಧಿಸಲು ಅರ್ಹತೆ ಗಳಿಸಲಿದ್ದಾರೆ.
ಎರಡೂ ತಂಡಗಳ ಯಾವುದೇ ಆಟಗಾರ ಎರಡಂಕೆಯ ಮೊತ್ತ ಗಳಿಸುವ ಅವಕಾಶವೇ ಇರಲಿಲ್ಲ. ಯುಎಇಯ ತೀರ್ಥ ಸತೀಶ್ ಅಜೇಯ 4 ರನ್ ಗಳಿಸಿರುವುದು ತಂಡದ ಗರಿಷ್ಠ ಮೊತ್ತವಾಗಿತ್ತು.
ನೇಪಾಲದ ಆರು ಆಟಗಾರ್ತಿಯರು ರನ್ ಗಳಿಸಲು ಒದ್ದಾಡಿದ್ದರು. ಸ್ನೇಹಾ ಮಹಾರಾಜ್ ಅವರ 3 ರನ್ ಗರಿಷ್ಠ ಮೊತ್ತವಾಗಿತ್ತು.
ಯುಎಇ ಪರ ಆಫ್ ಸ್ಪಿನ್ನರ್ ಮಹಿಕಾ ಗೌರ್ ತನ್ನ 4 ಓವರ್‌ಗಳ ದಾಳಿಯಲ್ಲಿ 2 ಮೇಡನ್ ಮಾಡಿದ್ದಲ್ಲದೇ ಕೇವಲ 2 ರನ್ ನೀಡಿ 5 ವಿಕೆಟ್ ಹಾರಿಸಿದ್ದರು.
ಇನ್ನೋರ್ವ ಬೌಲರ್ ಇಂದುಜಾ ನಂದಕುಮಾರ್ 6 ರನ್ನಿಗೆ 3 ವಿಕೆಟ್ ಪಡೆದಿದ್ದರು. ನೇಪಾಲ ಇನ್ನಿಂಗ್ಸ್ ಕೇವಲ 8.1 ಓವರ್‌ಗಳಲ್ಲಿ ಮುಗಿದಿದ್ದರೆ ಯುಎಇ ಕೇವಲ ಏಳು ಎಸೆತಗಳಲ್ಲಿ ಗೆಲ್ಲಲು ಅಗತ್ಯವಿರುವ ರನ್ ಗಳಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ
BBK11: ಇವತ್ತು ಬಿಗ್‌ಬಾಸ್ ಮನೆಯಿಂದ ಆಚೆ ಬರುವುದು ಇವರೇ ನೋಡಿ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.